ನಿತ್ಯ ದುಡಿದರೇ ಅನ್ನ, ಒಂದು ಹೊತ್ತು ಕೆಲಸ ಬಿಟ್ಟರೂ ಅಂದು ಉಪವಾಸವೆಂಬ ಪರಿಸ್ಥಿತಿ. ಹೀಗಿರುವಾಗ ಬಿಸಿಲಲ್ಲಿ ಅದೂ ಇಳಿ ವಯಸ್ಸಿನಲ್ಲಿ ಸೈಕಲ್ ಏರಿ ಹೋಗುವಷ್ಟು ಶಕ್ತಿಯೂ ಇಲ್ಲ, ಹೀಗಾಗಿ ಈ ಅಜ್ಜ ಒಂದು ಅದ್ಭುತ ಉಪಾಯ ಮಾಡಿದ್ದಾರೆ. ಜನರು ಈ ಬಿಸಿಲಿನಲ್ಲಿ ಕಾರಿನಲ್ಲಿ ಓಡಾಡಲೂ ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ಈ ಅಜ್ಜ ತುಂಬಾ ತಲೆ ಖರ್ಚು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನು ಸಾಮಾನ್ಯರು ಊಹಿಸಲೂ ಅಸಾಧ್ಯ, ಕೆಲವು ಮರದ ಕಂಬಗಳನ್ನು ಬಳಸಿಕೊಂಡು ಬಿಸಿಲು ಸೈಕಲ್ಗೆ ತಾಗದಂತೆ ಮಾಡಿದ್ದಾರೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸುಡುವ ಬಿಸಿಲಿನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸೈಕಲ್ ತುಳಿಯುವುದನ್ನು ನಾವು ನೋಡಬಹುದು.
ಸದ್ಯ ಬಿರು ಬಿಸಿಲಿನಲ್ಲಿ ಸೈಕಲ್ ತುಳಿಯುವುದೇ ಸುಸ್ತು, ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಆ ಸೈಕಲ್ ಸುತ್ತಲೂ ಮರದ ಚೌಕಟ್ಟನ್ನು ನಿರ್ಮಿಸಿದ್ದಾರೆ, ಅದರ ಅಡಿಯಲ್ಲಿ ಸಣ್ಣ ಟೈರ್ಗಳನ್ನು ಅಳವಡಿಸಲಾಗಿದೆ. ಇದರಿಂದ ವ್ಯಕ್ತಿಗೆ ಸೈಕಲ್ ಸವಾರಿ ಮಾಡುವಾಗ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ.
ಮತ್ತಷ್ಟು ಓದಿ: Viral Video: ಎಲ್ಲಿಂದ ಬಂದರೋ ಎಲ್ಲಿಗೆ ಹೊರಟಿರುವರೋ ಈ ಅಜ್ಜಿ; ನಿಮಗೇನಾದರೂ ಗೊತ್ತೆ?
ಆ ಮರದ ಚೌಕಟ್ಟಿಗೆ ಬಟ್ಟೆಯನ್ನು ಹಾಕಿದ್ದಾರೆ, ಇದು ನಡೆಯುವಾಗ ಸೂರ್ಯನ ಶಾಖದಿಂದ ಪರಿಹಾರ ನೀಡುತ್ತದೆ. ಇದೇ ಕಾರಣಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಇಲ್ಲಿಯವರೆಗೂ 31 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿದ್ದು, 2.2 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಕಷ್ಟ ಬಂದಾಗ ಆ ದಾರಿಯೇ ಸರಿ ಇಲ್ಲ ಎಂದು ಬಿಡುವುದಲ್ಲ, ಕಷ್ಟವನ್ನು ಮೆಟ್ಟಿ ಮುಂದೆ ಸಾಗಬೇಕು, ಆಲೋಚಿಸಿದರೆ ಏನಾದರೂ ಮಾರ್ಗ ಸಿಗುವುದು ಎಂಬುದು ಸಾಬೀತಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ