ನಾಯೀಮರಿ ನಾಯೀಮರಿ ಎಲ್ಲಿಗೆ ಹೊರಟಿದ್ದೆ? ನಿಮ್ಮ ಶುಕ್ರವಾರವನ್ನು ಮುದಗೊಳಿಸುವ ಈ ವಿಡಿಯೋ

| Updated By: ಶ್ರೀದೇವಿ ಕಳಸದ

Updated on: Jan 20, 2023 | 11:07 AM

Puppy : ಅಬ್ಬಾ ಇದೊಂದು ದಿನ ಕಳೆದರೆ ಸಾಕು. ವೀಕೆಂಡ್​ನಲ್ಲಿ ಆರಾಮಾಗಿರಬಹುದು ಎಂದು ಲೆಕ್ಕಾಚಾರ ಹಾಕುತ್ತ ಕೆಲಸ ಮಾಡುತ್ತಿರಬಹುದು ನೀವೆಲ್ಲ. ಸಂಜೆತನಕ ನಿಮಗೆ ಶಕ್ತಿ ತುಂಬಲು ಈ ಪುಟ್ಟನಾಯಿ ರೈಲಿನಲ್ಲಿ ಬರುತ್ತಿದೆ.

ನಾಯೀಮರಿ ನಾಯೀಮರಿ ಎಲ್ಲಿಗೆ ಹೊರಟಿದ್ದೆ? ನಿಮ್ಮ ಶುಕ್ರವಾರವನ್ನು ಮುದಗೊಳಿಸುವ ಈ ವಿಡಿಯೋ
ಎಲ್ಲಿಗೆ ಹೊರಟಿದ್ದೀನಿ?
Follow us on

Viral Video : ಈ ಚಳಿಗೆ ಎಲ್ಲ ಕೆಲಸವನ್ನೂ ಪಕ್ಕಕ್ಕೆ ಸರಿಸಿ ಬೆಚ್ಚಗೆ ನಿದ್ದೆ ಮಾಡಬೇಕು ಎಂದು ಯಾರಿಗೆ ಅನ್ನಿಸುವುದಿಲ್ಲ? ಏನು ಮಾಡುವುದು ಎಲ್ಲರಿಗೂ ಆ ಭಾಗ್ಯ ಬೇಕಲ್ಲ! ಪುಟ್ಟ ನಾಯಿಮರಿಯಾಗಿದ್ದರೆ ಸಾಧ್ಯವಾಗುತ್ತಿತ್ತೇನೋ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಲ್ಯಾಬ್ರಡಾರ್​ ನಾಯಿಮರಿ ಹೀಗೆ ಬೆಚ್ಚಗೆ ಬ್ಯಾಗಿನಲ್ಲಿ ಕುಳಿತು, ನಿದ್ದೆಯನ್ನೂ ಮಾಡುತ್ತ ರೈಲಿನಲ್ಲಿ ಪ್ರಯಾಣಿಸುತ್ತಿದೆ. ಯಾವ ಊರಿಗೆ ಹೋಗುತ್ತಿದೆಯೋ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಡುವೆ ಎಚ್ಚರಗೊಂಡು ಕುತೂಹಲದಿಂದ ತನ್ನ ಸುತ್ತಮುತ್ತನ್ನು ಗಮನಿಸುತ್ತದೆ. ತಾನೆಲ್ಲಿಗೆ ಹೊರಟಿದ್ದೇನೆ ಎಂದು ಅದಕ್ಕೂ ಗೊತ್ತಿಲ್ಲ. ತನ್ನನ್ನು ಸಾಕಿದವರ ಮಡಿಲೊಳಗೆ ಬೆಚ್ಚಗೆ ಕುಳಿತುಕೊಳ್ಳುವುದಷ್ಟೇ ತನ್ನ ಕೆಲಸ, ಊರ ಉಸಾಬರಿ ಯಾಕೆ ಬೇಕು ಎಂಬಂತಿದೆ.

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಜನವರಿ 6ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 21 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ನಿಜವಾದ ಪರಿಶುದ್ಧ ಪ್ರೀತಿ ಎಂದಿದ್ದಾರೆ ಅನೇಕರು. ನಾಯಿಗಳಿಗೂ ಸಂಭಾಷಿಸಿ ಗೊತ್ತು, ಆದರೆ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದಿದ್ದಾರೆ ಒಬ್ಬರು. ಕಣ್ಣುಗಳಂತೂ ಎಂಥಾ ಮುದ್ದಾಗಿವೆ, ನನಗೆ ಈ ನಾಯಿಮರಿ ಕೊಟ್ಟುಬಿಡಿ ಎಂದಿದ್ದಾರೆ ಮತ್ತೊಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:05 am, Fri, 20 January 23