Japan: ಜಪಾನಿಗರು ಆಧುನಿಕ ಕಾಲದಲ್ಲಿ ಒಂದಿಲ್ಲಾ ಒಂದು ಆವಿಷ್ಕಾರ ಮಾಡುತ್ತಲೇ ಇರುತ್ತಾರೆ. ನಿತ್ಯಸಂಗತಿಗಳಿರಬಹುದು, ಜೀವನಶೈಲಿ ಇರಬಹುದು ಹೀಗೆ ಯಾವ ವಿಷಯಗಳಿಗೂ ಪರ್ಯಾಯವಾಗಿ ಉಪಾಯಗಳನ್ನು ಕಂಡುಹಿಡಿಯುತ್ತಲೇ ಇರುತ್ತಾರೆ. ಇದೀಗ ಜಪಾನಿಗರು ರೂಪಿಸಿರುವ ಅಂಡರ್ಗ್ರೌಂಡ್ ಸೈಕಲ್ ಪಾರ್ಕಿಂಗ್ ವಿಡಿಯೋ ವೈರಲ್ (Viral) ಆಗುತ್ತಿದೆ. ರೆಡ್ಡಿಟ್ನಲ್ಲಿ ಹಂಚಿಕೊಂಡ ಈ ವಿಡಿಯೋದಡಿ ಸಾಕಷ್ಟು ಜನರು ಚರ್ಚಿಸುತ್ತಿದ್ದಾರೆ. 5 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 2,600 ಜನರು ಲೈಕ್ ಮಾಡಿದ್ದು, ಸುಮಾರು 100 ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಲೋಕಲ್ ಟ್ರೇನ್ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ…
ಪಾರ್ಕಿಂಗ್ ಮತ್ತು ಬೈಕ್, ಸೈಕಲ್ ಕಳ್ಳರ ಸಮಸ್ಯೆ ಹೇಳತೀರದು. ನೆದರ್ಲ್ಯಾಂಡ್ನ ಜನರು ತಮ್ಮ ಸೈಕಲ್ ಮತ್ತು ಬೈಕುಗಳಿಗೆ ಸರಪಳಿ ಮತ್ತಿತರೇ ವಸ್ತುಗಳನ್ನು ಕಟ್ಟಿರುತ್ತಾರೆ. ಸವಾರಿ ಮಾಡುವಾಗ ಅಡೆತಡೆಯನ್ನು ಎದುರಿಸಿ ವಾಹನ ಅಥವಾ ಸೈಕಲ್ಗಳನ್ನು ತಳ್ಳಿಕೊಂಡೇ ಮನೆ ಸೇರುತ್ತಾರೆ ಎಂದಿದ್ದಾರೆ ಒಬ್ಬರು.
Underground bicycle parking in Japan.
by u/Difficult_Squirrel65 in Damnthatsinteresting
ಈ ಸ್ಥಳದಲ್ಲಿ ಒಂದು ಸೈಕಲ್ ಪಾರ್ಕಿಂಗ್ಗೆ ಒಂದು ಗಂಟೆಗೆ ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಕೇಳಿದ್ದಾರೆ ಒಬ್ಬರು. ಇದರ ಬದಲಿಗೆ ಸುಮಾರು 80 ನಿರಾಶ್ರಿತರಿಗೆ ವಾಸಿಸಲು ಅನುಕೂಲ ಮಾಡಿಕೊಡಬಹುದಾಗಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ. ಏನು ಮಾಡುವುದು ಅವರು ಏನೇ ಮಾಡಿದರೂ ಭವಿಷ್ಯದಲ್ಲಿ ಜೀವಿಸುತ್ತಾರೆ, ವಾಸ್ತವದ ಬಗ್ಗೆ ಯೋಚಿಸುವುದೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ವೇಟರ್ನಿಂದ ಇನ್ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ
ಈ ಅಂಡರ್ಗ್ರೌಂಡ್ಒಳಗೆ ಯಾರಾದರೂ ಬಿದ್ದರೆ ಏನು ಗತಿಯಾಗಬಹುದು ಯೋಚಿಸಿ ಎಂದಿದ್ದಾರೆ ಮತ್ತೊಬ್ಬರು. ಬೇರೆ ಬೇರೆ ಆಕಾರದ ಬೈಕ್ಗಳಿಗೆ ಇದು ಹೇಗೆ ಸರಿಹೋಗುತ್ತದೆ? ಎಂದು ಕೇಳಿದ್ದಾರೆ ಇನ್ನೊಬ್ಬರು. ಆಮ್ಸ್ಟರ್ಡ್ಯಾಮ್ನಲ್ಲಿ ಇದನ್ನು ಮಾಡಿನೋಡಿ, ಒಬ್ಬೊಬ್ಬರು ತಮ್ಮ ಸೈಕಲ್ ಅಥವಾ ಬೈಕ್ ತೆಗೆದುಕೊಳ್ಳಲು 5 ಗಂಟೆ ಕಾಯಬೇಕಾಗುತ್ತದೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ