Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್

ವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತು ವಿಮಾನವೇರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಮಾನ ಪ್ರಯಾಣ ಮಾಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.

Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್
ಕ್ಯೂನಲ್ಲಿ ನಿಂತ ಸಚಿವ ನಿತಿನ್ ಗಡ್ಕರಿ
Updated By: ಸುಷ್ಮಾ ಚಕ್ರೆ

Updated on: Oct 13, 2021 | 12:11 PM

ನವದೆಹಲಿ: ಬಹುತೇಕ ರಾಜಕಾರಣಿಗಳು ವೈಭವದ ಜೀವನ ನಡೆಸುತ್ತಾರೆ. ಸೆಕ್ಯುರಿಟಿಗಳು, ಮನೆಯಲ್ಲಿ ಕೈಗೊಬ್ಬ ಕಾಲಿಗೊಬ್ಬ ಆಳು, ಓಡಾಡಲು ಐಷಾರಾಮಿ ಕಾರುಗಳು ಹೀಗೆ ಎಲ್ಲ ಸೌಲಭ್ಯಗಳೂ ಇರುತ್ತವೆ. ಆದರೆ, ಕೆಲವು ರಾಜಕಾರಣಿಗಳು ಮಾತ್ರ ಇದಕ್ಕೆ ಹೊರತಾಗಿರುತ್ತಾರೆ. ಎಷ್ಟೇ ಅಧಿಕಾರದಲ್ಲಿದ್ದರೂ ಸರಳ ಜೀವನ ನಡೆಸುವವರು ಕೂಡ ಇದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಜನಸಾಮಾನ್ಯರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಕಷ್ಟು ಹಣ, ಅಧಿಕಾರವಿದ್ದರೂ ಸರಳವಾದ ವ್ಯಕ್ತಿತ್ವ ಹೊಂದಿರುವ ನಿತಿನ್ ಗಡ್ಕರಿ ಅವರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತು ವಿಮಾನವೇರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಮಾನ ಪ್ರಯಾಣ ಮಾಡಿದ್ದಾರೆ. ಇಂಡಿಗೋ ವಿಮಾನ ಹತ್ತುವಾಗ ಜನಸಾಮಾನ್ಯರ ಜೊತೆ ಕ್ಯೂನಲ್ಲಿ ನಿಂತಿದ್ದ ಅವರ ಫೋಟೋಗಳು, ವಿಡಿಯೋ ವೈರಲ್ ಆಗಿವೆ.

ಟ್ವಿಟ್ಟರ್​ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ವಿಮಾನವನ್ನು ಹತ್ತಲು ಸಾಮಾನ್ಯರಂತೆ ಕ್ಯೂನಲ್ಲಿ ನಿಂತುಕೊಂಡಿದ್ದ ವಿಡಿಯೋ ಎಂದು ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್​ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!

Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!