ಝೌಲಿ; ಜಗತ್ತಿನಲ್ಲಿಯೇ ಇದು ಅತ್ಯಂತ ಕಠಿಣ, ಅಸಾಧಾರಣವಾದ ನೃತ್ಯ ಪ್ರಕಾರ

| Updated By: ಶ್ರೀದೇವಿ ಕಳಸದ

Updated on: Jan 13, 2023 | 5:35 PM

African Dance : ಗುರೋ ಸಂಸ್ಕೃತಿಯಲ್ಲಿ ಶುಭಕಾರ್ಯ ಮತ್ತು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಈ ನೃತ್ಯ ಪ್ರದರ್ಶಿಸಲಾಗುತ್ತದೆ. ಇದು ಅತ್ಯಂತ ಸಂಕೀರ್ಣವಾದ ಪಶ್ಚಿಮ ಆಫ್ರಿಕಾದ ಬುಡಕಟ್ಟು ನೃತ್ಯಪ್ರಕಾರ. ನೋಡಿ ವಿಡಿಯೋ.

ಝೌಲಿ; ಜಗತ್ತಿನಲ್ಲಿಯೇ ಇದು ಅತ್ಯಂತ ಕಠಿಣ, ಅಸಾಧಾರಣವಾದ ನೃತ್ಯ ಪ್ರಕಾರ
ಪಶ್ಚಿಮ ಆಫ್ರಿಕದ ಗುರೋ ಜನಾಂಗದ ಝೌಲಿ ನೃತ್ಯ
Follow us on

Viral : ಝೌಲಿ ಈ ನೃತ್ಯ ಪ್ರಕಾರವು ಅತ್ಯಂತ ಚಮತ್ಕಾರಿಕ ಪ್ರಸ್ತುತಿಯಿಂದ ಕೂಡಿರುವ ಪ್ರದರ್ಶನ. ಜಗತ್ತಿನಲ್ಲಿಯೇ ಅತ್ಯಂತ ಕಠಿಣವಾದ ನೃತ್ಯ ಪ್ರಕಾರವೆಂದಾಗ ಸಾಮಾನ್ಯವಾಗಿ ಕಣ್ಣಮುಂದೆ ಬರುವುದು ಬ್ಯಾಲೆ ಅಥವಾ ಆಕ್ರೋ. ಆದರೆ ಇವೆರಡಕ್ಕಿಂತ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್​ನ ಗುರೋ ಬುಡಕಟ್ಟು ಜನಾಂಗವು ಪ್ರದರ್ಶಿಸುವ ಈ ಸಾಂಪ್ರದಾಯಿಕ ನೃತ್ಯ ಝೌಲಿ ಅಸಾಧಾರಣವಾದ ಪ್ರಕಾರ. ನೋಡಿ ವಿಡಿಯೋ. ಪರವಶಗೊಳಿಸದೇ ಇರದು.

ಇದನ್ನೂ ಓದಿ : ‘ಮೂಡ್​ ಬನಾಲಿಯಾ’ ಅಮೃತಾ ಫಡ್ನವೀಸ್​ ವಿಡಿಯೋ ವೈರಲ್

ಮದುವೆ, ಶುಭಕಾರ್ಯ, ದೀಕ್ಷೆ ಮತ್ತು ಅಂತ್ಯಕ್ರಿಯೆಯಂಥ ಸಂದರ್ಭದಲ್ಲಿ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಇದು ಅತ್ಯಂತ ಸಂಕೀರ್ಣವಾದಂಥ ನೃತ್ಯ ಎಂದು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಕಲಾವಿದರ ಹೆಜ್ಜೆಗಳ ಚಲನೆ ಅಷ್ಟೊಂದು ವಿಸ್ಮಯಕಾರಿಯಾಗಿವೆ. ಸಾಮಾನ್ಯವಾಗಿ ಈ ನೃತ್ಯವನ್ನು ಪುರುಷರು ಗುಂಪಿನಲ್ಲಿ ಪ್ರದರ್ಶಿಸುತ್ತಾರೆ. ಪ್ರಾಣಿ, ಪಕ್ಷಿಗಳ ಮರದ ಮುಖವಾಡ ಮತ್ತು ಚಿಪ್ಪು, ಗಂಟೆಗಳಿಂದ ಅಲಂಕರಿಸಿದ ವೇಷಭೂಷಣಗಳನ್ನು ಧರಿಸುತ್ತಾರೆ. ಈ ಎಲ್ಲ ವಿನ್ಯಾಸಗಳಿಗೂ ಅವುಗಳದೇ ಆದ ಅರ್ಥಗಳಿವೆ.

ಇದನ್ನೂ ಓದಿ : ವಧುವನ್ನು ಎತ್ತಿಕೊಂಡು ಮಂಟಪದಿಂದ ಇಳಿಯುತ್ತಿರುವಾಗ ಆಯತಪ್ಪಿ ಬಿದ್ದ ವರನ ವಿಡಿಯೋ ವೈರಲ್

ಗುರೋ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಈ ಝೌಲಿ ನೃತ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವುದೇ ಈ ಜನಾಂಗದ ಉದ್ದೇಶ. ಅದಕ್ಕಾಗಿ ಕಠಿಣವಾದ ತರಬೇತಿಗೆ ನೃತ್ಯಗಾರರನ್ನು ಒಳಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿ, ನೃತ್ಯ ಮತ್ತು ಸಮಕಾಲೀನ ಕಲಾಭಿವ್ಯಕ್ತಿಯಲ್ಲಿ ಈ ನೃತ್ಯಪ್ರಕಾರವನ್ನು ಅಳವಡಿಸಿಕೊಳ್ಳಾಗುತ್ತಿದೆ. ಗುರೋ ಜನಾಂಗದ ಸಂಸ್ಕೃತಿ ಇತಿಹಾಸದ ಬಗ್ಗೆ ಆಸಕ್ತರಿಗೆ ಕಲಿಸಲು ಶೈಕ್ಷಣಿಕವಾಗಿಯೂ ಅಳವಡಿಸುವ ಪ್ರಯತ್ನಗಳೂ ಯಶಸ್ವಿಯಾಗಿ ನಡೆಯುತ್ತಿವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:25 pm, Fri, 13 January 23