ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡ್ಗೆ ನೇತಾಡಿದ ತೆಲಂಗಾಣದ ವ್ಯಕ್ತಿಗೆ ‘ಬಹುಮಾನ’ ನೀಡಿದ ಪೊಲೀಸರು
Telangana : ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ ಈತ ಶಪಥ ಹೂಡಿದಂತೆ ನೇತಾಡಲು ಶುರುಮಾಡಿದ್ದಾನೆ. ಆಮೇಲೆ?
Viral Video : ಯಾಕೆ ಕುಡಿಯುತ್ತಾರೆ, ಕುಡಿದ ಮತ್ತಿನಲ್ಲಿ ಹೀಗೆಲ್ಲ ಯಾಕೆ ಮಾಡುತ್ತಾರೆ, ಹೀಗೆಲ್ಲ ಮಾಡುವುದರಿಂದ ಅವರಿಗೇನು ದಕ್ಕುತ್ತದೆ, ಕುಡಿತಕ್ಕೆ ತಳ್ಳಿದ ಪರಿಸ್ಥಿತಿ ಏನು? ಇದರಿಂದ ಅವರನ್ನು ಹೊರತರುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟು ನಮಗೀಗ ವ್ಯವಧಾನ ಇಲ್ಲ. ಆದರೆ ಘಟಿಸುವುದನ್ನು ನಿಂತುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಮಾತ್ರ ಸಾಕಷ್ಟು ಸಮಯವಿದೆ, ಹಾಗೆಯೇ ಅಂದಂದಿಗೆ ಚರ್ಚಿಸಿ ಮಂಗಳ ಹಾಡಲೂ. ಮತ್ತಿದನ್ನು ಓದಲು ನಿಮಗೂ ಈಗ ಸ್ವಲ್ಪ ಸಮಯವಿದೆ ಎಂದು ಭಾವಿಸುತ್ತಾ…
This is the Situation in #Siddipet
ಇದನ್ನೂ ಓದಿMr.@trsharish Do you have an Answer?@BRSparty #KCRFailedTelangana pic.twitter.com/u5yzfRv5FD
— Maruthi (@Maruthi0305) January 11, 2023
ನೋಡಿ ತೆಲಂಗಾಣದ ಈ ವ್ಯಕ್ತಿ ಹೀಗೆ ಜಾಹೀರಾತು ಬೋರ್ಡಿಗೆ ಜೀಕುತ್ತ ನಿಂತಿದ್ದಾನೆ. ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ… ಶಪಥ ಹೂಡಿದಂತೆ ಹೀಗೆ ನೇತಾಡುತ್ತಿದ್ದಾನೆ. ಕೊನೆಗೆ ಅವನನ್ನು ಇಳಿಸಲು ಉಪಾಯ ಮಾಡಿದ್ದು ಒಂದೆಡೆ ಆದರೆ, ಅವ ಹೀಗೆ ಎತ್ತರದಲ್ಲಿ ಜೀಕುತ್ತ ನಿಂತಿದ್ದಕ್ಕೆ ಪೊಲೀಸರು ಬಹುಮಾನವನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್
ಹೌದು ಬಹುಮಾನ! ಹೀಗೆ ನೇತಾಡಿ ಇವ ಸಮಾಧಾನ ಮಾಡಿಕೊಂಡ. ಆದರೆ ತೊಂದರೆ ಆಗಿದ್ದು, ಆತಂಕ ಆಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದ್ದು ಸಾರ್ವಜನಿಕರಿಗೆ. ಹಾಗಾಗಿ ಇವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ಧಾರೆ. ಅಂತೂ ಬುಧವಾರದಂದು ನಡೆದ ಈ ಘಟನೆಯ ವಿಡಿಯೋ ಗುರುವಾರದಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ಜಗತ್ತೇ ತನ್ನೆಡೆ ಹೊರಳುವಂತೆ ಸಾಹಸ ಮಾಡಿದ್ದಾನೆ ಈತ!
ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಕೊನೆಗೆ ಉಪಾಯದಿಂದ ಮತ್ತು ಸುರಕ್ಷಿತವಾಗಿ ಅವನನ್ನು ಕೆಳಗಿಳಿಸಿದ ಪೊಲೀಸರು ಅವನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆಗೆ ಕಳಿಸುವಲ್ಲಿ ಈ ಘಟನೆಯನ್ನು ಸಂಪನ್ನಗೊಳಿಸಿದ್ದಾರೆ. ಹಾಂ ಬಹುಮಾನ? ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕೆ ಇವನ ವಿರುದ್ಧ ಸಿದ್ಧೀಪೇಟೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:22 pm, Fri, 13 January 23