Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫುಟ್ಬಾಲ್​ ಆಟಗಾರ್ತಿ ಈಗ ಫುಡ್ ಡೆಲಿವರಿ ಏಜೆಂಟ್

Zomato Delivery Agent : ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಪೊಲಾಮಿ ಕುಟುಂಬ ನಿರ್ವಹಣೆಗಾಗಿ ಈ ಕೆಲಸ ಮಾಡುತ್ತಿದ್ದಾರೆ. ವಾಪಾಸು ಇವರು ಫುಟ್​ಬಾಲ್​ ಕ್ಷೇತ್ರಕ್ಕೆ ಬರಲು ರಾಷ್ಟ್ರೀಯ ಮಾಧ್ಯಮಗಳು ಸಹಾಯ ಮಾಡಬೇಕಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫುಟ್ಬಾಲ್​ ಆಟಗಾರ್ತಿ ಈಗ ಫುಡ್ ಡೆಲಿವರಿ ಏಜೆಂಟ್
ಫುಟ್​ಬಾಲ್​ ಕ್ರೀಡಾಪಟು ಆಗಿದ್ದ ಮತ್ತೀಗ ಝೊಮ್ಯಾಟೋ ಡೆಲಿವರಿ ಏಜೆಂಟ್ ಆಗಿರುವ ಪೊಲಾಮಿ ಅಧಿಕಾರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 12, 2023 | 6:24 PM

Viral Video : ಕೊರೊನಾ ಮತ್ತು ನಂತರದ ಅವಧಿಯಲ್ಲಿ ಎಲ್ಲವೂ ಅಯೋಮಯವಾಗಿ ಹೋಗಿದೆ. ಪರಿಣಾಮವನ್ನೂ ಎಲ್ಲರೂ ಒಂದಿಲ್ಲಾ ಒಂದು ರೀತಿಯಲ್ಲಿ ಅನುಭವಿಸುತ್ತಿದ್ದೇವೆ. ಜೀವನ ನಡೆಯಬೇಕೆಂದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎನ್ನುವ ಸೂತ್ರದೊಂದಿಗೆ ಸಾಗುತ್ತಿದ್ದೇವೆ. ಹಿಂದೆ ಏನಾಗಿದ್ದೆವು ಎನ್ನುವುದಕ್ಕಿಂತ ನಾಳೆ ಏನಾಗಬೇಕೆಂದುಕೊಂಡಿದ್ದೆವು ಎನ್ನುವುದಕ್ಕಿಂತ ಇಂದು ಹೇಗಿರಬೇಕು ಎನ್ನುವುದಷ್ಟೇ ಮುಖ್ಯ ಎಂಬರ್ಥದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಪ್ರತಿಭೆಗಳಿಗೆ, ಅದರಲ್ಲೂ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಭವಿಷ್ಯವನ್ನು ಅಂದುಕೊಂಡಂತೆ ರೂಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಭಾರತ ಮೂಲದ ಕ್ರೀಡಾಪಟುಗಳು ಈ ವಿಷಯವಾಗಿ ಹೆಚ್ಚು ಕಷ್ಟವನ್ನು ಅನುಭವಿಸುತ್ತಾರೆ.

ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫುಟ್ಬಾಲ್​ ಆಟಗಾರ್ತಿ. ಆದರೆ ಸದ್ಯ ಕುಟುಂಬ ನಿರ್ವಹಣೆಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಕೆಯ ಹೆಸರು ಪೊಲಾಮಿ ಅಧಿಕಾರಿ. ಫುಡ್​ ಡೆಲಿವರಿಗೆಂದು ಗ್ರಾಹಕರ ಮನೆಗೆ ಹೋದಾಗ ಇವರ ಗುರುತು ಹಿಡಿದ ಕೊಲ್ಕೊತ್ತಾದ ಮಂದಿ ಇವರನ್ನು ಮಾತನಾಡಿಸಿದ್ದಾರೆ. ಇವರ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡು ವಿಡಿಯೋ ಮಾಡಿದ್ದಾರೆ. ಸಂಜುಕ್ತಾ ಚೌಧರಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಹೇಗಾದರೂ ಮಾಡಿ ಈಕೆ ಮತ್ತೆ ಫುಟ್​ಬಾಲ್ ಕ್ಷೇತ್ರದಲ್ಲಿ ಸಾಧನೆ ಮುಂದುವರಿಸಬೇಕು. ಅದಕ್ಕೆ ಆಸಕ್ತರು ಸಹಾಯ ಮಾಡಬೇಕು ಎಂಬ ಕೋರಿಕೆ ನೆಟ್​ಮಂದಿಯದಾಗಿದೆ.

ಇದನ್ನೂ ಓದಿ : ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!

ಪೊಲಾಮಿ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಚಾರುಚಂದ್ರ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಪೊಲಾಮಿ ಫುಟ್​ಬಾಲ್​ನೆಡೆ ಆಕರ್ಷಿತರಾದರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮಟ್ಟಿಗೆ ಬೆಳೆದರು. ಇವರ ಅಕ್ಕ, ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಕೊರೊನಾ ಸ್ಥಿತ್ಯಂತರ ಮತ್ತು ಕೌಟುಂಬಿಕ ನಿರ್ವಹಣೆಯ ಜವಾಬ್ದಾರಿಯಿಂದಾಗಿ ಇವರು ಝೊಮ್ಯಾಟೋ ಕಂಪೆನಿಯನ್ನು ಸೇರಬೇಕಾಯಿತು. ಸದ್ಯ ಇವರು ದಿನಕ್ಕೆ ರೂ. 300-400 ಗಳಿಸುತ್ತಿದ್ದಾರೆ. ಆದರೆ, ಫುಟ್​ಬಾಲ್​ ಅಭ್ಯಾಸ ಇವರಿಂದ ದೂರ ಸರಿದಿದೆ.

ಇದನ್ನೂ ಓದಿ : ನೀವೇ ಕೇಕ್​ ಕಟ್​ ಮಾಡಿ; ಝೊಮ್ಯಾಟೋ ಡೆಲಿವರಿ ಏಜೆಂಟ್​ರನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಆಹ್ವಾನಿಸಿದ ವಿಡಿಯೋ ವೈರಲ್

ಜನವರಿ 10ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈಗಾಗಲೇ 57,000 ಜನರು ಈ ವಿಡಿಯೋ ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇವರನ್ನು ಹೀಗೆ ಪರಿಚಯಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಹೇಗಾದರೂ ಈಕೆ ಮತ್ತೆ ತನ್ನ ಕ್ಷೇತ್ರಕ್ಕೆ ಮರಳಬೇಕು. ಅದಕ್ಕಾಗಿ ಬೆಂಬಲಿಸೋಣ ಎಂದಿದ್ದಾರೆ ಹಲವರು.

ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

ಇದನ್ನು ನೋಡಲು ಬಹಳ ದುಃಖವೆನ್ನಿಸುತ್ತಿದೆ. ಹಲವಾರು ಕ್ರೀಡಾಪ್ರತಿಭೆಗಳು ಹೀಗೆಯೇ ಅರ್ಧಕ್ಕೆ ಕಮರಿ ಹೋಗಿವೆ ನಮ್ಮ ದೇಶದಲ್ಲಿ ಎಂದಿದ್ದಾರೆ ಕೆಲವರು. ಇಂಥವರಿಗೆ ಗೌರವದಿಂದ ನಡೆಸಿಕೊಳ್ಳಬೇಕು ಅವರಿಗೆ ಉದ್ಯೋಗ ಭದ್ರತೆಯನ್ನು ಕೊಡಬೇಕು ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:07 pm, Thu, 12 January 23

Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ