ಈ ಬಾತ್ರೂಮಿನಲ್ಲಿ ಹೆಡ್ಫೋನ್ ಅಡಗಿದೆ, ಹುಡುಕಬಲ್ಲಿರಾ?
Optical Illusion : ಈ ಬಾತ್ರೂಮಿನಲ್ಲಿ ಇಷ್ಟೊಂದು ಸಾಮಾನುಗಳಿವೆ. ಅಡಗಿರುವ ಹೆಡ್ಫೋನ್ ಖಂಡಿತ ಹುಡುಕಬಹುದು ಎಂದು ನಿಮಗೆ ಅನ್ನಿಸಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.
Viral Optical Illusion : ಈಗಾಗಲೇ ಇದೇ ತಾಣದಲ್ಲಿ ಸಾಕಷ್ಟು ಸಲ ಕೊಟ್ಟ ಸಮಯದೊಳಗೆ ಸವಾಲನ್ನು ಪರಿಹರಿಸಿದ್ದೀರಿ. ಇದೀಗ ಮತ್ತೊಂದು ಸವಾಲಿನ ಭ್ರಮಾತ್ಮಕ ಚಿತ್ರ ನಿಮ್ಮದುರಿಗಿದೆ. ನಿಮ್ಮ ದೃಷ್ಟಿ ಮತ್ತು ಬುದ್ಧಿಯ ಮಧ್ಯೆ ಸವಾಲನ್ನು ಒಡ್ಡುವ ಈ ಚಿತ್ರಕ್ಕೆ ಇಷ್ಟೇ ಸಮಯದಲ್ಲಿ ಉತ್ತರ ಹುಡುಕಬೇಕೆಂದು ನಿಯಮವೇನೂ ಇಲ್ಲ. ಆದರೆ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿ ಆದಷ್ಟು ಬೇಗ ಉತ್ತರವನ್ನು ಕಂಡುಕೊಳ್ಳಿ.
ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್
ಅಂತರ್ಜಾಲದಲ್ಲಿ ಇಂಥ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೋಡಸಿಗುತ್ತವೆ. ಕೆಲಸದ ಒತ್ತಡದಿಂದ ಸರಿಯಾಗಿ ಕೆಲಸದಲ್ಲಿ ಏಕಾಗ್ರತೆ ತಂದುಕೊಳ್ಳಲು ಸಾಧ್ಯವಿಲ್ಲ ಎಂದೆನ್ನಿಸಿದಾಗ ಐದು ನಿಮಿಷ ಇಂಥ ಚಿತ್ರಗಳೆಡೆ ಗಮನ ಹರಿಸಬಹುದು. ಆಗ ನಿಮ್ಮ ದೃಷ್ಟಿ ಮತ್ತು ಮೆದುಳು ಚುರುಕುಗೊಳ್ಳುತ್ತದೆ. ನಂತರ ಸರಾಗವಾಗಿ ಕೆಲಸದಲ್ಲಿ ಏಕಾಗ್ರತೆ ತಂದುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಸೈಕಲ್ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್
ಇಲ್ಲಿರುವ ಈ ಬಾತ್ರೂಮಿನಲ್ಲಿ ಕಮೋಡ್, ಬ್ರಷ್, ಟಿಷ್ಯೂ ರೋಲ್, ಬ್ರಷ್, ಬಾತ್ರೂಮ್ ಗೌನ್, ಶಾಂಪೂ, ಲೋಷನ್, ವಾಷಿಂಗ್ ಮಶೀನ್, ಬಾತ್ಟಬ್, ಸಿಂಕ್, ಟವೆಲ್ ಹೀಗೆ ಸಾಕಷ್ಟು ಸಾಮಾನುಗಳಿವೆ. ಈ ಎಲ್ಲದರ ಮಧ್ಯೆ ಹೆಡ್ಫೋನ್ ಎಲ್ಲಿ ಅಡಗಿದೆ ಹಾಗಿದ್ದರೆ? ಈಗಾಗಲೇ ಕೇವಲ ಶೇ 2 ರಷ್ಟು ಜನ ಮಾತ್ರ ಇದಕ್ಕೆ ಉತ್ತರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ಧಾರೆ.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಸುಳಿವು ಬೇಕಾ? ಬಾತ್ ಗೌನ್ನ ಪಕ್ಕದಲ್ಲಿ ಒಂದು ಶೆಲ್ಫ್ ಇದೆ. ಅದರಲ್ಲಿ ಕೆಳಗಿನ ಭಾಗವನ್ನು ಗಮನಿಸಿ. ಡಿಟರ್ಜೆಂಟ್ ಇಡಲಾಗಿದೆ. ಅದರ ಪಕ್ಕದಲ್ಲಿ ಹೆಡ್ಫೋನ್ ಇದೆ. ಡಿಟರ್ಜೆಂಟ್ನ ಬಾಟಲಿಯೂ ನೀಲಿ ಬಣ್ಣದ್ದಾಗಿದೆ. ಹೆಡ್ಫೋನ್ ಕೂಡ ನೀಲಿಯ ಆಸುಪಾಸಿನ ಬಣ್ಣದಲ್ಲಿದೆ.
ಹೆಡ್ಫೋನ್ ಸಿಕ್ಕಿತಲ್ಲವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ