ತಮಿಳುನಾಡಿನ ಸಮುದ್ರ ತೀರಕ್ಕೆ ಬಂದ ‘ಲಂಟಾನಾ ಆನೆಗಳು’! ನೋಡಿ ವೈರಲ್ ವಿಡಿಯೋ

Lantana : ಚೆನ್ನೈನ ಸಮುದ್ರ ತೀರದಲ್ಲಿ ಈ ಆನೆಗಳು, ಆನೆಮರಿಗಳ ಹಿಂಡು ನಿಮಗಾಗಿ ಕಾಯುತ್ತಿದೆ. ಅರೆ! ಆನೆಗಳು ಸಮುದ್ರ ತೀರದಲ್ಲಿ? ಅಚ್ಚರಿಯಾಗ್ತಿದೆಯಾ... ಇವುಗಳನ್ನು ಇಲ್ಲಿಗೆ ಕರೆತರುವಲ್ಲಿ 70 ಬುಡಕಟ್ಟು ಕಲಾವಿದರ ಶ್ರಮ ಇದೆ.

ತಮಿಳುನಾಡಿನ ಸಮುದ್ರ ತೀರಕ್ಕೆ ಬಂದ ‘ಲಂಟಾನಾ ಆನೆಗಳು’! ನೋಡಿ ವೈರಲ್ ವಿಡಿಯೋ
ಲಂಟಾನಾ ಗಿಡದಿಂದ ನಿರ್ಮಿಸಿದ ಆನೆಗಳು
Updated By: ಶ್ರೀದೇವಿ ಕಳಸದ

Updated on: Jan 16, 2023 | 12:46 PM

Viral : ಜೀವವೈವಿಧ್ಯಕ್ಕೆ ವಿನಾಶಕಾರಿ ಎಂದೆನ್ನಿಸಿಕೊಂಡಿರುವ ಕಾಡಿನ ಕಳೆ ಲಂಟಾನಾ (Lantana) ಈಗ ಕಲಾಪ್ರಪಂಚದ ಮೂಲಕ ವಿಶ್ವದ ಗಮನ ಸೆಳೆಯುತ್ತ ಮತ್ತೆ ಸುದ್ದಿಯಲ್ಲಿದೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಚೆನ್ನೈನ ಸಮುದ್ರ ತೀರಕ್ಕೆ ಹೋದರೆ ಬೃಹದಾಕಾರದ ಆನೆಗಳು, ಆನೆಮರಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಅಷ್ಟೇ ಅಲ್ಲ, ಅದ್ಭುತ ಲೋಕಕ್ಕೆ ಕರೆದೊಯ್ಯುತ್ತವೆ. ಶಾಂತಿ ಮತ್ತು ಸೌಹಾರ್ದತೆಯ ದ್ಯೋತಕವಾಗಿ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಕಲಾಕೃತಿಗಳ ವಿಶೇಷವನ್ನು ಈ ವಿಡಿಯೋ ನೋಡಿಯೇ ತಿಳಿದುಕೊಳ್ಳಿ.

ತಮಿಳುನಾಡಿನ ಮುದುಮಲೈನ ಸುಮಾರು 70 ಬುಡಕಟ್ಟು ಕಲಾವಿದರ ತಂಡವು ಲಂಟಾನಾ ಕಟ್ಟಿಗೆಗಳಿಂದ ಈ ಸುಂದರವಾದಂಥ ಆನೆಗಳನ್ನು ನಿರ್ಮಿಸಿದೆ. ಪರಿಣತ ಕಲಾತಜ್ಞರ ತಂಡವು ಈ ಕಲಾವಿದರಿಗೆ ಮಾರ್ಗದರ್ಶನ ಮಾಡಿದೆ. ಈತನಕ ಈ ವಿಡಿಯೋ ಅನ್ನು 77,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 2,331 ಜನರು ಇಷ್ಟಪಟ್ಟಿದ್ಧಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಇಲ್ಲಿ ಕಚೋರಿ ತಿನ್ನಬೇಕೆಂದರೆ ರಸಾಯನಶಾಸ್ತ್ರ ಅಧ್ಯಯನ ಮಾಡುವುದು ಕಡ್ಡಾಯ!

ಇದು ಬಹಳ ಅದ್ಭುತವಾಗಿದೆ. ಈ ಪ್ರಯತ್ನ ನಿಜಕ್ಕೂ ಶ್ಲಾಘನಾರ್ಹ. ಈ ಕಲಾಕೃತಿಗಳನ್ನು ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಬೇಕು. ಯುವಜನರಲ್ಲಿ ಕಲೆಯ ಬಗ್ಗೆ ಅಭಿರುಚಿ ತುಂಬಲು ಇವು ಸಹಕಾರಿಯಾಗಿವೆ. ಹಾಗೆಯೇ ಬುಡುಕಟ್ಟು ಜನರು ಈ ಕಲೆಯಲ್ಲಿ ಹೆಚ್ಚು ಪಾಲ್ಗೊಂಡಷ್ಟೂ ಅವರಿಗೆ ಇದು ಆದಾಯ ಮೂಲವೂ ಆಗಬಹುದು. ಹಾಗಾಗಿ ಕಲಾಶಾಲೆಗಳನ್ನು ಸ್ಥಾಪಿಸಿ ಎಂದು ಕೆಲವರು ಸಲಹೆ ನೀಡಿದ್ಧಾರೆ.

ಇದನ್ನೂ ಓದಿ : ಜಿಮ್​ಪ್ರಿಯೆ! ಮದುವೆಯಲ್ಲಿ ಪುಲ್​ಅಪ್ಸ್​ ತೆಗೆದ ವಧುವಿನ ವಿಡಿಯೋ ವೈರಲ್

ಐಎಸ್​ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ದೇಶದ ಅರಣ್ಯ ಸಂಪತ್ತಿಗೆ ಮಾರಕವಾಗಿ ಕಾಡುತ್ತಿರುವ ಈ ಲಂಟಾನಾ ಚೆನ್ನೈನಲ್ಲಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಈಗಾಗಲೇ 12,000 ಹೆಕ್ಟೇರ್​ ಪ್ರದೇಶದಲ್ಲಿ ಈ ಕಳೆಗಿಡವನ್ನು ನಾಶಮಾಡಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:44 pm, Mon, 16 January 23