ಇಲ್ಲಿ ಕಚೋರಿ ತಿನ್ನಬೇಕೆಂದರೆ ರಸಾಯನಶಾಸ್ತ್ರ ಅಧ್ಯಯನ ಮಾಡುವುದು ಕಡ್ಡಾಯ!
Kachori : ಕೋಟಾದ ಈರುಳ್ಳಿ ಕಚೋರಿ ಮುಂದೆ ದಾಲ್ ಕಚೋರಿ ನಪಾಸು. ಕಚೋರಿ ಮಾರುವವರಿಗೆ ಡಿಫ್ರೆನ್ಶಿಯೇಷನ್, ಇಂಟಿಗ್ರೇಷನ್ ಬರುತ್ತದೆ... ಹೀಗೆಲ್ಲ ಹರಟೆ ಹೊಡೆಯುತ್ತ ಮಂಡೇ ಬ್ಲ್ಯೂಸ್ನಿಂದ ಹೊರಬರುತ್ತಿದೆ ನೆಟ್ಮಂದಿ.
Viral News : ನಮ್ಮ ನಡುವಿನ ಅನೇಕ ಓದುಗರನ್ನು, ಬರಹಗಾರರನ್ನು ಮಾತನಾಡಿಸಿ ನೋಡಿ. ನಿಮ್ಮ ಓದುವ ಹವ್ಯಾಸ ಎಲ್ಲಿಂದ ಶುರುವಾಯಿತೆಂದು. ಕಿರಾಣಿ ಅಂಗಡಿಗಳಲ್ಲಿ, ರಸ್ತೆಬದಿ ಅಂಗಡಿಗಳಲ್ಲಿ ದಿನಸಿ, ತಿನಿಸು, ತಿಂಡಿಗಳನ್ನು ಕಟ್ಟಿಕೊಡುತ್ತಿದ್ದ ಪೇಪರ್ಗಳಿಂದ ಎಂದು ಹೇಳುತ್ತಾರೆ. ಆ ಕಾಲದಲ್ಲಿ ಹಳ್ಳಿಗಳಲ್ಲಿ ಪಠ್ಯಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳು ಸುಲಭಕ್ಕೆ ಮತ್ತು ಎಲ್ಲರಿಗೂ ಓದಲು ಸಿಗುತ್ತಿರಲಿಲ್ಲ. ಹಾಗಾಗಿ ಜ್ಞಾನದ ಹಸಿವನ್ನು ಅವರು ಹೀಗೆಲ್ಲ ಹುಡುಕಾಡಿ ತೀರಿಸಿಕೊಳ್ಳುತ್ತಿದ್ದರು. ಇದೀಗ ವೈರಲ್ ಆಗಿರುವ ಈ ಕಚೋರಿ ಪ್ಲೇಟ್ ಅಪ್ಪಟ ರಸಾಯನಶಾಸ್ತ್ರ ಪ್ರೇಮಿಗಳಿಗೆ ಮತ್ತು ಕಚೋರಿ ಪ್ರಿಯರಿಗೆ!
Kota me kachori wale bhaiya ko bhi differentiation integration ata hai ??
ಇದನ್ನೂ ಓದಿ— Aditya (@AdityaSonune7) January 13, 2023
ರಾಜಸ್ತಾನದ ಕೋಟಾ ಜಂಕ್ಷನ್ನಲ್ಲಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯಿಂದ ಕೂಡಿದ ಪೇಪರ್ ಪ್ಲೇಟ್ನಲ್ಲಿ ಕಚೋರಿಗಳನ್ನು ಹಾಕಿಕೊಟ್ಟಿರುವ ಫೋಟೋ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು ಈ ಫೋಟೋ ಅನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ನ ಥ್ರೆಡ್ನಲ್ಲಿ ಹರಟೆ ಹೊಡೆಯುತ್ತಿರುವ ನೆಟ್ಮಂದಿ ಮಂಡೇ ಬ್ಲ್ಯೂಸ್ನಿಂದ ಹೊರಬರುತ್ತಿದೆ.
ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್
ಅನೇಕರು ತಮ್ಮ ಐಐಟಿ ಕೋಚಿಂಗ್ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಕೋಟಾದಲ್ಲಿ ಕಚೋರಿ ತಿನ್ನಬೇಕಾದರೂ ಓದಿಕೊಂಡೇ ತಿನ್ನಬೇಕು! ಕೋಟಾದ ಈರುಳ್ಳಿ ಕಚೋರಿ ಮುಂದೆ ದಾಲ್ ಕಚೋರಿ ನಪಾಸು. ಕೋಟಾದ ಕಚೋರಿ ಮಾರುವವರಿಗೆ ಡಿಫ್ರೆನ್ಶಿಯೇಷನ್ ಇಂಟಿಗ್ರೇಷನ್ ಬರುತ್ತದೆ! ಅಣ್ಣಾ ಒಂದು ಪ್ಲೇಟ್ ಆರ್ಗ್ಯಾನಿಕ್ ಕಚೋರಿ ಕೊಡಿ ಎಂದು ಒಬ್ಬರು ಕೇಳಿದ್ದಾರೆ.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಇನ್ನೊಬ್ಬರು ರೀಟ್ವೀಟ್ ಮಾಡಿದ ವಿಡಿಯೋದಲ್ಲಿ ಕಚೋರಿಯನ್ನು ಕಾಗದದ ಕವರ್ನಿಂದ ಹೊರತೆಗೆಯುತ್ತಾರೆ. ಆ ಕವರ್ ಮೇಲೆ ಪೇಟ್ ಸಾಫ್ ಎಂಬ ಮಾತ್ರೆಗಳ ಜಾಹೀರಾತು ಇದೆ! ಕಚೋರಿ ತಿಂದರೆ ಹೊಟ್ಟೆ ಸ್ವಚ್ಛ ಎಂಬರ್ಥವನ್ನು ಈ ವಿಡಿಯೋ ಸೂಚಿಸುತ್ತದೆ.
ಇದನ್ನೂ ಓದಿ : ಜಿಮ್ಪ್ರಿಯೆ! ಮದುವೆಯಲ್ಲಿ ಪುಲ್ಅಪ್ಸ್ ತೆಗೆದ ವಧುವಿನ ವಿಡಿಯೋ ವೈರಲ್
ಈ ಪ್ರಶ್ನೆಪತ್ರಿಕೆಗಾಗಿಯಾದರೂ ಕಚೋರಿ ಆರ್ಡ್ ಮಾಡಬೇಕು ಹಾಗಿದ್ದರೆ ಎಂದು ಒಬ್ಬರು ಹೇಳಿದ್ದಾರೆ. ಕೋಟಾದಲ್ಲಿ ಸುವಾಲಾಲ್ಜೀ ಅವರ ಕಚೋರಿ ಬಹಳ ಚೆನ್ನಾಗಿರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಇದೆಲ್ಲ ಓದಿದ ಮೇಲೆ ನಿಮಗೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಇರುವ ಪ್ಲೇಟ್ ನೋಡಬೇಕು ಅನ್ನಿಸುತ್ತಿದೆಯೋ, ಕಚೋರಿ ತಿನ್ನಬೇಕು ಅನ್ನಿಸುತ್ತಿದೆಯೋ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:13 am, Mon, 16 January 23