Viral Video: ಕ್ರಿಸ್​ಮಸ್​ ಆಚರಿಸಿದ್ದೇಕೆಂದು ಗಲಾಟೆ ಮಾಡಿದ ಬಜರಂಗದಳದವರಿಗೆ ಬಿಸಿ ಮುಟ್ಟಿಸಿದ ಮಹಿಳೆ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Dec 31, 2021 | 6:36 PM

ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್​ಮಸ್​ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆಯರು ನಾವು ಮಾಂಗಲ್ಯ ಬೇಕಾದರೂ ಬಿಚ್ಚಿಡುತ್ತೇವೆ ಅದನ್ನು ಕೇಳಲು ನೀವು ಯಾರು? ಎಂದು ದಬಾಯಿಸಿದ್ದಾರೆ.

Viral Video: ಕ್ರಿಸ್​ಮಸ್​ ಆಚರಿಸಿದ್ದೇಕೆಂದು ಗಲಾಟೆ ಮಾಡಿದ ಬಜರಂಗದಳದವರಿಗೆ ಬಿಸಿ ಮುಟ್ಟಿಸಿದ ಮಹಿಳೆ; ವಿಡಿಯೋ ವೈರಲ್
ಬಜರಂಗದಳದವರ ಜೊತೆ ಮಹಿಳೆಯ ಗಲಾಟೆ
Follow us on

ಬೆಂಗಳೂರು: ತುಮಕೂರಿನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಪ್ರಶ್ನಿಸಿ ಗಲಾಟೆ ಮಾಡಿದ ಬಲಪಂಥೀಯರ ವಿರುದ್ಧ ಮಹಿಳೆಯರ ಗುಂಪು ಸಿಡಿದೆದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಬಂದ ಗುಂಪೊಂದು ಕ್ರಿಸ್​ಮಸ್​ ಆಚರಿಸಿದ್ದಕ್ಕೆ ತುಮಕೂರಿನ ದಲಿತರ ಮನೆಗೆ ನುಗ್ಗಿ ಗಲಾಟೆ ಮಾಡಿತ್ತು. ಅವರಿಗೆ ಎದುರಾಗಿ ಮಹಿಳೆಯರು ಕೂಡ ಗಲಾಟೆ ಮಾಡಿದ್ದು, ಬಳಿಕ ಪೊಲೀಸರು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ತುಮಕೂರಿನಲ್ಲಿ ದಲಿತರ ಮನೆಯೊಂದರ ಮನೆಗೆ ನುಗ್ಗಿದ ಹಿಂದುತ್ವವಾದಿಗಳ ಗುಂಪೊಂದು ಮಂಗಳವಾರ ಕ್ರಿಸ್​ಮಸ್ ಕಾರ್ಯಕ್ರಮವನ್ನು ಆಚರಿಸದಂತೆ ತಡೆಯಲು ಯತ್ನಿಸಿದರು. ಅದನ್ನು ಆ ದಲಿತರ ಮನೆಯ ಮಹಿಳೆಯರು ತಡೆದರು. ಈ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕೊನೆಗೆ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರನ್ನು ಮನೆಗೆ ಕರೆಸಲಾಯಿತು. ಆದರೆ ಈ ವಾಗ್ವಾದದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ತುಮಕೂರಿನ ಕುಣಿಗಲ್ ತಾಲೂಕಿನ ಬಿಳಿದೇವಾಲಯ ಗ್ರಾಮದಲ್ಲಿ ಮಂಗಳವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ವಾದ-ವಿವಾದದಲ್ಲಿ ಭಾಗಿಯಾದ ಎರಡೂ ಗುಂಪುಗಳಿಂದ ದೂರುಗಳಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ಕುಣಿಗಲ್ ಠಾಣೆಯ ಪೊಲೀಸ್ ನಿರೀಕ್ಷಕ ರಾಜು ಪಿ. ತಿಳಿಸಿದ್ದಾರೆ. ಆ ಕುಟುಂಬವು ಕ್ರಿಸ್‌ಮಸ್ ಆಚರಿಸುತ್ತಿತ್ತು. ಆದರೆ, ಕೆಲವು ಪುರುಷರು ಅಲ್ಲಿಗೆ ಹೋಗಿ ಅಡ್ಡಿಪಡಿಸಿದ್ದಾರೆ. ಇದು ಕೇವಲ ವಾದವಾಗಿದೆ ಮತ್ತು ಯಾವುದೇ ಹಿಂಸಾಚಾರ ನಡೆದಿಲ್ಲ. ನಾವು ಪ್ರಕರಣವನ್ನು ದಾಖಲಿಸಿಲ್ಲ. ಈ ಬಗ್ಗೆ ಪೊಲೀಸ್ ಇನ್​ಸ್ಪೆಕ್ಟರ್ ರಾಜು ತಿಳಿಸಿದ್ದಾರೆ.

ತುಮಕೂರಿನ ಕುಣಿಗಲ್ ತಾಲೂಕಿನ ಬಜರಂಗ ದಳದ ಮುಖಂಡ ರಾಮು ಬಜರಂಗಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ತಮ್ಮ ಗ್ರಾಮದ ರಾಮಚಂದ್ರ ಅವರ ಕುಟುಂಬದವರು ತಮ್ಮ ಮನೆಯಲ್ಲಿ ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡಲು ಪ್ರಾರಂಭಿಸಿರುವುದನ್ನು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಗಮನಿಸಿದ್ದಾರೆ ಮಂಗಳವಾರ ಸಂಜೆ ರಾಮಚಂದ್ರ ಅವರ ಮನೆಗೆ ನುಗ್ಗಿದ ಹಿಂದುತ್ವವಾದಿ ಗುಂಪುಗಳಾದ ಬಜರಂಗದಳದವರು ಅವರನ್ನು ಎಚ್ಚರಿಸಿದರು.

ನಂತರ ನಡೆದ ವಾದದಲ್ಲಿ ಪುರುಷರ ಗುಂಪು ರಾಮಚಂದ್ರ ಅವರ ಮನೆಯಲ್ಲಿದ್ದ ನಿವಾಸಿಗಳನ್ನು ಕ್ರಿಸ್‌ಮಸ್ ಏಕೆ ಆಚರಿಸುತ್ತೀರಿ ಎಂದು ಕೇಳಿದರು. ಕುಟುಂಬವು ಕ್ರಿಸ್‌ಮಸ್ ಅನ್ನು ಏಕೆ ಆಚರಿಸುತ್ತಿದೆ ಮತ್ತು ಹಿಂದೂ ಮಹಿಳೆಯರಂತೆ ಮಹಿಳೆಯರು ಸಿಂಧೂರ್ ಅಥವಾ ಸಿಂಧೂರವನ್ನು ಏಕೆ ಧರಿಸುವುದಿಲ್ಲ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮನೆಯ ನಿವಾಸಿಗಳು ತಾವು ಕ್ರೈಸ್ತ ಧರ್ಮೀಯರು ಮತ್ತು ಕ್ರಿಸ್‌ಮಸ್ ಆಚರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

“ನಮ್ಮನ್ನು ಪ್ರಶ್ನಿಸಲು ನೀವು ಯಾರು? ನಾನು ನನ್ನ ಮಾಂಗಲ್ಯವನ್ನು ತೆಗೆದು ಇಡಬಲ್ಲೆ. ಅದನ್ನು ಕೇಳಲು ನಿಮಗೆ ಅಧಿಕಾರವಿಲ್ಲ” ಎಂದು ಮಹಿಳೆಯೊಬ್ಬರು ಬಜರಂಗದಳದವರ ಜೊತೆ ಜಗಳವಾಡಿದ್ದಾರೆ.

ಇದನ್ನೂ ಓದಿ: Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್

Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್