ಹಿಂದಿನ ಕಾಲದಲ್ಲಿ ಜನರು ಚಪ್ಪಲಿಯಿಲ್ಲದೆ ಬರಿಗಾಲಿನಲ್ಲಿ ನಡೆಯುತ್ತಿದ್ರು. ಆದ್ರೆ ಕಾಲ ಬದಲಾಗ್ತಾ ಹೋದಂತೆ ಜನರು ಚಪ್ಪಲಿ, ಶೂ ಧರಿಸೋಕೆ ಶುರು ಮಾಡಿದ್ರು. ಈಗಂತೂ ದಿನಕ್ಕೊಂದು ಬಗೆಯ ಚಪ್ಪಲಿ ಧರಿಸುವ ಜನರು ಬರಿಗಾಲಿನಲ್ಲಿ ಓಡಾಡಲು ಮುಜುಗರ ಪಡ್ತಾರೆ. ಅದ್ರಲ್ಲೂ ಕೆಲವರು ಮನೆಯ ಹೊರಗೆ ಮಾತ್ರವಲ್ಲದೆ ಮನೆಯ ಒಳಗೂ ಚಪ್ಪಲಿ ಧರಿಸಿ ಓಡಾಡ್ತಾರೆ. ಈ ಅಭ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ಆಗವುದೇ ಹೆಚ್ಚು. ಹೀಗೆ ಬರಿಗಾಲಿನಲ್ಲಿ ನಡೆಯುವುದರ ಲಾಭಗಳ ಮಹತ್ವ ಅರಿತ ಆಸ್ಟ್ರೇಲಿಯಾದ ಜನರು ಇದೀಗ ಎಲ್ಲೆಡೆ ಬರಿಗಾಲಿನಲ್ಲಿ ನಡೆಯಲು ಶುರು ಮಾಡಿದ್ದಾರೆ. ಈ ಹೊಸ ಟ್ರೆಂಡ್ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು @CensoredMen ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆಸ್ಟ್ರೇಲಿಯಾದಲ್ಲಿ ಇದು ಸಾಮಾನ್ಯ ಸಂಗತಿಯೇ?” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
🇦🇺 Is this a normal thing in Australia? pic.twitter.com/hxFVL0ufiP
— Censored Men (@CensoredMen) May 13, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿಗಳಲ್ಲಿ ಜನರು ಬರಿಗಾಲಿನಲ್ಲಿ ತಿರುಗಾಡುತ್ತಿರುವುದನ್ನು ಕಾಣಬಹುದು. ಪಾರ್ಟಿ, ಮಾಲ್, ಶಾಪಿಂಗ್ ಜೊತೆಗೆ ಆಫೀಸ್ ಗೆ ಹೋಗುವಾಗಲು ಕೂಡಾ ಇಲ್ಲಿನ ಜನರು ಚಪ್ಪಲಿ ಧರಿಸುವುದಿಲ್ಲ. ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಈ ಟ್ರೆಂಡ್ ಪ್ರಖ್ಯಾತಿಯನ್ನು ಪಡೆಯುತ್ತಿದೆ.
ಇದನ್ನೂ ಓದಿ: ಗುಟ್ಕಾ ತಿಂದು ಶಾರುಖ್ ಖಾನ್ ಇನ್ನು ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ, ಈ ಬಾಲಕನ ಉತ್ತರ ಕೇಳಿ
ಮೇ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ವೈದ್ಯಕೀಯ ದೃಷ್ಟಿಕೋನದಿಂದ ಬರಿಗಾಲಿನಲ್ಲಿ ನಡೆಯುವುದು ತುಂಬಾನೇ ಒಳ್ಳೆಯದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದ್ಭುತವಾಗಿದೆ, ಪಾದಗಳಿಗೆ ಯಾವುದೇ ಬಂಧನಗಳಿಲ್ಲದೆ ಸ್ವತಂತ್ರವಾಗಿ ಓಡಾಡಬಹುದು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ