‘ಹೇಗೂ ಅಪ್ಪ ಮನೇಲಿಲ್ಲ, ಆಚೆ ಕಾಫೀಗೆ ಹೋಗೋಣ ಅಮ್ಮಾ?’ ಹೇಗಿದೆ ಐಡಿಯಾ!

| Updated By: ಶ್ರೀದೇವಿ ಕಳಸದ

Updated on: Oct 04, 2022 | 1:45 PM

Dog : ಸೃಜನಶೀಲವಾಗಿರುವುದು ಸದಾ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಖುಷಿ ನಮ್ಮ ಮೇಲೆಯೇ ಅವಲಂಬಿತವಾಗಿರಬೇಕು. ನೋಡಿ ಖುಷಿಗಾಗಿ ಈ ಅಮ್ಮ ಮಗು ಏನು ಉಪಾಯ ಹೂಡಿದ್ದಾರೆ ಅಂತ.

‘ಹೇಗೂ ಅಪ್ಪ ಮನೇಲಿಲ್ಲ, ಆಚೆ ಕಾಫೀಗೆ ಹೋಗೋಣ ಅಮ್ಮಾ?’ ಹೇಗಿದೆ ಐಡಿಯಾ!
ಅಮ್ಮನೊಂದಿಗೆ ಕಾಫಿ ಶಾಪ್​ಗೆ ಹೊರಟ ನಾಯಿ
Follow us on

Viral Video : ಈಗಂತೂ ಸಾಕುಪ್ರಾಣಿಗಳನ್ನೇ ಮಕ್ಕಳಂತೆ ಪೋಷಿಸುವ ಕಾಲ. ಆ ಖುಷಿಯನ್ನು ಹಂಚಿಕೊಳ್ಳಲು ಸಾಕಷ್ಟು ಅವಕಾಶವನ್ನೊದಗಿಸುವ ಸಾಮಾಜಿಕ ಜಾಲತಾಣಗಳು. ಮನಸಿನ ಬೇಸರ ಕಳೆಯಲು ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಐಡೆಂಟಿಟಿ ಹೊಂದಲು, ಹಣ ಗಳಿಸಲು ಅವರವರ ಆಸಕ್ತಿಗೆ ಅನುಗುಣವಾಗಿ ಇಂದು ಕಲೆಯ ರೂಪದಲ್ಲಿ ಏನನ್ನೂ ಪ್ರದರ್ಶಿಸಬಹುದಾಗಿದೆ. ಈಗ ಈ ಮುದ್ದಾದ ನಾಯಿಯ ವಿಡಿಯೋ ವೈರಲ್ ಆಗಿದೆ. ಹೇಗೂ ಅಪ್ಪ ಮನೆಯಲ್ಲಿಲ್ಲ, ಇದ್ದಿದ್ರೆ ಮನೆಯಲ್ಲೇ ಕಾಫಿ ಮಾಡು ಎನ್ನುತ್ತಿದ್ದ. ಇದೇ ಸರಿಯಾದ ಟೈಮ್. ನಡಿ ಸ್ಟಾರ್​ಬಕ್ಸ್​ಗೆ ಹೋಗೋಣ ಅನ್ನತ್ತೆ ಈ ನಾಯಿ. ಹೀಗೆಲ್ಲಾ ಮಾತಾಡತ್ತಾ ಅಂತ ಅಚ್ಚರಿನಾ? ಎಲ್ಲ ಅಮ್ಮನ ಕ್ರಿಯೇಟಿವಿಟಿ!

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಾನೂ ರೆಡಿಯಾಗಿ ಅದನ್ನೂ ರೆಡಿಯಾಗಿ ಕಾರಿನಲ್ಲಿ ಅದನ್ನು ಸ್ಟಾರ್​ಬಕ್ಸ್​ಗೆ ಕರೆದುಕೊಂಡು ಹೋಗುತ್ತಾಳೆ ಈ ಅಮ್ಮ. ಈಕೆಯ ಇನ್​ಸ್ಟಾಗ್ರಾಂ ಪುಟವು 29,000 ಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದೆ. ಈ ವಿಡಿಯೋ ಅನ್ನು ಸೆಪ್ಟೆಂಬರ್ 10ರಂದು ಪೋಸ್ಟ್ ಮಾಡಲಾಗಿದೆ. ಸುಮಾರು 65,000 ಕ್ಕು ಹೆಚ್ಚು ಜನರು ಈ ವಿಡಿಯೋ ನೋಡಿ ಖುಷಿಪಟ್ಟಿದ್ಧಾರೆ.

‘ಇದು ಬಹಳ ಮುದ್ದಾಗಿದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾನು ತುಂಬಾ ಪ್ರೀತಿಸುತ್ತೇನೆ ಈ ವಿಡಿಯೋ ಅನ್ನು. ಇದು ಶುದ್ಧವಾದ ವೈಬ್ಸ್ ಹೊಂದಿದೆ’ ಎಂದಿದ್ದಾರೆ ಮತ್ತೊಬ್ಬರು.

ನಿಮಗೂ ಇಷ್ಟವಾಯಿತಾ ಈ ವಿಡಿಯೋ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:44 pm, Tue, 4 October 22