
ಆನೆಗಳನ್ನು (elephants) ಬುದ್ಧಿವಂತ ಪ್ರಾಣಿಗಳು, ಅವುಗಳಿಗೆ ತಮ್ಮಂತೆ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸುವ ಸಾಮರ್ಥ್ಯಯಿದೆ. ಆನೆಗಳು ಶಾಂತ ಸ್ವಭಾವದ ಪ್ರಾಣಿಗಳು ಕೂಡ ಹೌದು. ತನಗೆ ಯಾರು ಹೆಚ್ಚು ಪ್ರೀತಿ ತೋರುತ್ತಾರೋ ಅವರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿರುತ್ತವೆ. ಆದರೆ ಇದೀಗ ಮನುಷ್ಯ ಹಾಗೂ ಆನೆಗಳ ನಡುವಿನ ಭಾವನಾತ್ಮಕ ಬಾಂಧವ್ಯದ ಸಾರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿವೆ. ಈ ಆನೆಗಳು ತನ್ನ ಮಾಲೀಕನೊಂದಿಗೆ ಹೇಗೆ ಬೆರೆಯುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಆನೆಗಳ ಪಕ್ಕದಲ್ಲಿ ಕುಳಿತುಕೊಂಡ ವ್ಯಕ್ತಿಯೂ ಹಾಡು ಹಾಡುತ್ತಿದ್ದಂತೆ ಈ ಮುಗ್ಧ ಪ್ರಾಣಿಗಳು ಕೂಡ ಮುದ್ದಾಗಿ ಪ್ರತಿಕ್ರಿಯಿಸಿವೆ.
ಥೈಲ್ಯಾಂಡ್‌ನ ಸೇವ್ ಎಲಿಫೆಂಟ್ ಫೌಂಡೇಶನ್‌ನ ಸಂಸ್ಥಾಪಕ ಲೆಕ್ ಚೈಲರ್ಟ್ ಅವರು, lek chailert ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಚೈಲರ್ಟ್ ಹೀಗೆ ಬರೆದುಕೊಂಡಿದ್ದು, ಆನೆಗಳಿಗೆ ಏನು ಬೇಕು ಎಂದು ನನಗೆ ಹೇಗೆ ಗೊತ್ತು ಎನ್ನುವುದನ್ನು ಅನೇಕರು ನನ್ನನ್ನು ಕೇಳುತ್ತಾರೆ. ಆದರೆ ನಿಮ್ಮ ಹೃದಯವನ್ನು ಆಲಿಸಿ ಎನ್ನುವ ಉತ್ತರ ನನ್ನದು. ಅವುಗಳ ಮೂಲಭೂತ ಅಗತ್ಯಗಳು ನಮ್ಮದಕ್ಕಿಂತ ಭಿನ್ನವಾಗಿಲ್ಲ, ಅವು ಸುರಕ್ಷಿತವಾಗಿ ಬದುಕಲು, ಚೆನ್ನಾಗಿ ತಿನ್ನಲು ಮತ್ತು ಸಂತೋಷವಾಗಿರಲು ಬಯಸುತ್ತವೆ. ನಾವು ಪ್ರಾಣಿಗಳಿಗಿಂತ ಶ್ರೇಷ್ಠರು, ಪ್ರಾಣಿಗಳು ನಮಗೆ ಸೇವೆ ಸಲ್ಲಿಸಲು ಅಸ್ತಿತ್ವದಲ್ಲಿವೆ ಎಂಬ ನಂಬಿಕೆಯ ಗೋಡೆಯನ್ನು ಮುರಿದು, ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ಆರಿಸಿಕೊಂಡರೆ, ನಾವು ಅವುಗಳಲ್ಲಿ ಆಳವಾದ ಸೌಂದರ್ಯವನ್ನು ನೋಡಲು ಪ್ರಾರಂಭಿಸುತ್ತೇವೆ.
ನಾವು ನಮ್ಮ ಹೃದಯಗಳನ್ನು ತೆರೆದರೆ ಸಂತೋಷ ಹಾಗೂ ಶಾಂತಿಯನ್ನು ಎಲ್ಲಿ ಬೇಕಾದರೂ ಕಾಣಬಹುದು. ಆನೆಗಳು ಹಾಡುವುದನ್ನು ಎಷ್ಟು ಆನಂದಿಸುತ್ತಾರೆ ಎಂಬುದನ್ನು ನೀವು ನೋಡಬಹುದು. ಅವು ಸಂತೋಷ ಮತ್ತು ನಿರಾಳತೆಯನ್ನು ಅನುಭವಿಸುತ್ತವೆ. ಕೆಲವೊಮ್ಮೆ ಜೊತೆಯಲ್ಲಿ ಹಾಡುತ್ತವೆ. ಆನೆಗಳ ಜೊತೆಗೆ ಕಳೆಯುವುದು ನನ್ನ ದಿನದ ಅತ್ಯುತ್ತಮ ಕ್ಷಣಗಳು. ನಾನು ಈ ಮುಗ್ಧ ಜೀವಿಯನ್ನು ತುಂಬಾ ಪ್ರೀತಿಸುತ್ತೇನೆ. ಪ್ರತಿದಿನ, ನಾನು ಅದರೊಂದಿಗೆ ಸಮಯ ಕಳೆಯುತ್ತೇನೆ, ಇವು ನನಗೆ ಅತ್ಯಂತ ಶಾಂತಿಯುತ ಮತ್ತು ಸಂತೋಷದಾಯಕ ಸಮಯಗಳು. ಏಕೆಂದರೆ ಅವುಗಳ ಸಂತೋಷವೇ ನನ್ನ ಸಂತೋಷವೂ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ : Viral : ನೀನ್ ಸ್ನಾನ ಮಾಡಲ್ಲ, ಮೂರು ದಿನ ಒಂದೇ ಒಳಉಡುಪು ಧರಿಸ್ತೀಯಾ, ನೀನು ನನಗೆ ಬೇಡ ಎಂದ ಪತ್ನಿ
ಈ ವಿಡಿಯೋದಲ್ಲಿ ಮಣ್ಣಿನ ರಾಶಿಯ ಮೇಲೆ ಚೈಲರ್ಟ್ ಅವರು ಕುಳಿತುಕೊಂಡಿದ್ದು, ಅವರ ಪಕ್ಕದಲ್ಲಿ ಎರಡು ಆನೆಗಳು ನಿಂತಿರುವುದನ್ನು ಕಾಣಬಹುದು. ಒಂದು ಆನೆಯೂ ತನ್ನ ಸೊಂಡಿಲನ್ನು ನಿಧಾನವಾಗಿ ಚಾಚುತ್ತಿದ್ದರೆ, ಮತ್ತೊಂದು ಆನೆಯೂ ತನ್ನ ಸೊಂಡಿಲಿನಿಂದ ಮಾಲೀಕ ಕಾಲು ಬೆರಳನ್ನು ಸವಾರುತ್ತಾ ತುಂಟಾಟ ಆಡುತ್ತಿವೆ. ಈ ವೇಳೆಯಲ್ಲಿ ಚೈಲರ್ಟ್ ಹಾಡೊಂದನ್ನು ಹಾಡಲು ಶುರು ಮಾಡಿದ್ದು, ಆನೆಗಳು ಧ್ವನಿ ಸೇರಿರುವ ಮೂಲಕ ಮುದ್ದಾಗಿ ಪ್ರತಿಕ್ರಿಯಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಜೀವಿಗಳು ನಿಮ್ಮದೊಂದಿಗೆ ಬೆರೆಯುತ್ತವೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎಂದಿದ್ದಾರೆ. ಇನ್ನೊಬ್ಬರು, ಅವುಗಳ ಕಣ್ಣುಗಳೇ ಹೇಳುತ್ತವೆ ಎಷ್ಟು ಮುಗ್ಧವು ಹಾಗೂ ಹೇಗೆ ಪ್ರೀತಿಸುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅತ್ಯಂತ ಸುಂದರವಾದ ಮ್ಯೂಸಿಕ್ ಇದು ಎಂದಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Mon, 7 July 25