London: ದಿಲ್ಸೇ ಸಿನೆಮಾದಲ್ಲಿ ಮಲೈಕಾ ಅರೋರಾ (Malaika Arora) ನರ್ತಿಸಿದ ಚೈಯ್ಯಾ ಚೈಯ್ಯಾ ಹಾಡಿಗೆ ಈ ವ್ಯಕ್ತಿ ಲಂಡನ್ ಮೆಟ್ರೋ ರೈಲಿನಲ್ಲಿ ಹೆಜ್ಜೆ ಹಾಕಿದ್ದಾರೆ. ‘1ಚೈಯ್ಯಾ ಚೈಯ್ಯಾ ಲಂಡನ್ ವರ್ಷನ್’ ಎಂಬ ಕ್ಯಾಪ್ಷನ್ನಡಿ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಐದು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈಗಾಗಲೇ 2,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 80,000 ಜನರು ನೋಡಿದ್ದಾರೆ. ನಿಮ್ಮ ಆತ್ಮವಿರ್ಶವಾಸವನ್ನು ಮೆಚ್ಚುತ್ತೇವೆ ಎಂದು ಹಲವಾರು ಜನ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ಧಾರೆ.
ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
ಬಾಲಿವುಡ್ ನಿಮ್ಮನ್ನು ಹುಡುಕುತ್ತಿದೆ ಎಂದು ಒಬ್ಬರು ಹೇಳಿದ್ಧಾರೆ. ಜನರು ಕಂಟೆಂಟ್ಗಾಗಿ ಯಾವ ಮಟ್ಟಕ್ಕೂ ಹೋಗಬಹುದು, ಇದಕ್ಕೆ ನಿಮ್ಮ ಈ ನೃತ್ಯವೇ ಸಾಕ್ಷಿ ಎಂದು ಮತ್ತೊಬ್ಬರು ಹೇಳಿದ್ದಾರೆ. ದಯವಿಟ್ಟು ಸಾಕಿ ಸಾಕಿ ಹಾಡಿಗೆ ನೀವು ನರ್ತಿಸಬಹುದೇ? ಎಂದು ಕೇಳಿದ್ಧಾರೆ ಮಗದೊಬ್ಬರು.
ಇದು ನಿಜಕ್ಕೂ ತುಂಬಾ ತಮಾಷೆಯಾಗಿದೆ ಎಂದು ಒಬ್ಬರು. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದರ ಕಡೆಗೆ ಆ ಮೆಟ್ರೋ ರೈಲು ಮತ್ತು ನಿಲ್ದಾಣದಲ್ಲಿ ಇರುವ ಜನರಿಗೆ ಗಮನವೇ ಇಲ್ಲ, ಅದು ಹೇಗೆ ಸಾಧ್ಯ? ಎಂದು ಕೇಳಿದ್ಧಾರೆ ಮತ್ತೊಬ್ಬರು. ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಾಗಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಇದು ಎಲ್ಲ ಭಾರತೀಯರಿಗೂ ಗೊತ್ತಿರುವ ಹಾಡು, ನಿಮ್ಮ ಈ ನೃತ್ಯವನ್ನು ನೋಡಿದರೆ ಇದು ಅವರಿಗೆ ವಿಲಕ್ಷಣ ಎನ್ನಿಸಬಹುದು ಎಂದು ಇನ್ನೊಬ್ಬರು ಹೇಳಿದ್ಧಾರೆ.
ಇದನ್ನೂ ಓದಿ : Viral Video: ಜವಾನ್; ಐಫೆಲ್ ಟವರ್ ಮುಂದೆ ‘ಚಲೇಯಾ’ಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಜೋಡಿ
ನಾನಂತೂ ಇವರೊಂದಿಗೆ ಡ್ಯಾನ್ಸ್ ಮಾಡಲು ರೆಡಿ ಎಂದಿದ್ದಾರೆ ಒಬ್ಬರು. ಇದು ಅತ್ಯದ್ಭುತವಾಗಿದೆ, ನನಗೂ ಕಲಿಸಿ ಎಂದು ದುಂಬಾಲು ಬಿದ್ದಿದ್ದಾರೆ ಇನ್ನೊಬ್ಬರು. ನಿಮ್ಮ ಸುತ್ತಮುತ್ತಲೂ ಇರುವ ಸಾರ್ವಜನಿಕರು ನಿಮ್ಮನ್ನು ನಿರ್ಲಕ್ಷಿಸಿರುವುದನ್ನು ನೋಡಿ ಬಹಳ ಬೇಜಾರಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ