Viral: ಮದುವೆ ಮನೆಯಲ್ಲಿ ಅತಿಥಿಗಳಿಗಾಗಿ ತಯಾರಾಯ್ತು ಮೆಣಸಿನಕಾಯಿಯ ವಿಶೇಷ ಹಲ್ವಾ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 12:32 PM

ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ವಧುವರರ ನಂತರ ಹೆಚ್ಚಾಗಿ ಎಲ್ಲರ ಗಮನ ಸೆಳೆಯುವುದೇ ಮದುವೆಯೂಟ. ಅದೇ ರೀತಿ ಇಲ್ಲೊಂದು ಮದುವೆ ಮನೆ ಊಟ ಗಮನ ಸೆಳೆದಿದೆ. ಅತಿಥಿಗಳಿಗಾಗಿ ವಿಶೇಷವಾದ ಮೆಣಸಿನ ಕಾಯಿಯ ಹಲ್ವಾವನ್ನು ತಯಾರಿಸಲಾಗಿದ್ದು, ಈ ವಿಚಿತ್ರ ಖಾದ್ಯವನ್ನು ಕಂಡು ಮದುವೆಗೆ ಆಗಮಿಸಿದ್ದ ಅತಿಥಿಗಳು ದಂಗಾಗಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮದುವೆ ಊಟವನ್ನು ಸವಿಯದೆ ಇರಲು ಬಯಸುವವರ ಯಾರು ಇಲ್ಲ. ಮದುವೆ ಮನೆಗಳಲ್ಲಿ ವಧುವರರ ನಂತರ ಹೆಚ್ಚಾಗಿ ಎಲ್ಲರ ಗಮನ ಸೆಳೆಯುವುದೇ ಮದುವೆಯೂಟ. ಇಲ್ಲಿ ಅನ್ನ, ಸಾಂಬರ್‌, ರಸಂ, ಪಲ್ಯ, ಹಪ್ಪಳ, ಹೋಲಿಗೆ, ಪಾಯಸದ ಜೊತೆ ಜೊತೆಗೆ ಬಗೆ ಬಗೆಯ ಸಿಹಿ ಖಾದ್ಯಗಳ ವರೆಗೂ ಎಲ್ಲಾ ಐಟಂಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಜಾನೇ ಬೇರೆ. ಮದುವೆ ಮನೆ ಊಟದಲ್ಲಿ ಸಾಮಾನ್ಯವಾಗಿ ಗುಲಾಬ್‌ ಜಾಮೂನ್‌, ಹಲ್ವಾ, ಈ ರೀತಿಯ ಸಿಹಿ ಖಾದ್ಯಗಳನ್ನು ತಯಾರು ಮಾಡ್ತಾರೆ. ಆದ್ರೆ ಇಲ್ಲೊಂದು ಮದುವೆಯಲ್ಲಿ ಅತಿಥಿಗಳಿಗೆ ಮೆಣಸಿನಕಾಯಿಯ ವಿಶೇಷ ಹಲ್ವಾವನ್ನು ತಯಾರಿಸಿದ್ದು, ಈ ವಿಚಿತ್ರ ಖಾದ್ಯವನ್ನು ನೋಡಿ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಅಗುತ್ತಿದೆ.

ಮದುವೆ ಮನೆಯ ಬಫೆ ಊಟದಲ್ಲಿ ಕ್ಯಾರೆಟ್‌ ಹಲ್ವಾದ ಜೊತೆಗೆ ಅತಿಥಿಗಳಿಗಾಗಿ ಮೆಣಸಿನಕಾಯಿಯ ಹಲ್ವಾವನ್ನು ಸಹ ಇಟ್ಟಿದ್ರು. ಈ ಮಿರ್ಚಿ ಹಲ್ವಾವನ್ನು ಕಂಡು ಮದುವೆಗೆ ಬಂದಿದ್ದ ಅತಿಥಿಗಳು ಫುಲ್‌ ಶಾಕ್‌ ಆಗಿದ್ದಾರೆ.

ಈ ವಿಡಿಯೋವನ್ನು bala.dagar__malik.7127 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ಚೆಫ್‌ ಒಬ್ಬರು ಬಜ್ಜಿ ಮೆಣಸಿನಕಾಯಿಯಿಂದ ಹಲ್ವಾವನ್ನು ತಯಾರು ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಚಿತ್ರ ಹಲ್ವಾವನ್ನು ನೋಡಿ ಅತಿಥಿಗಳು ಬೆರಗಾಗಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿದು ಬಾಬಾ ರಾಮ್‌ದೇವ್‌ ಏನಂದ್ರು ನೋಡಿ…

ನವೆಂಬರ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನು ತಿಂದ ಅತಿಥಿಗಳ ಕಥೆ ಗೋವಿಂದಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನು ಕೂಡಾ ತಿನ್ನುವವರು ಇದ್ದಾರಾʼ ಎಂದು ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ