Viral: ಮದುವೆ ಮತ್ತು ಜನನ ದರವನ್ನು ಹೆಚ್ಚಿಸಲು ವಿಶ್ವವಿದ್ಯಾನಿಲಯಗಳಲ್ಲಿ ಶುರುವಾಗಲಿದೆ “ಲವ್ ಎಜುಕೇಶನ್”
Love Education: ಚೀನಾ ದೇಶದಲ್ಲಿ ಜನನ ಪ್ರಮಾಣವು ಇಳಿಮುಖವಾಗುತ್ತಿದ್ದು, ಜನನ ದರವನ್ನು ಹೆಚ್ಚಿಸಬೇಕು ಎನ್ನುವ ನಿಟ್ಟಿನಲ್ಲಿ ಚೀನಾ ಸರ್ಕಾರವು ಮದುವೆ, ಪ್ರೀತಿ, ಮಕ್ಕಳನ್ನು ಹೊಂದುವುದು ಮತ್ತು ಕೌಟುಂಬಿಕ ಜೀವನದ ಮೇಲೆ ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವುದಕ್ಕಾಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ-ಪ್ರೇಮದ ಶಿಕ್ಷಣವನ್ನು ನೀಡಲು ಹೊಸ “ಲವ್ ಎಜುಕೇಷನ್ ಕೋರ್ಸ್” ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಒಂದೆಡೆ ಭಾರತವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದುತ್ತಿರುವ ದೇಶವಾಗಿ ವೇಗವಾಗಿ ಸಾಗುತ್ತಿದ್ದರೆ, ಒಂದು ಕಾಲದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಂತಹ ದೇಶವಾಗಿದ್ದ ಚೀನಾದಲ್ಲಿ ಜನಸಂಖ್ಯೆ ಇಳಿಮುಖವಾಗಿದೆ. ಹೌದು ಇಲ್ಲಿ ಮರಣ ಪ್ರಮಾಣವು ಹೆಚ್ಚಾಗಿದ್ದು, ಜನನ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ಈ ನಿಟ್ಟಿನಲ್ಲಿ ಇಲ್ಲಿ ಮದುವೆ, ಪ್ರೀತಿ, ಮಕ್ಕಳನ್ನು ಹೊಂದುವುದು, ಕೌಟುಂಬಿಕ ಜೀವನ ಇವೆಲ್ಲದರ ಮೇಲೆ ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವುದಕ್ಕಾಗಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇಮ ಶಿಕ್ಷಣವನ್ನು ನೀಡಲು ಹೊಸ “ಲವ್ ಎಜುಕೇಷನ್ ಕೋರ್ಸ್” ಜಾರಿಗೊಳಿಸಬೇಕು ಎಂದು ಚೀನಾದ ಸರ್ಕಾರವು ಒತ್ತಾಯಿಸಿದೆ. ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಚೀನಾದಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆ:
ಸತತ ಎರಡನೇ ವರ್ಷವೂ ಚೀನಾದಲ್ಲಿ ಜನಸಂಖ್ಯೆಯು ಕುಸಿತವನ್ನು ಕಂಡಿದ್ದು, ಇದರಿಂದಾಗಿ ಸರ್ಕಾರಕ್ಕೆ ತಲೆಬಿಸಿ ಉಂಟಾಗಿದೆ. ಹೇಗಾದರೂ ಮಾಡಿ ದೇಶದಲ್ಲಿ ಜನನ ದರವನ್ನು ಹೆಚ್ಚಿಸಬೇಕು, ಯುವ ಜನತೆಯಲ್ಲಿ ಮದುವೆ ಮತ್ತು ಕೌಟುಂಬಿಕ ಜೀವನದ ಮೇಲಿನ ಆಸಕ್ತಿಯನ್ನು ಹೆಚ್ಚಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ‘ಪ್ರೇಮ ಶಿಕ್ಷಣ’ ಕೋರ್ಸ್ ಒದಗಿಸಬೇಕೆನ್ನುವ ವಿಶೇಷ ಕ್ರಮವನ್ನು ಚೀನಾ ಸರ್ಕಾರ ಕೈಗೊಂಡಿದೆ. ಮದುವೆ, ಪ್ರೀತಿ, ಮಕ್ಕಳನ್ನು ಹೊಂದುವುದು ಮತ್ತು ಕುಟುಂಬದ ಬಗ್ಗೆ ಯುವಕರಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.
ವಾಸ್ತವವಾಗಿ, ಚೀನಾದ ಜನಸಂಖ್ಯೆಯು ಸುಮಾರು 140 ಕೋಟಿ. ಅಂದರೆ ಪ್ರಸ್ತುತ ಚೀನಾ ವಿಶ್ವದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಆದರೆ ಆತಂಕದ ವಿಷಯವೇನೆಂದರೆ ಇಲ್ಲಿ ಮಕ್ಕಳು ಮತ್ತು ಯುವ ಜನತೆಗಿಂತ ವಯಸ್ಸಾದವರ ಸಂಖ್ಯೆಯೇ ಹೆಚ್ಚಿದೆ. ಹಾಗಾಗಿ ಭವಿಷ್ಯದ ಏಳಿಗೆಯ ದೃಷ್ಟಿಯಿಂದ ಲವ್ ಎಜುಕೇಷನ್ ನೀಡಬೇಕು ಎನ್ನುವ ಹೊಸ ಉಪಕ್ರಮವನ್ನು ಜಾರಿಗೊಳಿಸಿದೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಅತಿಥಿಗಳಿಗಾಗಿ ತಯಾರಾಯ್ತು ಮೆಣಸಿನಕಾಯಿಯ ವಿಶೇಷ ಹಲ್ವಾ; ವಿಡಿಯೋ ವೈರಲ್
ಜೀವನ ಮಟ್ಟ ಸುಧಾರಣೆ, ಮಹಿಳೆಯರ ಉದ್ಯೋಗ, ಉನ್ನತ ಶಿಕ್ಷಣ, ಯುವ ಜನತೆಗೆ ಪ್ರೀತಿ ಪ್ರೇಮದಲ್ಲಿ ಆಸಕ್ತಿ ಕಡಿಮೆಯಾಗಿರುವುದು ಇವೆಲ್ಲವೂ ಚೀನಾದಲ್ಲಿ ಜನನ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಚೈನಾ ಪಾಪ್ಯುಲೇಶನ್ ನ್ಯೂನ್ ನಡೆಸಿದ ಸಮೀಕ್ಷೆಯು 57% ಶೇಕಡಾ ಕಾಲೇಜು ವಿದ್ಯಾರ್ಥಿಗಳು ಪ್ರೇಮ ಸಂಬಂಧದಲ್ಲಿ ಆಸಕ್ತಿಯನ್ನು ಹೊಂದಿಲ್ಲ ಮತ್ತು ಮದುವೆ, ಮಕ್ಕಳು ಕೌಟುಂಬಿಕ ಜೀವನದ ಬಗ್ಗೆ ಯಾವುದೇ ಮನೋಭಾವವನ್ನು ಹೊಂದಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರೀತಿ-ಪ್ರೇಮ, ಮದುವೆ, ಮಕ್ಕಳು ಕೌಟುಂಬಿಕ ಜೀವನದಲ್ಲಿ ಆಸಕ್ತಿಯನ್ನು ಮೂಡಿಸಲು, ಜನಸಂಖ್ಯೆಯ ಕುಸಿತವನ್ನು ತಡೆಗಟ್ಟಲು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಪ್ರೇಮ ಶಿಕ್ಷಣವನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ. ಇದಲ್ಲದೆ, ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿ ಆರೋಗ್ಯವಂತ ಮಗುವನ್ನು ಹೆರಬೇಕು ಎಂದು ಸಹ ಹೇಳಲಾಗಿದೆ. ಆದರೆ ಇದು ಯುವಜನತೆಯ ಮೇಲೆ ಪರಿಣಾಮ ಬೀರುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿದೆ ಎನ್ನುತ್ತಾರೆ ತಜ್ಞರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ