AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇದೇ ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿದು ಬಾಬಾ ರಾಮ್‌ದೇವ್‌ ಏನಂದ್ರು ನೋಡಿ…

ಯೋಗ ಗುರು ಬಾಬಾ ರಾಮ್‌ದೇವ್ ಅವರು ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಯೋಗದ ಜೊತೆಗೆ ಆಯುರ್ವೇದಕ್ಕೂ ಪ್ರಾಮುಖ್ಯತೆ ನೀಡುವ ಬಾಬಾ ರಾಮ್‌ದೇವ್‌ ಅವರು ಇತ್ತೀಚಿಗೆ ಕತ್ತೆಯ ಹಾಲಿನ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸ್ವತಃ ತಾವೇ ಕತ್ತೆ ಹಾಲು ಕರೆದು ಕುಡಿದಿದ್ದು, ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

Viral: ಇದೇ ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿದು ಬಾಬಾ ರಾಮ್‌ದೇವ್‌ ಏನಂದ್ರು ನೋಡಿ…
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 04, 2024 | 6:16 PM

Share

ಹಸು, ಎಮ್ಮೆ ಹಾಲಿಗಿಂತ ಕತ್ತೆ ಹಾಲು ತುಂಬಾನೇ ಒಳ್ಳೆಯದು ಹೇಳ್ತಾರೆ. ಇದರಲ್ಲಿರುವ ಅನೇಕ ಖನಿಜ ಮತ್ತು ಪೋಷಕಾಂಶಗಳ ಕಾರಣದಿಂದ ಕತ್ತೆ ಹಾಲು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ ಈಜಿಪ್ಟ್‌ ರಾಣಿ ಕ್ಲಿಯೋಪಾತ್ರ ತನ್ನ ಸೌಂದರ್ಯ ವರ್ಧನೆಗಾಗಿ ಕತ್ತೆ ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎಂದು ಕೂಡಾ ಹೇಳಲಾಗುತ್ತೆ. ಇದೀಗ ಯೋಗ ಗುರು ಬಾಬಾ ರಾಮ್‌ದೇವ್‌ ಅವರು ಕೂಡಾ ಕತ್ತೆ ಹಾಲಿನ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸ್ವತಃ ತಾವೇ ಕತ್ತೆ ಹಾಲು ಕರೆದು ಕುಡಿದಿದ್ದು, ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಬಾಬಾ ರಾಮ್‌ದೇವ್‌ ಅವರು ಸ್ವತಃ ತಾವೇ ಕತ್ತೆ ಹಾಲು ಕರೆದು ಅದನ್ನು ಸೇವನೆ ಮಾಡಿ ನಂತರ ಅದರ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಾನು ಒಂಟೆ, ಹಸು, ಕುರಿ, ಮೇಕೆಗಳ ಹಾಲನ್ನು ಕುಡಿದಿದ್ದೇನೆ, ಆದ್ರೆ ಇದೇ ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿದಿದ್ದು ಎಂದು ಹೇಳಿ, ಕತ್ತೆ ಹಾಲು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿ. ಇದೊಂದು ಸೂಪರ್‌ ಟಾನಿಕ್‌ ಇದ್ದಂತೆ. ಇದರಲ್ಲಿ ಲ್ಯಾಕ್ಟೋಫೆರಿನ್‌ ಎಂಬ ಉತ್ಕರ್ಷಣ ನಿರೋಧಕ ಅಂಶವಿದ್ದು, ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಮತ್ತು ಇದೊಂದು ಚರ್ಮದ ಆರೈಕೆಗಾಗಿ ಇರುವ ಸೂಪರ್‌ ಕಾಸ್ಮೆಟಿಕ್‌ ಆಗಿದ್ದು, ಈಜಿಪ್ಟ್‌ ರಾಣಿ ಕ್ಲಿಯೋಪಾತ್ರ ಕೂಡಾ ತನ್ನ ಸೌಂದರ್ಯ ವರ್ಧನೆಗಾಗಿ ಕತ್ತೆ ಹಾಲಿನಿಂದಲೇ ಸ್ನಾನ ಮಾಡುತ್ತಿದ್ದಳು ಎಂಬ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ.

Snehamordani ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಬಾ ರಾಮ್‌ದೇವ್‌ ಕತ್ತೆಯ ಹಾಲು ಕರೆಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ನಂತರ ಇದೇ ಮೊದಲ ಬಾರಿಗೆ ನಾನು ಈ ಹಾಲನ್ನು ಕುಡಿತಿದ್ದೇನೆ ಎಂದು ಒಂದು ಸ್ಪೂನ್‌ ಹಾಲು ಸೇವಿಸಿ ಆಹಾ… ಇದರ ರುಚಿ ತುಂಬಾನೆ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಈಜಿಪ್ಟ್‌ ರಾಣಿ ಕ್ಲಿಯೋಪಾತ್ರ ಸೌಂದರ್ಯ ವರ್ಧನೆಗೆ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳಂತೆಯಲ್ಲಾ ಎಂದು ಹೇಳುತ್ತಾ ಕತ್ತೆ ಹಾಲಿನ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಸಹ ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ