ಶೌಚಾಲಯದೊಳಗೆ ಹೆಣ್ಣು ನಾಯಿ ಜೊತೆ ವೃದ್ಧನ ಅಸಭ್ಯ ವರ್ತನೆ; ಶ್ವಾನವನ್ನು ರಕ್ಷಿಸಿದ ಮಹಿಳಾ ಕಾರ್ಯಕರ್ತೆ
ಮಹಾರಾಷ್ಟ್ರದ ನೈಗಾಂವ್‌ನಲ್ಲಿ ಸಾರ್ವಜನಿಕ ಶೌಚಾಲಯದೊಳಗೆ ತಾಯಿ ನಾಯಿಯೊಂದಿಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತಿಸಿ, ಅದನ್ನು ಲೈಂಗಿಕವಾಗಿ ಹಿಂಸಿಸಿದ್ದಾನೆ. ಈ ವೇಳೆ ವಿಷಯ ತಿಳಿದು ಆ ಮುಗ್ಧ ಪ್ರಾಣಿಯನ್ನು ಮಹಿಳಾ ಕಾರ್ಯಕರ್ತೆ ರಕ್ಷಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಮುಂಬೈ: ಪ್ರಾಣಿ ಹಿಂಸೆಯ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನೈಗಾಂವ್‌ನಲ್ಲಿನ ಶೌಚಾಲಯದೊಳಗೆ ನಡೆದಿದೆ. ಈ ಟಾಯ್ಲೆಟ್ನಲ್ಲಿ ವೃದ್ಧರೊಬ್ಬರು ಹೆಣ್ಣು ನಾಯಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಮಹಿಳಾ ಪ್ರಾಣಿ ಕಾರ್ಯಕರ್ತೆಯೊಬ್ಬರು ಕಟ್ಟಡ ನಿರ್ಮಾಣ ಸ್ಥಳದ ಶೌಚಾಲಯದೊಳಗೆ ಹೆಣ್ಣು ನಾಯಿಯೊಂದಿಗೆ ವೃದ್ಧ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಕೆ ಈ ಘಟನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದು ಕೂಡಲೇ ವೈರಲ್ ಆಗಿದೆ.
ಈ ವಿಡಿಯೊದಲ್ಲಿ 60 ವರ್ಷದ ವ್ಯಕ್ತಿ ನಾಯಿಯನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿರುವುದನ್ನು ನೋಡಬಹುದು. ತನ್ನ ಲೈಂಗಿಕ ಉದ್ದೇಶವನ್ನು ತೀರಿಸಿಕೊಳ್ಳಲು ಆತ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಅಪಾಯದಿಂದ ರಕ್ಷಿಸಿದ್ದಾರೆ. ನಾಯಿಯನ್ನು ಸಾರ್ವಜನಿಕ ಶೌಚಾಲಯಕ್ಕೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಪಡೆದ ನಂತರ ತಾನು ಸ್ಥಳಕ್ಕೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ಹೃದಯವನ್ನೇ ಒಡೆದು ಮದುಮಕ್ಕಳ ಎಂಟ್ರಿ; ವಿಡಿಯೋ ವೈರಲ್
ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅಮಾಯಕ ಪ್ರಾಣಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ