2.56 ಕೋಟಿ ನಗದು, 75 ಲಕ್ಷ ಮೌಲ್ಯದ ಕಾರು: ಅದ್ದೂರಿ ಮದುವೆಯಲ್ಲಿ ವಧುವಿನ ಕುಟುಂಬದಿಂದ ವರನಿಗೆ ಬಂಪರ್‌ ಉಡುಗೊರೆ

ಹೆಚ್ಚಿನವರು ಮದುವೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮದುವೆಗಾಗಿ ಕೋಟಿಗಟ್ಟಲೆ ಹಣವನ್ನು ನೀರಿನಂತೆ ಖರ್ಚು ಮಾಡಿದ್ದು, ಮದುವೆ ಮಂಟಪದಲ್ಲಿ ವರನಿಗೆ ವಧುವಿನ ಕುಟುಂಬದವರು 2.56 ಕೋಟಿ ನಗದು, 75 ಲಕ್ಷ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ರಾಯಲ್‌ ವೆಡ್ಡಿಂಗ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 04, 2024 | 1:40 PM

ಭಾರತದಲ್ಲಿ ಹೆಚ್ಚಿನವರು ಮದುವೆ ಸಮಾರಂಭಗಳಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಮನೆಯ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಬೇಕೆಂದು ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸುತ್ತಾರೆ. ಈ ಮಧ್ಯೆ ಇಲ್ಲೊಂದು ರಾಯಲ್‌ ಆಗಿ ನಡೆದ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮದುವೆ ಸುದ್ದಿಯಲ್ಲಿರುವುದು ಐಷಾರಾಮಿ ಅಲಂಕಾರಗಳು, ಬಗೆಬಗೆಯ ಆಹಾರ, ರಾಜಾತಿಥ್ಯಗಳಿಗಲ್ಲ. ಬದಲಿಗೆ ಈ ರಾಯಲ್‌ ವೆಡ್ಡಿಂಗ್‌ ಸುದ್ದಿಯಾಗಿದ್ದು, ವಧುವಿನ ಕುಟುಂಬದವರು ವರನಿಗೆ ನೀಡಿದ ಬಂಪರ್‌ ಉಡುಗೊರೆಗಳಿಗಾಗಿ. ಹೌದು ವಧುವಿನ ಮನೆಯವರು ಮದುಮಗನಿಗೆ 75 ಲಕ್ಷ ಮೌಲ್ಯದ ಕಾರು, 2.56 ಕೋಟಿ ಹಣವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿದ್ದು, ಈ ದೃಶ್ಯ ಸಖತ್‌ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಮೀರತ್‌ನ ರೆಸಾರ್ಟ್‌ ಒಂದರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಈ ಅದ್ದೂರಿ ಮದುವೆ ಸಮಾರಂಭ ನೆರವೇರಿದ್ದು, ಮದುವೆ ಮಂಟಪದಲ್ಲಿಯೇ ವಧುನಿನ ಕುಟುಂಬಸ್ಥರು ವರನಿಗೆ ಸೂಟ್‌ಕೇಸ್‌ನಲ್ಲಿ 2 ಕೋಟಿ 56 ಲಕ್ಷ ರೂ. ಹಣವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿದ್ದಾರೆ. ಜೊತೆಗೆ ಕಾರ್‌ ಖರೀದಿಸಲು 75 ಲಕ್ಷ ರೂ, ಮದುವೆ ನೆರವೇರಿಸಿದ ಮೌಲಿಗೆ 11 ಲಕ್ಷ ರೂ, ಸ್ಥಳೀಯ ಮಸೀದಿಗೆ ದೇಣಿಗೆಯಾಗಿ 8 ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಇದಲ್ಲದೆ ʼಜೂತಾ ಚೂರೈʼ ಎಂಬ ಸಂಪ್ರದಾಯದ ಭಾಗವಾಗಿ ವರನ ಶೂ ಕದ್ದ ವಧುನಿಕ ಕಡೆಯವರಿಗೆ ಮದುಮಗನ ಮನೆಯವರು 11 ಲಕ್ಷ ರೂ. ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ರಾಯಲ್‌ ವೆಡ್ಡಿಂಗ್‌ ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಕುರಿತ ವಿಡಿಯೋವನ್ನು aaezoo31054 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕಡೆಯವರು ಪರಸ್ಪರ ಎದುರುಬದುರಾಗಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ವರದಕ್ಷಿಣೆಯ ರೂಪವಾಗಿ ವರನಿಗೆ ಸೂಟ್‌ಕೇಸ್‌ನಲ್ಲಿ 2.56 ಕೋಟಿ ರೂ. ಹಣ ಮತ್ತು ಕಾರ್‌ ಖರೀದಿಸಲು 75 ಲಕ್ಷ ರೂಪಾಯಿಯನ್ನು ವಧುವಿನ ಕಡೆಯವರು ವರನಿಗೆ ನೀಡಿದ್ರೆ, ವರನ ಕುಟುಂಬಸ್ಥರು ಜೂತಾ ಚೂರೈಗಾಗಿ ವಧುನಿನ ಕಡೆಯವರಿಗೆ 11 ಲಕ್ಷ ರೂ. ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ನಾನು 2025ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಹೋಗಲಿದ್ದೇನೆ ಎಂದ ಗೋವಾ ಮೂಲದ ವ್ಯಕ್ತಿ, ಈ ನಿರ್ಧಾರಕ್ಕೆ ಕಾರಣ ಏನ್‌ ಗೊತ್ತಾ?

ಡಿಸೆಂಬರ್‌ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಮದುವೆಯೋ ಅಥವಾ ವ್ಯವಹಾರವೋ ತಿಳಿಯುತ್ತಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರಿಂದ ಬಡ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!