Viral Video: ಇದ್ಯಾವುದಪ್ಪ ಮೇಕೆಗಳ ಮರ; ವಿಡಿಯೋ ವೈರಲ್​​

| Updated By: ಅಕ್ಷತಾ ವರ್ಕಾಡಿ

Updated on: Jan 07, 2024 | 11:06 AM

ಪ್ರಾಣಿಗಳ ಕುರಿತ ಹಲವು ಅಚ್ಚರಿಯ ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ. ಅಂತಹ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಹಲವು ಮೇಕೆಗಳು ಮರಮೇರಿ ಕುಳಿತು ಮರದಲ್ಲಿನ ಹಣ್ಣುಗಳನ್ನು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು. ಇದನ್ನು ನೋಡಿ, ಇದ್ಯಾವುದಪ್ಪ ಹೂವು, ಹಣ್ಣುಗಳನ್ನು ಬಿಟ್ಟು ಮೇಕೆಗಳನ್ನು ಬೆಳೆಯುವ ವಿಶೇಷ ಮರ ಅಂತ ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ.

Viral Video: ಇದ್ಯಾವುದಪ್ಪ ಮೇಕೆಗಳ ಮರ; ವಿಡಿಯೋ ವೈರಲ್​​
Goat tree
Image Credit source: instagram
Follow us on

ವಿಡಿಯೋವೊಂದು  ವೈರಲ್ ಆಗಿದ್ದು, ಅಲ್ಲಾ ನಾವು ಮರಗಳಲ್ಲಿ ಹೂವು, ಹಣ್ಣುಗಳನ್ನು ಬೆಳೆಯುವುದನ್ನು ನೋಡಿದ್ದೇವೆ, ಆದ್ರೆ ಈ ಮರದಲ್ಲಿ ಏನಿದು ಮೇಕೆಗಳು ಬೆಳೆದು ನಿಂತಿವೆಯಲ್ಲ ಅಂತ ಮರದ ಕೊಂಬೆಗಳಲ್ಲಿ ಕುಳಿತಿದ್ದ ಮೇಕೆಗಳ ಹಿಂಡನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅರೇ… ಮೇಕೆಗಳು ಹುಲ್ಲುಗಳನ್ನು ತಿಂದು ಜೀವಿಸೋದಲ್ವಾ, ಆದ್ರೆ ಅವುಗಳು ಮರವೇರಿ ಮರಗಳ ಎಲೆಗಳನ್ನೆಲ್ಲಾ ತಿನ್ನುವಂತಹ ದೃಶ್ಯವನ್ನು ನಾವೆಂದು ನೋಡಿಲ್ಲಪ್ಪಾ. ಅಷ್ಟಕ್ಕೂ ಆ ಮೇಕೆಗಳು ಏನಕ್ಕೆ ಮರವೇರಿ ಕುಳಿತಿವೆ ಅಂತ ನೀವು ಯೋಚ್ನೆ ಮಾಡ್ತಿದ್ದೀರಾ?

ಮೂಲತಃ ಇದು ಮೊರೆಕೋದ ಪ್ರವಾಸಿ ತಾಣವೊಂದರ ದೃಶ್ಯವಾಗಿದ್ದು, ಈ ಪ್ರದೇಶದಲ್ಲಿ ಅರ್ಗಾನ್ ಹಣ್ಣಿನ ಮರವಿದೆ, ವಿಶೇಷವಾಗಿ ಈ ರುಚಿಕರ ಹಣ್ಣನ್ನು ಮೇಕೆಗಳು ಬಹಳ ಇಷ್ಟಪಟ್ಟು ತಿನ್ನುತ್ತವೆ. ಅದಕ್ಕಾಗಿಯೇ ಈ ಪ್ರದೇಶದಲ್ಲಿ ಮೇಕೆಗಳ ಹಿಂಡು ಅರ್ಗಾನ್ ಹಣ್ಣಿನ ಮರವೇರಿ ಕುಳಿತು, ಮರದಲ್ಲಿನ ಹಣ್ಣುಗಳನ್ನು ತಿನ್ನುತ್ತವೆ. ಮೇಕೆಗಳು ಮರವೇರುವ ಈ ಸುಂದರ ದೃಶ್ಯವನ್ನು ನೋಡಲೆಂದೇ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಮೇಕೆಗಳು ಮರವೇರಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ

ಸೂರಜ್ ಕುಶ್ವಾ (@surajkushwah5081) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮೇಕೆಗಳು ಮರವೇರಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಮೇಕೆಗಳ ಹಿಂಡೊಂದು ಆರ್ಗಾನ್ ಹಣ್ಣಿನ ಮರವೇರಿ, ತಮ್ಮ ಇಷ್ಟದ ಹಣ್ಣುಗಳನ್ನು ಹುಡುಕುತ್ತಾ ನಿಂತಿರುತ್ತವೆ. ಈ ವಿಶೇಷ ಮೇಕೆಗಳ ಮರವನ್ನು ನೋಡಲೆಂದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೂಡ ಇಲ್ಲಿ ನೆರೆದಿರುವ ದೃಶ್ಯವನ್ನು ಕಾಣಬಹುದು.

ಈ ವೈರಲ್ ವಿಡಿಯೋ 11.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿವೆ. ಜೊತೆಗೆ  ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನನ್ನ ಜಮೀನಿನಲ್ಲೂ ಈ ವಿಶೇಷ ಮೇಕೆ ಮರವನ್ನು ನೆಡಬೇಕುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೇಕೆಗಳು ಮರವೇರುವುದುಂಟೆ; ಬಿಡಿ ಈ ಕಾಲದಲ್ಲಿ ಏನು ಬೇಕಾದರೂ ಆಗಬಹುದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೂ ಈ ಮೇಕೆ ಮರವನ್ನು ನೆಡುವ ಆಸೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ