ಹಲೋ ನಿಮ್ಮ ಸಮವಸ್ತ್ರ ಎಲ್ಲಿದೆ? ತರಗತಿಯೊಳಗೆ ಬಂದು ಬಾಲಕನ ಪಕ್ಕದಲ್ಲಿ ಕೂತ ಶ್ವಾನ, ಕ್ಯೂಟ್​​ ವಿಡಿಯೋ ಇಲ್ಲಿದೆ ನೋಡಿ

ಶ್ವಾನ ಪ್ರೇಮಿಗಳು ಈ ವಿಡಿಯೋ ನೋಡಿದ್ರೆ ಖಂಡಿತ ಇಷ್ಟಪಡುತ್ತೀರಾ, ಹೌದು ಇಲ್ಲೊಂದು ನಾಯಿ ತರಗತಿಯೊಳಗೆ ಬಂದು ಬಾಲಕನ ಪಕ್ಕದಲ್ಲಿ ಕೂತಿರುವ ಕ್ಯೂಟ್​​​ ವಿಡಿಯೋ ಭಾರೀ ವೈರಲ್​​ ಆಗಿದೆ. ಇದೀಗ ಈ ವಿಡಿಯೋ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ ಹಾಗೂ ಮಿಲಿಯನ್‌ಗಟ್ಟಲೆ​​​​ ಲೈಕ್​​​, ಕಮೆಂಟ್​​ ಕೂಡ ಬಂದಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡಿ.

ಹಲೋ ನಿಮ್ಮ ಸಮವಸ್ತ್ರ ಎಲ್ಲಿದೆ? ತರಗತಿಯೊಳಗೆ ಬಂದು ಬಾಲಕನ ಪಕ್ಕದಲ್ಲಿ ಕೂತ ಶ್ವಾನ, ಕ್ಯೂಟ್​​ ವಿಡಿಯೋ ಇಲ್ಲಿದೆ ನೋಡಿ
ವೈರಲ್​​ ವಿಡಿಯೋ
Edited By:

Updated on: Jul 18, 2025 | 2:36 PM

ಶ್ವಾನ (Dog) ಪ್ರೇಮಿಗಳು ಈ ವಿಡಿಯೋವನ್ನು ಖಂಡಿತ ಇಷ್ಟಪಡುತ್ತೀರಾ, ಶ್ವಾನದ​​​​​ ಅದೆಷ್ಟೋ ಕ್ಯೂಟ್​​​ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಲೇ ಇರುತ್ತದೆ. ಇಲ್ಲೊಂದು ಅಂತಹದ್ದೇ ಮುದ್ದಾದ ವಿಡಿಯೋ  ಭಾರೀ ವೈರಲ್​​ ಆಗಿದೆ. ಈ ವಿಡಿಯೋ ನೋಡಿ ಶ್ವಾನ ಪ್ರೇಮಿಗಳು ಮನಸೋತಿದ್ದಾರೆ. ಬಾಲಕನ ಜತೆಗೆ ನಾಯಿಯೊಂದು ಶಾಲೆಗೆ ಬಂದಿದ್ದು, ಅದು ಕೂಡ ಅವನ ಜತೆಗೆ ಪಾಠ ಕೇಳಲು ಬಂದಿರಬೇಕು ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ಹೆಲ್ಪ್‌ಬೆಜುಬಾನ್ಸ್ ಇನ್‌ಸ್ಟಾಗ್ರಾಮ್‌ (HelpBeZubans Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ತರಗತಿ ನಡೆಯಬೇಕಿದ್ದರೆ, ಶ್ವಾನವೊಂದು ಬಾಲಕನ ಪಕ್ಕದಲ್ಲಿ ಬಂದು ಕೂರುವ ದೃಶ್ಯವನ್ನು ಕಾಣಬಹುದು. ನಂತರ ಶ್ವಾನ  ಬಾಲಕನಿಗೆ ಕೈ ಕೊಡುತ್ತದೆ.  ಆ ಬಾಲಕ ಕೂಡ ಯಾವುದೇ ಭಯವಿಲ್ಲದೆ ಆ ಶ್ವಾನದ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ. ಬಳಿಕ ಆ ಬಾಲಕ  ಅಲ್ಲಿದ್ದ ತನ್ನ ಸ್ನೇಹಿತರಿಗೂ  ನಾಯಿಯನ್ನು ತೋರಿಸಿ ಖುಷಿಪಟ್ಟಿದ್ದಾನೆ. ಈ ದೃಶ್ಯ ಲಕ್ಷಾಂತರ ಸಾಮಾಜಿಕ ಜಾಲತಾಣ ಬಳಕೆದಾರರ ಮನಸ್ಸು ಗೆದ್ದಿದೆ. ಈ ವಿಡಿಯೋ. 3.8 ಮಿಲಿಯನ್​​​ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದ್ದು, 4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು  ಮತ್ತು 5,000 ಕ್ಕೂ ಹೆಚ್ಚು ಕಾಮೆಂಟ್‌ ಪಡೆದುಕೊಂಡಿದೆ.

ಇದನ್ನೂ ಓದಿ
ಈಜುತ್ತಾ ದಡ ಸೇರಿ ಕಾಡಿನ ಕಡೆಗೆ ಓಡಿ ಹೋದ ಚಿರತೆ
ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್
ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ

ಇದನ್ನೂ ಓದಿ: ಅಪ್ಪನ 14 ವರ್ಷದ ಆಸೆಯನ್ನು ಮಗ ಈಡೇರಿಸಿದ ಅದ್ಭುತ ಕ್ಷಣ ಹೇಗಿದೆ ನೋಡಿ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಬ್ಬ ಬಳಕೆದಾರರು, “ನಾನು ಈ ವೀಡಿಯೊವನ್ನು ಇಡೀ ದಿನ ನೋಡಬಹುದು” ಎಂದು ಬರೆದಿದ್ದಾರೆ. ಮತ್ತೊಬ್ಬರು “ಅವನ ಸ್ಲೇಟ್ ಪೆನ್ಸಿಲ್ ಅನ್ನು ಯಾರು ತೆಗೆದುಕೊಂಡರು? ಅದನ್ನು ಕೊಡಿ, ಅವನು ಪರೀಕ್ಷೆಗೆ ತಡವಾಗಿ ಬರುತ್ತಿದ್ದಾನೆ” ಎಂದು ತಮಾಷೆಯಾಗಿ ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು “ನಿಮ್ಮ ಸಮವಸ್ತ್ರ ಎಲ್ಲಿದೆ?ʼ ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅವನ ಕಣ್ಣುಗಳನ್ನು ನೋಡಿ ಎಂದು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ