ತಾಯಿ ಮರಣದ ಬಳಿಕ ಸ್ಪಾಟಿಫೈ ಖಾತೆ ಡಿಲೀಟ್ ಮಾಡಿದ ಮಹಿಳೆ, ಸ್ಪಾಟಿಫೈನಿಂದ ಬಂದ ಸಂದೇಶ ನೋಡಿ ಶಾಕ್

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ತಮ್ಮ ಜೀವನದಲ್ಲಾದ ಬೇಸರ, ಖುಷಿ ಹೀಗೆ ಕೆಲವೊಂದು ಇಂಟರೆಸ್ಟಿಂಗ್‌ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಮಹಿಳೆಯೊಬ್ಬರು ತನ್ನ ತಾಯಿಯ ಮರಣದ ಬಳಿಕ ತಾಯಿಯ ಸ್ಪಾಟಿಫೈ ಸಂಗೀತ ಅಪ್ಲಿಕೇಶನ್ ಚಂದಾದಾರಿಕೆ ರದ್ದುಗೊಳಿಸಿದ್ದಾರೆ. ಈ ವೇಳೆ ಮಹಿಳೆಯೂ ತನಗಾದ ಅನುಭವವನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ತಾಯಿ ಮರಣದ ಬಳಿಕ ಸ್ಪಾಟಿಫೈ ಖಾತೆ ಡಿಲೀಟ್ ಮಾಡಿದ ಮಹಿಳೆ, ಸ್ಪಾಟಿಫೈನಿಂದ ಬಂದ ಸಂದೇಶ ನೋಡಿ ಶಾಕ್
ವೈರಲ್ ಪೋಸ್ಟ್​
Edited By:

Updated on: Feb 08, 2025 | 5:04 PM

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಿರುತ್ತಾರೆ. ಆದರೆ ಇದೀಗ ಇಲ್ಲೊಬ್ಬ ಮಹಿಳೆಯೂ ತನ್ನ ತಾಯಿಯ ಮರಣದ ಬಳಿಕ ತಾಯಿಯ ಸ್ಪಾಟಿಫೈ ಸಂಗೀತ ಅಪ್ಲಿಕೇಶನ್ ಚಂದಾದಾರಿಕೆಯನ್ನು ರದ್ದುಗೊಳಿಸಿದ್ದು, ಈ ವೇಳೆ ಮಹಿಳೆಯೂ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ರೆಡ್ಡಿಟ್ ಬಳಕೆದಾರ ಟ್ಯಾಮಿಟ್ರೆಕ್ಸ್ ಹೆಸರಿನ ಖಾತೆಯಲ್ಲಿ ಸ್ಪಾಟಿಫೈ ನೊಂದಿಗೆ ನಡೆಸಿದ ಸಂಭಾಷಣೆಯನ್ನು ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದು, ‘ನನ್ನ ತಾಯಿಯ ಮರಣದ ಬಳಿಕ ಸ್ಪಾಟಿಫೈ ಖಾತೆಯನ್ನು ನಾನು ಸ್ಥಗಿತಗೊಳಿಸಿದೆ. ಅದು ನಾನು ನಿರೀಕ್ಷಿಸಿದ್ದಕ್ಕಿಂತ ತುಂಬಾ ವಿಭಿನ್ನವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಈ ಸ್ಕ್ರೀನ್ ಶಾಟ್ ನಲ್ಲಿ, ಸ್ಪಾಟಿಫೈ ಅಪ್ಲಿಕೇಶನ್ ರದ್ಧತಿಯ ಸಮಯದಲ್ಲಿ ಅಪ್ಲಿಕೇಶನ್ ತೊರೆಯುವ ನಿರ್ಧಾರಕ್ಕೆ ಕಾರಣವನ್ನು ಕೇಳಿತು. ಹೆಚ್ಚಿನ ಶುಲ್ಕಗಳು ಮತ್ತು ತಾಂತ್ರಿಕ ಸಮಸ್ಯೆಗಳು ಕಾರಣಗಳಿದ್ದರೂ, ಮಹಿಳೆಯೂ ತನ್ನ ತಾಯಿಯ ನಿಧನವನ್ನು ಉಲ್ಲೇಖಿಸುವ ಮೂಲಕ “ನಾನು ಮರಣ ಹೊಂದಿದ್ದೇನೆ” ಎಂದು ಟೈಪ್ ಮಾಡಿದ್ದಾಳೆ.

ಈ ಖಾತೆಯೂ ರದ್ದಾದ ತಕ್ಷಣವೇ ಅಪ್ಲಿಕೇಶನ್ ನಿಂದ, “ವಿದಾಯ ಹೇಳುವುದು ಕಷ್ಟ, ಆದರೆ ನೀವು ಯಾವಾಗ ಬೇಕಾದರೂ ಪ್ರೀಮಿಯಂಗೆ ಸೇರಬಹುದು” ಎಂಬ ವಿಚಿತ್ರ ಸಂದೇಶವೊಂದು ಬಂದಿತು. ಆ ತಕ್ಷಣವೇ ಆಪ್ ನಲ್ಲಿ ತಾಯಿಗೆ “ವಿದಾಯ” ಪ್ಲೇಪಟ್ಟಿಯನ್ನು ರಚಿಸಿದ್ದು, ಈ ಪ್ರತಿಕ್ರಿಯೆಗೆ ಖುಷಿ ಪಡಬೇಕೋ ತಿಳಿದಿಲ್ಲ. ಆದರೆ ಈ ಪ್ರತಿಕ್ರಿಯೆ ಸ್ವಯಂಚಾಲಿತವಾಗಿದೆ ಎಂದು ನನಗೆ ಅರ್ಥವಾಯಿತು. ನನ್ನ ತಾಯಿಯ ಮರಣದ ಕಾರಣ ನಾನು ಖಾತೆಯನ್ನು ರದ್ದುಗೊಳಿಸುತ್ತಿದ್ದೇನೆ ಎಂದು ಅವರಿಗೆ ತಿಳಿದಿರಲಿಲ್ಲ. ಆದರೆ ಪ್ಲೇಪಟ್ಟಿ ತುಂಬಾನೇ ತಮಾಷೆಯಾಗಿತ್ತು. ನಾನು ಅದನ್ನು ಕೇಳಿಯೇ ನಕ್ಕಿದ್ದೇನೆ ಎಂದಿದ್ದಾಳೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

I cancelled my dead moms Spotify and it did not go as expected.
byu/tammytrex inmildlyinfuriating

ಈ ಪೋಸ್ಟ್ ಗೆ ನಾನಾ ರೀತಿಯ ಪತ್ರಿಕ್ರಿಯೆಗಳು ವ್ಯಕ್ತವಾಗಿದ್ದು, ಬಳಕೆದಾರರೊಬ್ಬರು, ‘ನನ್ನ ತಾಯಿ ತೀರಿಕೊಂಡಾಗ ನನಗೆ ಇದೇ ಸಮಸ್ಯೆ ಇತ್ತು. ಆದರೆ, ನಾನು ಮರಣ ಪ್ರಮಾಣಪತ್ರದ ನಿಜವಾದ ಪ್ರತಿಯನ್ನು ಮೇಲ್ ಮಾಡಬೇಕಾಗಿತ್ತು. ಆದರೆ ಅವರು ಇನ್ನೂ ತಿಂಗಳವರೆಗೆ ಖಾತೆಯನ್ನು ರದ್ದುಗೊಳಿಸಲು ನಿರಾಕರಿಸಿದರು’ ಎಂದಿದ್ದಾರೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ, ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ

ಮತ್ತೊಬ್ಬ ಬಳಕೆದಾರ, ‘ ನೀವು ತಾಯಿಯನ್ನು ಕಳೆದುಕೊಂಡದ್ದಕ್ಕೆ ನನಗೆ ತುಂಬಾ ವಿಷಾದವಿದೆ, ಆದರೆ ಸ್ಪಾಟಿಫೈ ಸ್ವಲ್ಪ ಹಾಸ್ಯದೊಂದಿಗೆ ಆ ನೋವಿನಿಂದ ಸಹಾಯ ಮಾಡಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ‘ಸರಿಸುಮಾರು ಒಂದು ವರ್ಷದ ಹಿಂದೆ ತಮ್ಮ ಸ್ನೇಹಿತ ತನ್ನ ಸ್ಪಾಟಿಫೈ ಚಂದಾದಾರಿಕೆಯನ್ನು ರದ್ದುಗೊಳಿಸಿ “ವಿದಾಯ” ಪ್ಲೇಪಟ್ಟಿಯನ್ನು ಸ್ವೀಕರಿಸಿದ್ದಾರೆಂದು’ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ