Video: ಜೋರು ಮಳೆಗೆ ಪುಟ್ಟ ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ನಡೆದ ಅಮ್ಮ
ತಾಯಿ ಪ್ರೀತಿಯೇ ಹಾಗೇ... ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿಯೊಬ್ಬರು ತನ್ನ ಕಂದಮ್ಮ ಮಳೆಗೆ ಒದ್ದೆಯಾಗಬಾರದೆಂದು ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ಅಮ್ಮಾ ಕಣ್ಣಿಗೆ ಕಾಣುವ ದೇವರು. ತನ್ನ ಕುಟುಂಬ, ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಟ್ಟವಳು ಅಮ್ಮ. ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ವಾತ್ಸಲ್ಯ ಮೂರ್ತಿ ಆಕೆ. ಹೀಗೆ ತಾಯಿಯ ಪ್ರೀತಿ, ವಾತ್ಸಲ್ಯ, ತ್ಯಾಗಕ್ಕೆ ಸಂಬಂಧಿಸಿದ ಹಲವಾರು ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದೇ ದೃಶ್ಯವೊಂದು ವೈರಲ್ ಆಗಿದ್ದು, ತಾಯಿಯೊಬ್ಬರು ತನಗೆ ಕಷ್ಟವಾದರೂ ಪರವಾಗಿಲ್ಲ, ಆದ್ರೆ ನಮ್ಮ ಕಂದಮ್ಮ ಮಾತ್ರ ಈ ಮಳೆಗೆ ಒಂದು ಚೂರು ಒದ್ದೆಯಾಗಬಾರದೆಂದು ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ನೋಡುಗರ ಮನ ಗೆದ್ದಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ನಡೆದುಕೊಂಡು ಶಾಲೆಗೆ ಹೋಗಲು ಪುಟ್ಟ ಮಕ್ಕಳಿಗೆ ತುಂಬಾನೇ ಕಷ್ಟಕರವಾಗುತ್ತದೆ. ಆದ್ರೆ ನಮ್ಮ ಮಗಳಿಗೆ ಶಾಲೆಗೆ ಹೋಗಲು ಕಷ್ಟವಾಗಬಾರದು, ಆಕೆ ಮಳೆಯಲ್ಲಿ ಒದ್ದೆಯಾಗಬಾರದೆಂದು ಇಲ್ಲೊಬ್ಬರು ತಾಯಿ ಕೈಯಲ್ಲಿ ಕೊಡೆ ಹಿಡಿದು, ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
महारानी बना कर रखना उसे जिसने तुम्हें पूरी उम्र राजा बनाकर पाला है 🥹🌍🤴 pic.twitter.com/3IMDqK45ZH
— ज़िन्दगी गुलज़ार है ! (@Gulzar_sahab) July 21, 2024
ಈ ಕುರಿತ ಪೋಸ್ಟ್ ಒಂದನ್ನು Gulzar_sahab ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತನ್ನ ಕಂದ ಒಂದು ಚೂರು ಒದ್ದೆಯಾಗಬಾರದೆಂದು ತಾಯಿಯೊಬ್ಬರು ತಮ್ಮ ಮಗಳನ್ನು ಹೆಗಲ ಮೇಲೆ ಹೊತ್ತು ಸಾಗುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಊಟಕ್ಕೆ ಉಪ್ಪಿನಕಾಯಿ ನೀಡದ ಹೊಟೇಲ್, ಮಾಲೀಕನಿಗೆ ಬಿತ್ತು 35 ಸಾವಿರ ರೂ. ದಂಡ!
ಜುಲೈ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾಗಿಯೂ ಅಮ್ಮನ ತ್ಯಾಗ ಪ್ರೀತಿಗೆ ಬೆಲೆಕಟ್ಟಲಾಗದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಾಯಿಯ ಪ್ರೀತಿ ಆಕಾಶಕ್ಕಿಂತ ಮಿಗಿಲಾದುದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ