Viral: ಊಟಕ್ಕೆ ಉಪ್ಪಿನಕಾಯಿ ನೀಡದ ಹೊಟೇಲ್, ಮಾಲೀಕನಿಗೆ ಬಿತ್ತು 35 ಸಾವಿರ ರೂ. ದಂಡ!
ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ಊಟದ ಜೊತೆ ಉಪ್ಪಿನಕಾಯಿ ನೀಡದಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಗ್ರಾಹಕರ ನ್ಯಾಯಾಲಯ ಸರಿಯಾಗಿ ಬಿಸಿ ಮುಟ್ಟಿಸಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಊಟದಲ್ಲಿ ಉಪ್ಪಿನಕಾಯಿ ಮಿಸ್ ಆಗಿದ್ದು, ಇದರ ವಿರುದ್ಧ ಅವರು ಗ್ರಾಹಕರ ಆಯೋಗದ ಮೊರೆ ಹೋಗಿದ್ದು, ಊಟದೊಂದಿಗೆ ಉಪ್ಪಿನಕಾಯಿ ನೀಡದಿದ್ದಕ್ಕೆ ಇದೀಗ ನ್ಯಾಯಾಲಯ ಹೊಟೇಲ್ ಮಾಲೀಕನಿಗೆ 35 ಸಾವಿರ ರೂ. ದಂಡ ವಿಧಿಸಿದೆ.
ಊಟದೊಂದಿಗೆ ಉಪ್ಪಿನಕಾಯಿ ನೀಡದ ಹೊಟೇಲ್ ಮಾಲೀಕನ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಗ್ರಾಹಕರೋರ್ವರು ಪರಿಹಾರವನ್ನು ಪಡೆದುಕೊಂಡಿದ್ದಾರೆ. ಹೌದು ಗ್ರಾಹರೊಬ್ಬರಿಗೆ ಊಟದ ಜೊತೆ ಉಪ್ಪಿನಕಾಯಿ ನೀಡದಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಗ್ರಾಹಕ ನ್ಯಾಯಾಲಯವು ಭಾರಿ ಮೊತ್ತದ ದಂಡವನ್ನು ವಿಧಿಸಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಊಟದಲ್ಲಿ ಉಪ್ಪಿನಕಾಯಿ ಮಿಸ್ ಆಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ, ಹೊಟೇಲ್ ಮಾಲೀಕ ಉಡಾಫೆಯ ಉತ್ತರವನ್ನು ನೀಡಿದ್ದ. ಇದರಿಂದ ಬೇಸರಗೊಂಡ ಆ ವ್ಯಕ್ತಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ಊಟದ ಜೊತೆ ಉಪ್ಪಿನಕಾಯಿ ನೀಡದಿದ್ದಕ್ಕೆ ಗ್ರಾಹಕ ನ್ಯಾಯಾಲಯ ಹೊಟೇಲ್ ಮಾಲೀಕನಿಗೆ 35 ಸಾವಿರ ರೂ. ದಂಡ ವಿಧಿಸಿದೆ.
ಈ ವಿಚಿತ್ರ ಘಟನೆ 2022 ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ವಿಲ್ಲುಪುರದ ಆರೋಗ್ಯಸ್ವಾಮಿ ಎಂಬ ವ್ಯಕ್ತಿ ತನ್ನ ಮನೆಯ ಕಾರ್ಯಕ್ರಮಕ್ಕಾಗಿ ಹೊಟೇಲ್‌ನಿಂದ 25 ಪ್ಲೇಟ್ ಊಟವನ್ನು ಆರ್ಡರ್ ಮಾಡಿದ್ದರು. ಉಪ್ಪಿನಕಾಯಿ ಸೇರಿದಂತೆ ಒಟ್ಟು 11 ಬಗೆಯ ಖಾದ್ಯಗಳಿರುವ ಒಂದು ಪ್ಲೇಟ್ ಊಟಕ್ಕೆ 80 ರೂಪಾಯಿ ಆಗುತ್ತೆ ಎಂದು ಆ ಹೊಟೇಲ್ ಮಾಲೀಕ ಬಿಲ್ ಬರೆದು ಕೊಟ್ಟನು. ಆದರೆ ಹೊಟೇಲ್ ನೀಡಿದ ಊಟದಲ್ಲಿ ಉಪ್ಪಿನಕಾಯಿ ಮಿಸ್ ಆಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್ ಮಾಲೀಕ ಉಡಾಫೆಯ ಉತ್ತರವನ್ನು ನೀಡಿದ್ದ. ಅಷ್ಟೇ ಅಲ್ಲದೆ ಉಪ್ಪಿನಕಾಯಿಗೆ ನೀಡಿದ ಹಣವನ್ನು ವಾಪಸ್ ಕೇಳಿದರೂ ಹೊಟೇಲ್ ಮಾಲೀಕ ಆ ಹಣವನ್ನು ನೀಡಲು ನಿರಾಕರಿಸಿದನು.
ಇದನ್ನೂ ಓದಿ: ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಲು ಹೋಗಿ ಕಿಟಕಿ ಸಮೇತ ದೊಪ್ಪನೆ ರಸ್ತೆಗೆ ಬಿದ್ದ ವಿದ್ಯಾರ್ಥಿ
ಇದರಿಂದ ಬೇಸರಗೊಂಡ ಅರೋಗ್ಯ ಸ್ವಾಮಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಎರಡು ವರ್ಷಗಳ ಕಾಲ ನಡೆದು ಇದೀಗ ನ್ಯಾಯಾಲಯ ಹೊಟೇಲ್ ಮಾಲೀಕನಿಗೆ 35 ಸಾವಿರ ರೂ. ದಂಡವನ್ನು ವಿಧಿಸಿದೆ. ಆರೋಗ್ಯ ಸ್ವಾಮಿಯವರಿಗೆ ಪರಿಹಾರ ಮೊತ್ತ ಪಾವತಿಸಲು ಹೊಟೇಲ್ ಮಾಲೀಕನಿಗೆ 45 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಒಂದು ಪರಿಹಾರ ಮೊತ್ತವನ್ನು ಹೇಳಿದ ದಿನದೊಳಗೆ ಪಾವತಿಸದಿದ್ದರೆ, ಪ್ರತಿ ತಿಂಗಳು 9% ಬಡ್ಡಿಯೊಂದಿಗೆ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಗ್ರಾಹಕರ ಆಯೋಗ ಹೊಟೇಲ್ ಮಾಲೀಕನಿಗೆ ಎಚ್ಚರಿಕೆ ನೀಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ