Video: ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಲು ಹೋಗಿ ಕಿಟಕಿ ಸಮೇತ ದೊಪ್ಪನೆ ರಸ್ತೆಗೆ ಬಿದ್ದ ವಿದ್ಯಾರ್ಥಿ
ಬಸ್ಸಿನಲ್ಲಿ ಸೀಟ್ ಇಲ್ದೇ ನಿಂತುಕೊಂಡೇ ಯಾರಪ್ಪಾ ಪ್ರಯಾಣಿಸ್ತಾರೆ ಅಂತ ಹೆಚ್ಚಿನವರು ಸೀಟ್ ಹಿಡಿಯಲು ಹಲವು ರೀತಿಯ ಸರ್ಕಸ್ ಮಾಡುತ್ತಾರೆ. ಅದೇ ಇಲ್ಲೊಬ್ಬ ವಿದ್ಯಾರ್ಥಿ ಕೂಡಾ ಸೀಟ್ ಹಿಡಿಯಲು ಕಿಟಕಿಯಿಂದ ಬಸ್ ಏರಲು ಪ್ರಯತ್ನಿಸಿದ್ದು, ಬಸ್ ಏರುತ್ತಿದ್ದಂತೆಯೇ ಕಿಟಕಿಯ ಸಮೇತ ಆತ ದೊಪ್ಪನೆ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಸ್ಸಿನಲ್ಲಿ ಸೀಟ್ ಸಿಗದೇ ಇದ್ದರೆ ಯಾರಪ್ಪಾ ಅಷ್ಟು ದೂರ ನಿಂತುಕೊಂಡೇ ಪ್ರಯಾಣ ಮಾಡ್ತಾರೆ ಎಂದು ಹಲವರು ಬಸ್ಸಿನಲ್ಲಿ ಸೀಟ್ ಹಿಡಿಯಲು ಬಗೆಬಗೆಯ ಪ್ಲಾನ್‌ಗಳನ್ನು ಮಾಡುತ್ತಾರೆ. ಕೆಲವರು ಸೀಟ್ ಹಿಡಿಯಲು ಕಿಟಯಿಂದಲೇ ಕರ್ಚಿಫ್ ಅಥವಾ ಬ್ಯಾಗನ್ನು ಸೀಟ್ ಮೇಲೆ ಇಟ್ಟು ಈ ನನ್ನದು ಅಂತಾ ರಿಸರ್ವ್ ಮಾಡಿದ್ರೆ, ಇನ್ನೂ ಕೆಲವರು ಬೇಗ ಹೋಗಿ ಸೀಟ್ ಹಿಡಿಬೇಕು ಅಂತಾ ಬಾಗಿಲನ್ನು ಬಿಟ್ಟು ಕಿಟಕಿಯಿಂದಲೇ ಬಸ್ ಏರುತ್ತಾರೆ. ಅದೇ ರೀತಿ ಇಲ್ಲೊಬ್ಬ ವಿದ್ಯಾರ್ಥಿ ಕೂಡಾ ಸೀಟಿಗಾಗಿ ಕಿಟಕಿಯಿಂದ ಬಸ್ ಏರಲು ಹೋಗಿ, ಕಿಟಕಿ ಸಮೇತ ದೊಪ್ಪನೆ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಕಿಟಕಿಯಿಂದ ಬಸ್ ಏರಲು ಹೋಗಿ ವಿದ್ಯಾರ್ಥಿಯೊಬ್ಬ ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು ರೋಹಿತ್ (avaliyapravasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಸೀಟ್ ಸಿಕ್ರೆ ಸಾಕೆಂದು ಅವಸರ ಅವಸರವಾಗಿ ಕಿಟಕಿಂದ ಬಸ್ ಏರಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಕಿಟಕಿ ಗ್ಲಾಸ್ ಸರಿಸಿ ಹಾಗೋ ಹೀಗೋ ಸರ್ಕಸ್ ಮಾಡಿ ಬಸ್ ಏರಲು ಹೋಗಿ ಆತ ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ.
ಇದನ್ನೂ ಓದಿ: ತಾಯಿ ಮುಂದೆಯೇ ಕುರಿ ಮರಿಯನ್ನು ದರದರನೇ ಎಳೆದೊಯ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
प्रवाश्याला धडा मिळाला म्हणून खुश व्हावं की एसटीची काच पडली म्हणून दुःखी ! 🤣🤪 pic.twitter.com/YuRzF8UNMc
— Rohit Dhende (@avaliyapravasi) July 22, 2024
ಜುಲೈ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಸ್ ಕಳೆಪೆ ಗುಣಮಟ್ಟದ್ದಾಗಿರುವ ಕಾರಣ, ಕಿಟಕಿ ಮುರಿದು ಬಿದ್ದಿದೆʼ ಎಂದು ಒಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Fri, 26 July 24