AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಆಸ್ಪತ್ರೆ ಸೇರಿದ ಕುಡುಕ

ಕುಡಿದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಹೊಟ್ಟೆಗೆ ಒಂದಿಷ್ಟು ಸಾರಾಯಿ ಇಳಿದರೆ ಸಾಕು ಕೆಲವರಿಗೆ ತಾವೇನು ಮಾಡ್ತಿದ್ದೇನೆ ಎಂಬುದು ಕೂಡಾ ಅರಿವಿಗೆ ಬರೋಲ್ಲ. ಹೀಗೆ ಕುಡುಕರ ಕಿತಾಪತಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಕುಡಿದ ಮತ್ತಿನಲ್ಲಿ ಕುಡುಕನೊಬ್ಬ ನಾಗರ ಹಾವಿನ ಜೊತೆ ಆಟವಾಡಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Video: ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಆಸ್ಪತ್ರೆ ಸೇರಿದ ಕುಡುಕ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jul 26, 2024 | 5:57 PM

Share

ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲುವ ಕುಡುಕರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ ಎಂಬುದು ಕೂಡಾ ಅರಿವಿಗೆ ಬರೋಲ್ಲ. ಹೀಗೆ ಕುಡುಕರು ನಶೆಯಲ್ಲಿ ತೂರಾಡುತ್ತಾ, ಬೀದಿ ರಂಪ ಮಾಡುವ, ಎಡವಟ್ಟು ಕೆಲಸ ಮಾಡಿ ಪ್ರಾಣಕ್ಕೆ ಕುತ್ತು ತರುವ ಪಜೀತಿಗಳನ್ನು ಮಾಡುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಬ್ಬ ಕುಡುಕ ಕೂಡಾ ಕುಡಿದ ಅಮಲಿನಲ್ಲಿ ಎಡವಟ್ಟು ಮಾಡಿಕೊಂಡಿದ್ದು, ರಸ್ತೆಯಲ್ಲಿ ಕಾಣಿಸಿಕೊಂಡ ನಾಗರ ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಕೊನೆಯಲ್ಲಿ ಆತ ಆಸ್ಪತ್ರೆಗೆ ಸೇರಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯ ಕಾಲೇಜು ಆವರಣದ ಸಮೀಪ ಕುಡುಕನೊಬ್ಬ ಮದ್ಯದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಲು ಹೋಗಿ, ಆಸ್ಪತ್ರೆ ಸೇರಿದ್ದಾನೆ. ಕುಡುಕ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ ವೇಳೆ ಸರಸರನೆ ಬಂದ ನಾಗರ ಹಾವೊಂದು ಕಾಲೇಜು ಆವರಣದ ಪೊದೆಯೊಳಗೆ ಹೋಗಲು ಪ್ರಯತ್ನಿಸುತ್ತದೆ. ಇದನ್ನು ಕಂಡ ಕುಡುಕ ಮಹಾಶಯ, ಭಂಡ ಧೈರ್ಯದಿಂದ ಹಾವನ್ನು ಹಿಡಿದು ರಸ್ತೆಗೆ ತಂದು, ಅದರ ಜೊತೆ ಚೆಲ್ಲಾಟವಾಡಿದ್ದಾನೆ. ಸ್ಥಳೀಯರು ಎಚ್ಚರಿಕೆ ನೀಡಿದರೂ ಕೂಡಾ ಹಾವಿಗೆ ತೊಂದರೆ ಕೊಡುವುದನ್ನು ಮಾತ್ರ ಆತ ಬಿಟ್ಟಿಲ್ಲ. ಕೊನೆಗೆ ಈತನ ಕಾಟ ತಾಳಲಾರದೆ ಹಾವು ಆತನಿಗೆ ಕಚ್ಚಿದೆ. ಆ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಸುಧಾಕರ್‌ (sudhakarudumula) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಕುಡುಕ ಮಹಾಶಯ ನಾಗರ ಹಾವಿನೊಂದಿಗೆ ಆಟವಾಡುತ್ತಿರುವ ಭಯಾನಕ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಜೋರು ಮಳೆಗೆ ಪುಟ್ಟ ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ನಡೆದ ಅಮ್ಮ

ಜುಲೈ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 73 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕುಡುಕರು ತಮ್ಮನ್ನು ತಾವು ಬಾಹುಬಲಿ ಅಂತ ಭಾವಿಸಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾಗರ ಹಾವಿನ ತಾಳ್ಮೆಯನ್ನು ಮೆಚ್ಚಬೇಕುʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ