Video: ಟೆರೇಸ್‌ ಮೇಲೆ ಲವರ್ ಜೊತೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ತಾಯಿ,ಬಿತ್ತು ನೋಡಿ ಚಪ್ಪಲಿ ಏಟು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 23, 2024 | 4:20 PM

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಅಂತಹದೇ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗಿದ್ದು, ಯುವತಿಯೊಬ್ಬಳು ತನ್ನ ಬಾಯ್‌ ಫ್ರೆಂಡ್‌ ಜೊತೆ ಮನೆಯ ಟೆರೇಸ್‌ ಮೇಲೆ ಏಕಾಂತದಲ್ಲಿದ್ದ ವೇಳೆ, ಆಕೆ ಅಮ್ಮನ ಕೈಗೆ ರೆಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಪ್ರೇಮಿಗಳಿಬ್ಬರಿಗೂ ಅಮ್ಮನ ಕೈಯಿಂದ ಸರಿಯಾಗಿ ಧರ್ಮದೇಟು ಬಿದ್ದಿದ್ದು, ತಕ್ಷಣ ಆ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿ ಹೋಗಿದ್ದಾನೆ.

Video: ಟೆರೇಸ್‌ ಮೇಲೆ ಲವರ್ ಜೊತೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ತಾಯಿ,ಬಿತ್ತು ನೋಡಿ ಚಪ್ಪಲಿ ಏಟು
ವೈರಲ್​ ವಿಡಿಯೋ
Follow us on

ಹದಿಹರೆಯದ ಮಕ್ಕಳು ಪ್ರೀತಿ, ಪ್ರೇಮ ಅಂತಾ ದಾರಿ ತಪ್ಪಿದ್ರೆ ಯಾವ ತಂದೆ-ತಾಯಿಯೂ ಸಹಿಸೊಲ್ಲ. ಹೀಗೆ ತಂದೆ-ತಾಯದಿಂದ ಭಯದಿಂದ ಹೆಚ್ಚಿನ ಯುವಕ ಯುವತಿಯರು ತಮ್ಮ ಪ್ರೇಮಿಗಳೊಂದಿಗೆ ಕದ್ದು ಮುಚ್ಚಿ ಮಾತನಾಡೋದು, ಮೀಟ್‌ ಆಗೋದು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಭಂಡ ದೈರ್ಯ ಮಾಡಿ ತನ್ನ ಲವರ್‌ ಅನ್ನು ಆಕೆಯ ಮನೆಯ ಟೆರೇಸ್‌ ಮೇಲೆಯೇ ಕದ್ದು ಮುಚ್ಚಿ ಮೀಟ್‌ ಆಗಿದ್ದು, ಈ ವೇಳೆ ಹುಡುಗಿಯ ಅಮ್ಮ ಎಂಟ್ರಿ ಕೊಟ್ಟಿದ್ದಾರೆ. ಪ್ರೇಮಿಗಳಿಬ್ಬರಿಗೂ ಅಮ್ಮನ ಕೈಯಿಂದ ಸರಿಯಾಗಿ ಚಪ್ಪಲಿ ಏಟು ಬಿದ್ದಿದ್ದು, ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಕುರಿತ ಪೋಸ್ಟ್‌ ಒಂದನ್ನು ನಿಶಾ (y_iamcrazyy) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಪ್ರೇಮಿಗಳಿಬ್ಬರಿಗೆ ತಾಯಿಯ ಕೈಯಿಂದ ಚಪ್ಪಲಿ ಏಟು ಬೀಳುವ ದೃಶ್ಯವನ್ನು ಕಾಣಬಹುದು. ಹದಿಹರೆಯದ ಯುವಕನೊಬ್ಬ ತನ್ನ ಲವರ್‌ ಅನ್ನು ಮೀಟ್‌ ಆಗಲು ಭಂಡ ಧೈರ್ಯ ಮಾಡಿ ಆಕೆಯ ಮನೆಯ ಟೆರೇಸ್‌ ಮೇಲೆ ಬಂದಿದ್ದು, ಈ ಇಬ್ಬರೂ ಪ್ರೇಮಿಗಳು ಜೊತೆಗಿದ್ದಾಗ, ಹುಡುಗಿಯ ತಾಯಿ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟಿದ್ದಾರೆ. ಮಗಳ ಕಳ್ಳಾಟವನ್ನು ಕಂಡು ಕೋಪಗೊಂಡ ತಾಯಿ ಈ ವಯಸ್ಸಲ್ಲಿ ಪ್ರೀತಿ-ಪ್ರೇಮ ಎಲ್ಲಾ ನಿಮ್ಗೆ ಬೇಕಾ ಎಂದು ಚಪ್ಪಲಿಯಲ್ಲಿ ಧರ್ಮದೇಟು ನೀಡಿದ್ದಾರೆ.

ಇದನ್ನೂ ಓದಿ: ಒಂಟಿತನವನ್ನು ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್‌

ವೈರಲ್​​ ವಿಡಿಯೋ

ಜುಲೈ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಆ ತಾಯಿ ತುಂಬಾನೇ ಒಳ್ಳೆಯ ಕೆಲಸ ಮಾಡಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೇರೆಯವರ ಖಾಸಗಿ ವಿಷಯವನ್ನು ರೆಕಾರ್ಡ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚುವುದು ತಪ್ಪುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ