Video: ಬಸ್ಸಿನಲ್ಲಿ ಸೀಟ್ ಹಿಡಿಯಲು ಮಹಿಳೆ ಮಾಡಿದ ಸರ್ಕಸ್ ನೋಡಿ…

ಬಸ್ಸಿನಲ್ಲಿ ಸೀಟ್ ಹಿಡಿಯುವ ಸಲುವಾಗಿ ಮಹಿಳಾ ಮಣಿಗಳು ಬಸ್ಸಿನಲ್ಲಿ ಮಾಡಿದಂತಹ ಒಂದಷ್ಟು ಸರ್ಕಸ್ ಗಳ ಫನ್ನಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಬಾಗಿಲಿನಿಂದ ಬಸ್ ಹತ್ತಿದ್ರೆ ನನ್ಗೆ ಇವತ್ತು ಸೀಟ್ ಸಿಗಲ್ಲಾ ಎಂದು ಮಹಿಳೆಯೊಬ್ಬರು ಕಿಟಕಿಯಿಂದ ಬಸ್ ಏರಲು ಫುಲ್ ಸರ್ಕಸ್ ಮಾಡಿದ್ದಾರೆ.

Video: ಬಸ್ಸಿನಲ್ಲಿ ಸೀಟ್ ಹಿಡಿಯಲು ಮಹಿಳೆ ಮಾಡಿದ ಸರ್ಕಸ್ ನೋಡಿ...
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2024 | 3:31 PM

ಬಸ್ಸಿನಲ್ಲಿ ಸೀಟ್‌ ಇಲ್ದೇ ನಿಂತುಕೊಂಡೇ ಯಾರಪ್ಪಾ ಪ್ರಯಾಣಿಸ್ತಾರೆ ಅಂತ ಹೆಚ್ಚಿನವರು ಸೀಟ್‌ ಹಿಡಿಯಲು ಹಲವು ರೀತಿಯ ಸರ್ಕಸ್‌ ಮಾಡುತ್ತಾರೆ. ಕೆಲವ್ರು ಕಿಟಯಿಂದಲೇ ಕರ್ಚಿಫ್‌ ಅಥವಾ ಬ್ಯಾಗ್ ಇಟ್ಟು ಸೀಟ್‌ ರಿಸರ್ವ್ ಮಾಡಿದ್ರೆ ಇನ್ನೂ ಕೆಲವರು ಸೀಟಿಗಾಗಿ ಬಾಗಿಲು ಬದಲಿಗೆ ಕಿಟಕಿಯಿಂದಲೇ ಬಸ್‌ ಏರುತ್ತಾರೆ. ಹೀಗೆ ಸೀಟಿಗಾಗಿ ಬಸ್ಸಿನಲ್ಲಿ ಪ್ರಯಾಣಿಕರು ಮಾಡುವಾಗ ಅವಾಂತರಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಾಗಿಲಿನಿಂದ ಬಸ್ ಹತ್ತಿದ್ರೆ ನನ್ಗೆ ಇವತ್ತು ಸೀಟ್ ಸಿಗಲ್ಲಾ ಎಂದು ಮಹಿಳೆಯೊಬ್ಬರು ಕಿಟಕಿಯಿಂದ ಬಸ್ ಏರಲು ಫುಲ್ ಸರ್ಕಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಹಾಗೋ ಹೀಗೋ ಸರ್ಕಸ್ ಮಾಡಿ ಸೀಟಿಗಾಗಿ ಬಸ್ಸಿನ ಕಿಟಕಿಯನ್ನೇ ಏರಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ರಣವಿಜಯ್ ಸಿಂಗ್ (ranvijaylive) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೆಂಪು ಬಣ್ಣದ ಸೀರೆ ತೊಟ್ಟ ಮಹಿಳೆಯೊಬ್ಬರು ಬಸ್ ಏರಿ ನಿಂತ ದೃಶ್ಯವನ್ನು ಕಾಣಬಹುದು. ಇಷ್ಟು ಜನ ಬಸ್ಸಿನ ಒಳಗೆ ಹೋಗುವ ತನಕ ನಾನು ಕಾಯುತ್ತಾ ನಿಂತ್ರೆ ನನ್ಗೆ ಖಂಡಿತವಾಗಿಯೂ ಸೀಟ್ ಸಿಗಲ್ಲಾ ಎಂದು ಕಿಟಕಿ ಮೂಲಕ ಬಸ್ ಏರಿದ್ದಾರೆ.

ಇದನ್ನೂ ಓದಿ: ಪೊದೆಯಲ್ಲಿ ಜೋಡಿ ಹಕ್ಕಿಗಳ ರೊಮ್ಯಾನ್ಸ್

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 41 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದೇನು ನಡೆಯುತ್ತಿದೆ??’ ಎಂಬ ಪ್ರಶ್ನೆ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಪ್ರತಿ ಸಲ ಹಬ್ಬಗಳು ಮತ್ತು ಪರೀಕ್ಷೆಯ ಸಮಯದಲ್ಲಿ ಸೀಟ್ ಹಿಡಿಯಲು ಕಿಟಕಿಯ ಮೂಲಕ ಬಸ್ ಹತ್ತುವುದು ಸಾಮಾನ್ಯ ಸಂಗತಿಯಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ರಾಜ್ಯದ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ