Australia: ಕೆಲ ತಿಂಗಳುಗಳ ಹಿಂದೆ ಅಂಗಡಿಯಿಂದ ತಂದ ಬ್ರೊಕೊಲಿಯಲ್ಲಿ ಹಾವಿನಮರಿ ಪತ್ತೆಯಾದ ವಿಡಿಯೋ ನೋಡಿದ್ದಿರಿ. ಇದೀಗ ಆಸ್ಟ್ರೇಲಿಯಾದ ಮಹಿಳೆಯೊಬ್ಬಳಿಗೆ ಸೂಪರ್ ಮಾರ್ಕೆಟ್ನಿಂದ ತಂದ ಪಾಲಕ್ (Spinach) ಸೊಪ್ಪಿನಲ್ಲಿ ಕಪ್ಪೆಮರಿ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆಕೆ ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾಳೆ. ಆಸ್ಟ್ರೇಲಿಯಾದ ಪ್ರಸಿದ್ಧ ಸೂಪರ್ ಮಾರ್ಕೆಟ್ ವೂಲ್ವರ್ತ್ಸ್ನಲ್ಲಿ ಸಿಮೋನ್ ಬೇಕರ್ ಪಾಲಕ್ ಖರೀದಿಸಿದ್ದಾಳೆ. ಆದರೆ ಅದರೊಳಗೆ ಕಪ್ಪೆ ಇತ್ತು ಎನ್ನುವುದು ಬಾಣಲೆಯಲ್ಲಿ ಕಪ್ಪೆ ಬೆಂದ ನಂತರವಷ್ಟೇ ಆಕೆಯ ಅರಿವಿಗೆ ಬಂದಿದೆ. ಇದರಿಂದ ಆಕೆ ಆಘಾತಗೊಂಡಿದ್ದಾರೆ.
ಇದನ್ನೂ ಓದಿ : Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!
ಈ ವಿಡಿಯೋವನ್ನು ಸಿಮೋನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ನೆಟ್ಟಿಗರೊಬ್ಬರು, ಈಗಾಗಲೇ ನೀವು ತಯಾರಿಸಿದ ಭಕ್ಷ್ಯದಲ್ಲಿ ಕಪ್ಪೆ ಮಿಶ್ರಣಗೊಂಡಿದೆ ಎನ್ನುವುದನ್ನು ಪ್ರತಿಕ್ರಿಯೆಯ ಮೂಲಕ ತಿಳಿಸಿದ್ದಾರೆ. ವೂಲ್ವರ್ತ್ಸ್ ಈ ಘಟನೆಯನ್ನು ಗಮನಿಸಿ, ‘ನಮ್ಮ ಸರಬರಾಜುದಾರರು ಪಾಲಕ ಸೊಪ್ಪಿನ ಗುಣಮಟ್ಟವನ್ನು ಹಲವಾರು ಬಾರಿ ಪರೀಕ್ಷಿಸಿ ಮತ್ತು ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿದ್ದಾರೆ. ನಾವು ಸಾಕಷ್ಟು ಆಸ್ಟ್ರೇಲಿಯನ್ ಪಾಲಕ್ ಬೆಳೆಗಾರರೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಆಹಾರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಶ್ರಮವಹಿಸುತ್ತೇವೆ’ ಎಂದಿದೆ.
ಇದನ್ನೂ ಓದಿ : Viral Video: ಜೋಲೋಚಿಪ್ ಚಾಲೇಂಜ್; ಈ ವಿಡಿಯೋದಲ್ಲಿ ಮುಂದೇನಾಗುತ್ತದೆ ನೋಡಿ
ನೆಟ್ಟಿಗರು, ಈ ಹಿಂದೆಯೂ ಪಾಲಕ್ ಪ್ಯಾಕ್ನಲ್ಲಿ ಕಪ್ಪೆ ಕಂಡುಬಂದ ಅನುಭವವನ್ನು ಹಂಚಿಕೊಂಡಿದ್ದಾರೆ. ಎಷ್ಟೇ ಪ್ರಸಿದ್ಧ ಕಂಪೆನಿಯಾದರೂ ಕಣ್ತಪ್ಪಿನಿಂದ ಹೀಗೆ ಆಗುವುದು ಸಹಜ, ಅದನ್ನು ಕಂಪೆನಿ ಒಪ್ಪಿಕೊಳ್ಳಬೇಕು, ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಕೆಲವರು. ಎಲ್ಲಿಂದಲೇ ಸೊಪ್ಪು ತರಲಿ ಅದನ್ನು ದೊಡ್ಡದಾದ ಬುಟ್ಟಿಯಲ್ಲಿ ನೀರು ಹಾಕಿ, ಉಪ್ಪು ಅಥವಾ ಅರಿಷಿಣ ಹಾಕಿ ಜಾಲಿಸಿ ಎರಡು ಮೂರು ಸಲ ತೊಳೆಯುವುದು ಒಳ್ಳೆಯದು ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : Viral Video: ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ, ಮುಂದೇನಾಯಿತು?
ಆಹಾರದ ವಿಷಯದಲ್ಲಿ ಬಹಳ ಜಾಗರೂಕರಾಗಿ ಇರಬೇಕು, ಏಮಾರಿದರೆ ಜೀವಕ್ಕೆ ಆಪತ್ತು, ಕಂಪೆನಿ ಕೊಡುವ ಯಾವ ಪರಿಹಾರವೂ ಜೀವವನ್ನು ಉಳಿಸದು ಎಂದಿದ್ದಾರೆ ಇನ್ನೂ ಕೆಲವರು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಬಹಳ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ ಮತ್ತೊಂದಿಷ್ಟು ಜನ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:59 pm, Fri, 27 October 23