ಫ್ರೆಂಚ್ ಫ್ರೈಸ್, ಆಲೋ ಚಿಪ್ಸ್ಅನ್ನುಬಾಯಿ ಚಪ್ಪರಿಸಿ ತಿನ್ನುವ ನಾವು ಅದರ ಕವರ್ ಅನ್ನು ಎಲ್ಲೆಂದರಲ್ಲಿ ಬಿಸಾಡುತ್ತೇವೆ. ಇದರಿಂದ ಪ್ಲಾಸ್ಟಿಕ್ ಭೂಮಿ ಸೇರಿ ಪರಿಸರ ಮಾಲಿನ್ಯ ಉಂಟು ಮಾಡುತ್ತದೆ. ಆಲೂ ಚಿಪ್ಸ್ಗಳು ಆರೋಗ್ಯಕ್ಕೆ ಒಳತೋ, ಕೆಡುಕೋ ಊಟದ ಜತೆ ಸೈಡ್ ಡಿಶ್ ಎಂದು ಬಳಸುತ್ತೇವೆ. ಟೈಮ್ ಪಾಸ್ಗೂ ಇದನ್ನು ತಿನ್ನುತ್ತೇವೆ. ತಿಂದ ಬಳಿಕ ಕವರ್ ಅನ್ನು ಎಸೆಯುತ್ತೇವೆ. ಆದರೆ ಇಲ್ಲೊಬ್ಬರು ಮಹಿಳೆ ಅದೇ ಆಲೂಗಡ್ಡೆ ಚಿಪ್ಸ್ನ ಲೇಸ್ ಪ್ಯಾಕ್ನ ಕವರ್ (Potato Chips Wrapper) ಅನ್ನು ಸೀರೆಯನ್ನಾಗಿ (Saree) ಮಾಡಿಕೊಂಡಿದ್ದಾರೆ. ಅದನ್ನು ಧರಿಸಿ ಕ್ಯಾಟ್ ವಾಕ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ (Instagram) ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಲೇಸ್ ಪ್ಯಾಕ್ನ ಕವರ್ ಅನ್ನು ಉಲ್ಟಾ ಮಾಡಿ ಸೀರೆಯ ನೆರಿಗೆ ಮತ್ತು ಸೆರಗನ್ನಾಗಿ ಹೊಲಿಸಿಕೊಂಡಿದ್ದಾರೆ. ಕವರ್ನ ಎದುರು ಭಾಗವನ್ನು ಸೀರೆಯ ಬಾರ್ಡರ್ಅನ್ನಾಗಿ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ BeBadass.in ಎನ್ನುವ ಖಾತೆ ಹಂಚಿಕೊಂಡಿದೆ. ವಿಡಿಯೋ ಹಂಚಿಕೊಂಡಾಗಿನಿಂದ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 55 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ವಿಡಿಯೋ ನೋಡಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ಸೀರೆಯನ್ನು ಧರಿಸಿವುದಾದರೆ ಹೀಗೆ ಧರಿಸಿ, ಇಲ್ಲವಾದರೆ ಅದನ್ನು ಧರಿಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸೀರೆಯನ್ನು ತಿರಸ್ಕರಿಸಿದ್ದು, ಆರೆಂಜ್ ಕಲ್ರನ್ಲಿ ಮಾಡಬೇಕಿತ್ತು ಕಾಮೆಂಟ್ ಮಾಡಿದ್ದಾರೆ. ಸದ್ಯ ವೈರಲ್ ಆಗಿರುವ ಹೊಸ ವಿನ್ಯಾಸದ ಉಡುಗೆಯ ವಿಡಿಯೋ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಮನೆಯ ಬಳಿ ಬಂದ ಹಾವನ್ನು ಹಿಡಿದು ರಕ್ಷಿಸಿದ ಮಹಿಳಾ ಅಧಿಕಾರಿ: ಧೈರ್ಯಕ್ಕೆ ಮೆಚ್ಚಿದ ಜನ