Viral Photo: ಮೀಸೆ ಬೆಳೆಸಿಕೊಂಡ ಕೇರಳದ ಮಹಿಳೆ! ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2022 | 5:54 PM

ಕೇರಳದ ಕಣ್ಣೂರಿನ ಶೈಜಾ ಎಂಬುವವರು ತಮ್ಮ ಮುಖದ ಮೇಲೆ ಬಂದ ಮೀಸೆಯನ್ನು ಮಾತ್ರ ಯಾವುದು ಕಾರಣಕ್ಕೂ ಕತ್ತರಿಸಿಲ್ಲ,  35 ವರ್ಷದ ಈಕೆ ಮುಖದ ಮೇಲೆ ಮೀಸೆಯನ್ನು ಬೆಳಸಿಕೊಂಡಿದ್ದಾರೆ. ಸುಮಾರಷ್ಟು ಜನರು ಗೇಲಿ ಮಾಡಿದರು ಯಾವುದೇ ಮುಜುಗರ ಪಡಲಿಲ್ಲ.

Viral Photo: ಮೀಸೆ ಬೆಳೆಸಿಕೊಂಡ ಕೇರಳದ ಮಹಿಳೆ! ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್
Woman Mustache
Follow us on

ಜಗತ್ತಿನಲ್ಲಿ ವಿಚಿತ್ರವಾದ ಕೆಲವೊಂದು ಘಟನೆಗಳು ನಡೆಯುವುದು ಸಹಜ. ಆದರೆ ಅವುಗಳು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪ್ರಕೃತಿಕವಾಗಿ ಕೆಲವೊಂದು ಬದಲಾವಣೆಗಳನ್ನುಂಟು ಮಾಡುತ್ತದೆ. ಹೆಣ್ಣು ಅಲ್ಲದ ಗಂಡು ಅಲ್ಲದ ಕೆಲವೊಂದು ವ್ಯಕ್ತಿಗಳನ್ನು ನಾವು ನೋಡಬಹುದು ಅವರನ್ನು ನಾವು ಮಂಗಳ ಮುಖಿಗಳು ಎಂದು ಕರೆಯುತ್ತೇವೆ, ಇನ್ನು ಕೆಲವರು ಶಿವ-ಪಾರ್ವತಿಯ ಅಂಶ ಎನ್ನುತ್ತಾರೆ.  ಹೆಣ್ಣು ಎಂದರೆ ಹೇಗಿರಬೇಕು, ಗಂಡು ಹೇಗಿರಬೇಕು ಎಂಬುದನ್ನು ಈ ಸಮಾಜದಲ್ಲಿ ಮತ್ತು ನಮ್ಮ ಸಾಂಪ್ರದಾಯಗಳಲ್ಲಿ ಹೇಳಿರುತ್ತಾರೆ, ಅದು ಪ್ರಕೃತಿಗೆ ಅನುಗುಣವಾಗಿ ಇರುತ್ತದೆ.  ಆದರೆ ಅದು ಎರಡು ಲಿಂಗಾಣುಗಳಿಗೂ ತದ್ವಿರುದ್ಧವಾಗಿರುವ ಕೆಲವೊಂದು ಘಟನೆಗಳು ನಡೆದಿರುತ್ತದೆ. ಇದೀಗ ಇಂತಹ ಒಂದು ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಹೆಚ್ಚಾಗಿ ಹುಡುಗರಿಗೆ ಒಂದು ವಯಸ್ಸಿನಲ್ಲಿ ಮೀಸೆ ಬರುತ್ತವೆ. ಹುಡುಗರಿಗೆ ಮೀಸೆ ಎಂದರೆ ಅದೊಂದು ಕ್ರೇಜ್ ಆಗಿರುತ್ತದೆ. ಸಿನಿಮಾದಲ್ಲಿ ನಟರು ಮಾಡುವ ಸ್ಟೈಲ್​ಗಳನ್ನು ಇಂದಿನ ಹುಡುಗರು ಕೂಡ ಮಾಡುತ್ತಾರೆ. ಕೆಲವೊಂದು ಬಾರಿ ಹುಡುಗಿಯರ ಹಾರ್ಮೋನ್ ಹದಗೆಟ್ಟಾಗ ಮುಖದ ಮೇಲೆ ಹೆಚ್ಚು ಕೂದಲು ಬರುತ್ತದೆ. ಅದಕ್ಕೆ ಕೆಲವೊಂದು ಕ್ರೀಮ್ ಇತ್ಯಾದಿಗಳನ್ನು ಬಳಸುತ್ತಾರೆ. ಅವುಗಳನ್ನು ಕ್ಲಿನ್ ಮಾಡಿಕೊಳ್ಳುತ್ತಾರೆ.

ಆದರೆ ಕೇರಳದ ಕಣ್ಣೂರಿನ ಶೈಜಾ ಎಂಬುವವರು ತಮ್ಮ ಮುಖದ ಮೇಲೆ ಬಂದ ಮೀಸೆಯನ್ನು ಮಾತ್ರ ಯಾವುದು ಕಾರಣಕ್ಕೂ ಕತ್ತರಿಸಿಲ್ಲ,  35 ವರ್ಷದ ಈಕೆ ಮುಖದ ಮೇಲೆ ಮೀಸೆಯನ್ನು ಬೆಳಸಿಕೊಂಡಿದ್ದಾರೆ. ಸುಮಾರಷ್ಟು ಜನರು ಗೇಲಿ ಮಾಡಿದರು ಯಾವುದೇ ಮುಜುಗರ ಪಡಲಿಲ್ಲ. ನನಗೆ ಮೀಸೆ ಇಡಲು ತುಂಬಾ ಖುಷಿ ಇದೆ ಎಂದಿದ್ದಾರೆ.

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಇದೀಗ ಶೈಜಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. 5 ವರ್ಷಗಳಿಂದ ಈಕೆ ಈ ಮೀಸೆಯನ್ನು ಬೆಳೆಸಿಕೊಂಡಿದ್ದಾಳೆ, ಇದೊಂದು ರೀತಿಯ ಟ್ರೆಂಡಿಂಗ್ ಎಂದಿದ್ದಾರೆ. ಕೊರೊನಾ ಸಮಯದಲ್ಲಿ ನನಗೆ ಮಾಸ್ಕ್ ಹಾಕಲು ತುಂಬಾ ಕಷ್ಟವಾಗುತ್ತಿತ್ತು. ಮಾಸ್ಕ್ ಹಾಕಲು ನನಗೆ ಇಷ್ಟವಿಲ್ಲ, ಅನೇಕ ಕತ್ತರಿಸಲು ಹೇಳಿದ್ರು ಆದರೆ ನಾನು ಕತ್ತರಿಸಿಕೊಂಡಿಲ್ಲ, ನಾನು ಸುಂದರವಾಗಿಲ್ಲ ಎಂದು ಗೊತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರೆ.

ನಾನು 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ, ಸ್ತನದ ಗಡ್ಡೆ ತೆಗೆದು ಹಾಕುವ ಶಸ್ತ್ರಚಿಕಿತ್ಸೆ, ಅಂಡಾಶಯದಿಂದ ಚೀಲ ತೆಗೆದು ಹಾಕಲು ಶಸ್ತ್ರಚಿಕಿತ್ಸೆ. ಮಾಡಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ಇದು ನನ್ನ ಕೊನೆಯ ಚಿಕಿತ್ಸೆ ಎಂದು ಎಮದುಕೊಳ್ಳತ್ತಿದೆ. ಐದು ವರ್ಷಗಳ ಹಿಂದೆ ಗರ್ಭಕಂಠವಾಗಿತ್ತು. ಈಗ ನಾನು ಆತ್ಮವಿಶ್ವಾಸ ಗಳಿಸಿದ್ದೇನೆ. ಹಾಗಾಗಿ ನನಗೆ ಬೇಕಾದ ಹಾಗೂ ಸಂತೋಷಮಯ ಜೀವನ ನಡೆಸುತ್ತೇನೆ ಎಂದಿದ್ದಾರೆ.