Mandya : ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಘಟಿಸುತ್ತದೆ. ಅದು ಒಳ್ಳೆಯದಿರಬಹುದು ಕೆಟ್ಟದಿರಬಹುದು. ಮಂಡ್ಯದಲ್ಲಿ ನಡೆದ ಈ ಘಟನೆಯನ್ನೇ ನೋಡಿ. ಮಗನೊಂದಿಗೆ ತಾಯಿ ಮನೆಯಿಂದ ಹೊರಬರುತ್ತಿರುವ ದೃಶ್ಯವಿದೆ. ಮಗ ಮೆಟ್ಟಿಲುಗಳನ್ನು ಇಳಿಯಲು ನೋಡುತ್ತಿದ್ದಂತೆ ತಾಯಿ ಅತ್ತಕಡೆ ತನ್ನ ಕೆಲಸಕ್ಕೆ ಹೊರಳುತ್ತಾಳೆ. ಮಗ ಎಲ್ಲೋ ನೋಡಿಕೊಂಡು ಮೆಟ್ಟಿಲಿಂದ ಇಳಿಯುವಾಗ ಕೆಳಗೆ ನಾಗರಹಾವು ಹರಿದು ಬರುತ್ತಿರುತ್ತದೆ. ಇವನು ಕಾಲಿಡುವ ಹೊತ್ತಿಗೆ ಅದು ತಪ್ಪಿಸಿಕೊಂಡು ಒಮ್ಮೆಲೆ ಹೆಡೆಯೆತ್ತಿ ಅವನೆಡೆ ವಾಲುತ್ತದೆ. ಅಷ್ಟರಲ್ಲೇ ಅವನ ತಾಯಿ ಅವನನ್ನು ಎಳೆದುಕೊಂಡು ಕಾಪಾಡುತ್ತಾಳೆ. ವಿಡಿಯೋ ನೋಡಿ…
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯ ವೈರಲ್ ಆಗಿದೆ. ಸದ್ಯ ಹುಡುಗ ಬದುಕಿದ ಎಂದು ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಪಾಡಿದ ತಾಯಿಗೆ ಸಾಕಷ್ಟು ಮೆಚ್ಚಿಗೆಯ ಪ್ರತಿಕ್ರಿಯೆ ದೊರಕಿವೆ. 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 27,700 ಲೈಕ್ಸ್ ಅನ್ನು ಈ ವಿಡಿಯೋ ಹೊಂದಿದೆ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ