ಆರು ಸಿಂಹಿಣಿಗಳ ಜತೆ ಕಾಡಿನಲ್ಲಿ ರಾಜಾರೋಷವಾಗಿ ನಡೆದ ಮಹಿಳೆ: ವಿಡಿಯೋ ವೈರಲ್
ವಿಡಿಯೋವನ್ನು ವಿವಿಧ ಆ್ಯಂಗಲ್ಗಳಲ್ಲಿ ಸೆರೆಹಿಡಿಯಲಾಗಿದ್ದು, ಮಹಿಳೆ 6 ಸಿಂಹಗಳ ಹಿಂದೆ ನಡೆಯುತ್ತಿರುವುದನ್ನು ಕಾಣಬಹುದು. ನಂತರ ಆಕೆ ಸಿಂಹದ ಬಾಲವನ್ನೂ ಹಿಡಿದು ನಡೆಯುತ್ತಾಳೆ
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಹುಬ್ಬೇರಿಸುವಂತಿದ್ದರೆ ಇನ್ನೂ ಕೆಲವು ನೋಡುಗರನ್ನು ದಂಗಾಗಿಸುತ್ತದೆ. ಇತ್ತೀಚೆಗಷ್ಟೇ ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬಳು ನಡು ಬೀದಿಯಲ್ಲಿ ಸಿಂಹವನ್ನು ಎತ್ತಿಕೊಂಡು ಹೋದ ವಿಡಿಯೋ ವೈರಲ್ ಆಗಿತ್ತು. ಇದೀಗ ಮಹಿಳೆಯೊಬ್ಬಳು 6 ಸಿಂಹಿಣಿಗಳೊಂದಿಗೆ ರಾಜಾರೋಷವಾಗಿ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ 1.39 ಲಕ್ಷ ವೀಕ್ಷಣೆ ಪಡೆದಿದ್ದು 6 ಸಾವಿರ ಲೈಕ್ಸ್ ಪಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಮಹಿಳೆಯ ಧೈರ್ಯ ನೋಡಿ ದಂಗಾಗಿದ್ದಾರೆ.
ವಿಡಿಯೋವನ್ನು ವಿವಿಧ ಆ್ಯಂಗಲ್ಗಳಲ್ಲಿ ಸೆರೆಹಿಡಿಯಲಾಗಿದ್ದು, ಮಹಿಳೆ 6 ಸಿಂಹಗಳ ಹಿಂದೆ ನಡೆಯುತ್ತಿರುವುದನ್ನು ಕಾಣಬಹುದು. ನಂತರ ಆಕೆ ಸಿಂಹದ ಬಾಲವನ್ನೂ ಹಿಡಿದು ನಡೆಯುತ್ತಾಳೆ. ಮನೆಯಲ್ಲಿ ಸಾಕಿದ ಬೆಕ್ಕಿನ ಬಾಲದಂತೆ ಸಿಂಹಿಣಿಯ ಬಾಲವನ್ನು ಹಿಡಿದು ಎತ್ತಿ ಅದರ ಜತೆಯೇ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಿಡಿಯೋವನ್ನು ಸಫಾರಿಗ್ಯಾಲರಿ ಇನ್ಸ್ಟಾಗ್ರಾಮ್ ಹಂಚಿಕೊಂಡಿದೆ. ಸ್ಥಳವನ್ನು ಕೀನ್ಯಾ, ಆಫ್ರಿಕಾ ಎಂದು ನೀಡಲಾಗಿದೆ.
View this post on Instagram
ವಿಡಿಯೋ ನೋಡಿ ನೆಟ್ಟಿಗರು ಹಲವು ರೀತಿ ಕಾಮೆಂಟ್ ಮಾಡಿದ್ದಾರೆ. ವಿಡಿಯೋಗ್ರಾಫರ್ ಆಗಿರುವುದಕ್ಕೆ ಹೆಮ್ಮೆಯಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬ ಬಳಕೆದಾರರು, ವಿಡಿಯೋ ಹಿಂದಿನ ದೃಶ್ಯಾವಳಿಗಳನ್ನು ನೋಡಲು ಕಾತುರರಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:
Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್
Published On - 4:18 pm, Thu, 13 January 22