ಡಾಮಿನೋಸ್ ಪಿಜ್ಜಾದಲ್ಲಿ ಅನೇಕ ವೆರೈಟಿಗಳಿವೆ. ಗ್ರಾಹಕರು ತಮಗೆ ಇಷ್ಟವಾಗುವ ವೆರೈಟಿ ಪಿಜ್ಜಾ ಆಯ್ದುಕೊಂಡು ತರಿಸಿಕೊಳ್ಳಬಹುದು. ವಿವಿಧ ಬಗೆಯ ವೆರೈಟಿಗಳೂ ಸಹ ಒಂದೊಂದು ಬಗೆಯ ರುಚಿಯನ್ನು ನೀಡುತ್ತದೆ. ಹಾಗೆಯೇ ತನಗಿಷ್ಟವಾದ ಪಿಜ್ಜಾವನ್ನು ಮಹಿಳೆ ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ. ಪಿಜ್ಜಾ ಸವಿಯಬೇಕು ಅನ್ನುವಷ್ಟರಲ್ಲಿ ಅದರಲ್ಲಿದ್ದ ನಟ್- ಬೋಲ್ಟ್ಗಳನ್ನು ನೋಡಿ ಧಂಗಾಗಿದ್ದಾರೆ. ಈ ಅಪಾಯಕಾರಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪಿಜ್ಜಾ ಪ್ರಿಯರಿಗೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ಪೋಸ್ಟ್ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮಹಿಳೆ ಜುಲೈ 29ನೇ ತಾರೀಕಿನಂದು ಡಾಮಿನೋಸ್ನಿಂದ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆಗಲೇ ಒಂದೆರಡು ಪಿಜ್ಜಾ ಪೀಸ್ಗಳನ್ನು ಸವಿದಿದ್ದಾರೆ. ಮತ್ತೊಂದು ಪೀಸ್ ತಗೊಂದಿದ್ದೇ ಅದರಲ್ಲಿ ನಟ್ ಬೋಲ್ಟ್ಗಳಿರುವುದು ಕಂಡು ಬಂದಿದೆ. ಅದನ್ನು ನೋಡಿದ ಮಹಿಳೆ ಗಾಬರಿಗೊಂಡು ಡಾಮಿನೋಸ್ ಪಿಜ್ಜಾ ಅಂಗಡಿಗೆ ಕರೆ ಮಾಡಿ ಮರಪಾವತಿ ಮಾಡುವಂತೆ ತಿಳಿಸಿದ್ದಾರೆ.
ತಮಗೆ ಆಘಾತ ಉಂಟು ಮಾಡಿದ ಘಟನೆಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಸ್ಥಳೀಯ ಮಾಧ್ಯಮ ಮತ್ತು ಸ್ಥಳೀಯ ಏಜೆನ್ಸಿಗಳಿಗೆ ಟ್ಯಾಗ್ ಮಾಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ತನ್ನು ಮೊದಲು ನೀವು ತರಿಸಿಕೊಂಡ ಪಿಜ್ಜಾವನ್ನು ಎರಡು ಬಾರಿ ಸರಿಯಾಗಿ ಪರೀಕ್ಷಿಸಿಕೊಳ್ಳಿ. ಯಾವಾಗಲೂ ಜಾಗರೂಕರಾಗಿರಿ ಎಂದು ಎಚ್ಚರಿಸುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಡಾಮಿನೋಸ್ ಪಿಜ್ಜಾ ಹಟ್, ಮಹಿಳೆಗೆ ಕ್ಷಮೆಯಾಚಿಸಿದೆ. ಇಂತಹ ಘಟನೆ ಇನ್ನುಮುಂದೆ ನಡೆಯದಂತೆ ಅಂಗಡಿಗಳ ಜತೆ ನಾವು ಮಾತನಾಡಿದ್ದೇವೆ ಎಂದು ಹೇಳಿದೆ. ಗ್ರಾಹಕರ ತೃಪ್ತಿ ಮತ್ತು ಸುರಕ್ಷತೆಯನ್ನು ನಾವು ಎಂದಿಗೂ ಪಾಲಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ:
Domino’s Data Breach: ಡಾಮಿನೋಸ್ 18 ಕೋಟಿ ಆರ್ಡರ್, 13TBಯಷ್ಟು ಸಿಬ್ಬಂದಿ, ಗ್ರಾಹಕರ ಮಾಹಿತಿ ಸೋರಿಕೆ
(Women finding nut and bolts in dominos pizza)
Published On - 12:08 pm, Mon, 23 August 21