ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಇದ್ದೇ ಇರುತ್ತದೆ. ಈ ಕಾರಣದಿಂದ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಹೊರಗೆ ಕೆಲಸಕ್ಕೆ ಹೋಗುವ ಮಹಿಳೆಯರಂತೂ ತುಸು ಹೆಚ್ಚೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೌದು ಮನೆ ಕೆಲಸಗಳನ್ನು ಸಂಜೆ ಮಾಡಿದ್ರೆ ಆಯ್ತಾಪ್ಪಾ ಎನ್ನುತ್ತಾ ಬೇಗ ಆಫೀಸಿಗೆ ಹೋಗುವ ಮಹಿಳೆಯರು, ಈ ಟ್ರಾಫಿಕ್ ಕಾರಣದಿಂದ ಸಂಜೆ ಮನೆಗೆ ಬರುವುದು ಕೂಡಾ ತಡವಾಗುತ್ತದೆ. ಇದರಿಂದಾಗಿ ಪೂರಾ ಮನೆ ಕೆಲಸ ಮಾಡೋದು ಬಿಡಿ, ಒಂಚೂರು ರೆಸ್ಟ್ ಮಾಡೋಕು ಅವರಿಗೆ ಟೈಮ್ ಸಿಗೋದಿಲ್ಲ. ಆದ್ರೆ ಇಲ್ಲೊಬ್ರು ಮಹಿಳೆ ಈ ಟ್ರಾಫಿಕ್ ಸಮಸ್ಯೆ ಇದ್ದಿದ್ದೇ, ಅದನ್ನು ಸರಿ ಪಡಿಸಲು ಬಹುಶಃ ಯಾರ ಕೈಯಿಂದಲೂ ಸಾಧ್ಯವಿಲ್ಲ. ಆದರೆ ನಾನು ಈ ಟ್ರಾಫಿಕ್ ನಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಏನಾದ್ರೂ ಕೆಲಸ ಮಾಡ್ಬೋದಲ್ವಾ ಎನ್ನುತ್ತಾ ಟ್ರಾಫಿಕ್ ಮಧ್ಯೆ ನಡು ರಸ್ತೆಯಲ್ಲಿಯೇ ಮಾರುಕಟ್ಟೆಯಿಂದ ತಂದಂತಹ ಬಟಾಣಿಯ ಸಿಪ್ಪೆ ಬಿಡಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯೆ ನಿಂತು ಬಟಾಣಿ ಸಿಪ್ಪೆ ಬಿಡಿಸುತ್ತಿರುವ ದೃಶ್ಯವನ್ನು ಕಾಣಬಹುದು. @ghantaa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಟೈಮ್ ಮ್ಯಾನೆಜ್ಮೆಂಟ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ನಗರದಲ್ಲಿ ಸಂಜೆ ಹೊತ್ತಿನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿರುತ್ತದೆ. ಅಲ್ಲಿದ್ದ ವಾಹನ ಸವಾರರೆಲ್ಲರೂ ಅಬ್ಬಬ್ಬಾ ಈ ಟ್ರಾಫಿಕ್ ಯಾವಾಗ ಕ್ಲೀಯರ್ ಆಗುತ್ತೋ, ನಾವು ಯಾವಾಗ ಮನೆಗೆ ಹೋಗಿ ತಲುಪುತ್ತೆವೆಯೋ ಎಂದು ತಲೆ ಬಿಸಿ ಮಾಡಿಕೊಂಡು ಕೂತಿರುತ್ತಾರೆ. ಈ ಮಧ್ಯೆ ತಲೆ ಬಿಸಿ ಮಾಡಿಕೊಂಡ್ರೆ ಏನ್ ಪ್ರಯೋಜನ, ಟೈಮ್ ಸೇವ್ ಮಾಡಲು ಇಲ್ಲೇ ಏನಾದ್ರೂ ಮನೆ ಕೆಲಸ ಮಾಡ್ಬೋದಲ್ವಾ ಎನ್ನುತ್ತಾ ಮಹಿಳೆಯೊಬ್ಬರು ನಡುರಸ್ತೆಯಲ್ಲಿ ತಮ್ಮ ಸ್ಕೂಟಿಯ ಮೇಲೆ ಮಾರುಕಟ್ಟೆಯಿಂದ ತಂದಂತಹ ಬಟಾಣಿಯನ್ನಿಟ್ಟು, ಅಲ್ಲೇ ನಿಂತುಕೊಂಡು ಬಟಾಣಿ ಸಿಪ್ಪೆ ಸುಳಿಯುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಐ ಲವ್ ಯು ಬೇಬಿ; ಪ್ರೇಯಸಿಗೆ ಪ್ರಪೋಸ್ ಮಾಡಿ ಮುತ್ತು ಕೇಳಿದ ತುಂಟ ಗಿಳಿರಾಯ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 80 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಈ ದೃಶ್ಯ ವಾಸ್ತವವಾಗಿ ತಾಯಂದಿರ ಕಠಿಣ ಪರಿಶ್ರಮ ಮತ್ತು ಅವರಿಗಿರುವ ಕೆಲಸದ ಒತ್ತಡದ ಪ್ರಮಾಣವನ್ನು ತೋರಿಸುತ್ತದೆ. ತಾಯಿ ಯಾವಾಗಲೂ, ಎಲ್ಲಿದ್ದರೂ ತನ್ನ ಕುಟುಂಬಕ್ಕಾಗಿಯೇ ಶ್ರಮಿಸುತ್ತಾಳೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ