ಉಕ್ರೇನ್ ಮೇಲಿನ ರಷ್ಯಾ ಯುದ್ಧ (Ukraine Russia War) 11 ನೇ ದಿನಕ್ಕೆ ಕಾಲಿರಿಸಿದೆ. ಐದುವರೆ ಗಂಟೆಗಳ ಕದನವಿರಾಮದ ಬಳಿಕ ಮತ್ತೆ ರಷ್ಯಾ ಯುದ್ಧ ಮುಂದುವರೆಸಿದೆ. ಜನಜೀವನ ಅಕ್ಷರಶಃ ನಲುಗಿಹೋಗಿದೆ. ಎಲ್ಲಿ ಯಾವ ಹೊತ್ತಿಗೆ ಬಾಂಬ್ ಸ್ಫೋಟದ ಸದ್ದು ಕೇಳಿಸಲಿದೆ ಎನ್ನುವ ಅರಿವಿಲ್ಲದೆ ಕ್ಷಣಕ್ಷಣಕ್ಕೂ ಭಯದಲ್ಲೇ ಬದುಕುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ. ಯುದ್ಧನಾಡು ಉಕ್ರೇನ್ನ ಎಲ್ವಲ್ (Lviv Train Station) ರೈಲು ನಿಲ್ದಾಣದಲ್ಲಿ ಕುಳಿತು ಯುವತಿಯೊಬ್ಬಳು ಪಿಯಾನೋ (Piano) ನುಡಿಸಿದ್ದಾಳೆ. ಯುದ್ಧದ ಆತಂಕ, ಭಯ, ನೋವಿನ ನಡುವೆ ಯುವತಿ ‘ಜಗತ್ತು ಎಷ್ಟು ಸುಂದರ’ ಎಂದು ಪಿಯಾನೋ ನುಡಿಸಿದ್ದು, ಅದರ ವಿಡಿಯೋ ಸಖತ್ ವೈರಲ್ ಆಗಿದೆ.
Outside Lviv station, which is thronging with exhausted refugees fleeing war in eastern Ukraine, an accomplished pianist is playing “What a Wonderful World.” It’s hauntingly beautiful. pic.twitter.com/Xm5itr8jl7
— Andrew RC Marshall (@Journotopia) March 5, 2022
ಜನನಿಬಿಡ ಪ್ರದೇಶದಲ್ಲಿ ಭಾರೀ ಗಾತ್ರದ ಪಿಯಾನೋ ಇಟ್ಟುಕೊಂಡು ಲೋಯಸ್ ಆರ್ಮ್ಸ್ಟ್ರಾಂಗ್ ಅವರ ಹಾಡು What A Wonderful World ಹಾಡನ್ನು ನುಡಿಸಿದ್ದಾಳೆ. ಆಕೆಯ ಸುತ್ತಲೂ ಬ್ಯಾಗ್ಗಳನ್ನು ಹಿಡಿದುಕೊಂಡು ವಿವರಿಸಲಾಗದ ಭಯದಲ್ಲಿ ರೈಲಿಗಾಗಿ ಕಾಯುತ್ತಿರುವ ಜನರು ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅದೆಲ್ಲವನ್ನು ಕಡೆಗಣಿಸಿ ತನ್ನದೇ ಪ್ರಪಂಚದಲ್ಲಿ ಭಯದ ನಡುವೆಯೂ ಪಿಯಾನೋ ನುಡಿಸಿದ್ದಾಳೆ.
ವಿಡಿಯೋ ನೋಡಿದ ನೆಟ್ಟಿಗರು ಕಣ್ಣಾಲಿಗಳಲ್ಲಿ ನೀರು ತುಂಬುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋವನ್ನು ಆ್ಯಂಡ್ರೂ ಮಾರ್ಶಲ್ ಎನ್ನುವವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು 85 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಯುದ್ಧದ ನಡುವೆಯೂ ಜಗತ್ತು ಎಷ್ಟು ಸುಂದರ ಎನ್ನುವುದನ್ನು ಕಂಡು ಬಳಕೆದಾರರು ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ:
Published On - 3:56 pm, Sun, 6 March 22