
ಎಂಥಹುದೇ ಕಠಿಣ ಗುರಿಯಾಗಿರಲಿ ಸತತ ಪ್ರಯತ್ನ ಮತ್ತು ಅಭ್ಯಾಸ ಹೊಂದಿದ್ದಾಗ ಸಾಧನೆಯ ಮೆಟ್ಟಿಲೇರಬಹುದು. ಅಂತಹುದೇ ಓರ್ವ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮಹಿಳೆಯೋರ್ವಳು ನೀರಿನ ಮೇಲೆ ಬೈಕ್ ಓಡಿಸುವ ದೃಶ್ಯ ಜನರನ್ನು ದಿಗ್ಭ್ರಮೆಗೊಳಿಸುವಂತೆ ಮಾಡಿದೆ. ಮಹಿಳೆಯ ಪರಿಶ್ರಮಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಡಾಕ್ಟರ್ ಅಜಯಿತಾ ಎಂಬ ಟ್ವಿಟರ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಿಳೆಯ ಅದ್ಭುತ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಮಹಿಳೆಯೋರ್ವಳು ನೀರಿನ ಮೇಲೆ ಬೈಕ್ ಸವಾರಿ ಮಾಡುತ್ತಿರುವುದು ಕಂಡು ಬರುತ್ತದೆ. ಕೇವಲ ಬೈಕ್ ಓಡಿಸುವುದೊಂದೇ ಅಲ್ಲ! ಪಾತ್ರೆ ತುಂಬಿದ ಬುಟ್ಟಿಯನ್ನು ತಲೆಯ ಮೇಲೆ ಇಟ್ಟುಕೊಂಡು ತನ್ನ ಎರಡೂ ಕೈಗಳಲ್ಲಿ ಬಕೆಟ್ ಸಿಕ್ಕಿಸಿಕೊಂಡು ಬೈಕ್ ಹ್ಯಾಂಡಲ್ ಹಿಡಿದು ನೀರಿನ ಮೇಲೆ ಬೈಕ್ ಓಡಿಸಿದ್ದಾಳೆ.
ಅದ್ಭುತ ಪ್ರತಿಭೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. 41 ಸೆಕೆಂಡುಗಳ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಂತೆಯೇ 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಹಿಳೆ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸುತ್ತಾಳೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಇನ್ನೋರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಅವಳು ‘ವಂಡರ್ ವುಮೆನ್’ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ:
Viral Video: ಭರ್ಜರಿ ಭೋಜನ ಸವಿಯುತ್ತಿರುವ ಯುವತಿ! ಕ್ಯಾಮರಾ ಬಂದ ತಕ್ಷಣ ರಿಯಾಕ್ಷನ್ ಹೇಗಿದೆ ನೋಡಿ
Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು