Video: ಕನಸನ್ನು ಬೆನ್ನಟ್ಟಿ ಹೋದ ವ್ಯಕ್ತಿ; ಇಂದು ಏರ್ ಇಂಡಿಯಾದಲ್ಲಿ ಸ್ವಚ್ಛತಾ ಸಿಬ್ಬಂದಿ

ಪ್ರತಿಯೊಬ್ಬರಿಗೂ ಸಾವಿರಾರು ಕನಸುಗಳಿರುತ್ತದೆ. ಆ ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಏರ್ ಇಂಡಿಯಾದಲ್ಲಿ ಕ್ಲೀನರ್ ಆಗಿರುವ ವ್ಯಕ್ತಿಯೊಬ್ಬರು ತಮ್ಮ ಕನಸಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಈ ಹೃದಯ ಸ್ಪರ್ಶಿ ಕಥೆ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕನಸನ್ನು ಬೆನ್ನಟ್ಟಿ ಹೋದ ವ್ಯಕ್ತಿ; ಇಂದು ಏರ್ ಇಂಡಿಯಾದಲ್ಲಿ ಸ್ವಚ್ಛತಾ ಸಿಬ್ಬಂದಿ
ವೈರಲ್‌ ವಿಡಿಯೋ
Image Credit source: Instagram

Updated on: Jun 15, 2026 | 6:14 PM

ಪ್ರತಿಯೊಬ್ಬರಿಗೂ ಚಿಕ್ಕಂದಿನಿಂದಲೂ ಕನಸುಗಳಿರುತ್ತವೆ. ಸಣ್ಣ ಮಕ್ಕಳನ್ನು ಕೇಳಿದರೆ ದಕ್ಷ ಅಧಿಕಾರಿಯಾಗಬೇಕು, ವೈದ್ಯನಾಗಬೇಕು ಹೀಗೆ ತಮ್ಮ ಕನಸುಗಳನ್ನು ಹೇಳುತ್ತಾರೆ. ಆದರೆ ಅಂದುಕೊಂಡಿದ್ದನ್ನು ಸಾಧಿಸುವುದು, ಕೆಲಸ ಗಿಟ್ಟಿಸಿಕೊಳ್ಳೋದು ಹೇಳಿದ್ದಷ್ಟು ಸುಲಭವಲ್ಲ. ಇದೀಗ ಏರ್ ಇಂಡಿಯಾದಲ್ಲಿ (Air India) ಕ್ಲೀನರ್ ಆಗಿ ಕೆಲಸ ಮಾಡುವ ವ್ಯಕ್ತಿ ತಮ್ಮ ಕನಸಿನ ಉದ್ಯೋಗ ಗಿಟ್ಟಿಸಿಕೊಂಡು ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ಏರ್ ಇಂಡಿಯಾದ ಸ್ವಚ್ಛತಾ ಸಿಬ್ಬಂದಿಯೊಬ್ಬರ ಹೃದಯಸ್ಪರ್ಶಿ ವಿಡಿಯೋ  ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೆಲಸದ ಮೇಲೆ ಅವರಿಗಿರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

ವರ್ಷ (Vursha) ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ಉದ್ಯೋಗಿಯ ಜೀವನ ಹಾಗೂ ತಮ್ಮ ಕನಸಿನ ಕೆಲಸದ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ. ಈ ಕ್ಲಿಪ್ ನಲ್ಲಿ ಯಾವುದೂ ಸುಲಭವಲ್ಲ, ಆದರೆ ಎಲ್ಲವೂ ಸಾಧ್ಯ ಎಂದು ಬರೆಯಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ವರ್ಷ ಅವರು ಆಕಸ್ಮಿಕವಾಗಿ  ಏರ್‌ ಇಂಡಿಯಾದ ಸ್ವಚ್ಫತಾ ಸಿಬ್ಬಂದಿಯನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಕೆಲಸದ ಬಗ್ಗೆ ಮಾತನಾಡಿದ ರೀತಿ ನನ್ನನ್ನು ಬೆರಗುಗೊಳಿಸಿತು. ಇಷ್ಟು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಯನ್ನು ನಾನು ಈಗಷ್ಟೇ ಭೇಟಿಯಾದೆ. ಏರ್ ಇಂಡಿಯಾ ಜೊತೆ ಕೆಲಸ ಮಾಡಲು ಇಷ್ಟವಿದೆಯೇ ಎಂದು ನಾನು ಕೇಳಿದಾಗ, ಅವರು ತಮ್ಮ ವರ್ಷಗಳ ಅನುಭವವನ್ನು ಹಂಚಿಕೊಂಡು, ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಶ್ಲಾಘಿಸಿದರು ಎಂದಿದ್ದಾರೆ.

ಏರ್ ಇಂಡಿಯಾಗೆ ಸೇರುವುದು ಅವರ ಕನಸಾಗಿತ್ತು. ಅವರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಜೀವನದ ಉದ್ದೇಶ ಸಂತೋಷವಾಗಿರುವುದು ಹೇಗೆ ಎಂಬುದಕ್ಕೆ ಅವರು ಅತ್ಯುತ್ತಮ ಉದಾಹರಣೆ. ನೀವು ತೆಗೆದುಕೊಳ್ಳಬಹುದಾದ ದೊಡ್ಡ ಸಾಹಸವೆಂದರೆ ನಿಮ್ಮ ಕನಸುಗಳಂತೆ ಜೀವನವನ್ನು ನಡೆಸುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ

ಈ ವಿಡಿಯೋ ನವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪುಸ್ತಕದ ಮುಖಪುಟ ನೋಡಿ ಎಂದಿಗೂ ನಿರ್ಣಯಿಸಬೇಡಿ ಎಂದಿದ್ದಾರೆ. ಇನ್ನೊಬ್ಬರು, ನೀವು ದೊಡ್ಡ ಅಪ್ಪುಗೆಗೆ ಅರ್ಹರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಕನಸು ನನಸಾಗಿಸಿಕೊಂಡು ಖುಷಿಯಿಂದ ಇರುವ ನೀವೇ ನಮಗೆ ಸ್ಫೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Mon, 15 June 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us