Viral Video: ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್​ಗಳ ವಿಡಿಯೋ ವೈರಲ್

Mustache: ಹುರಿಮೀಸೆ, ಪೊದೆಮೀಸೆ, ಗಿರಿಜಾಮೀಸೆ, ಸುರುಳಿಮೀಸೆ ವಿವಿಧ ಬಗೆಯ ಮೀಸೆ ವಿನ್ಯಾಸಗಳೊಂದಿಗೆ ಈ ಅಜ್ಜಂದಿರು ನಿಮ್ಮನ್ನು ಎದುರುಗೊಂಡಿದ್ದಾರೆ. ಮಂಡೇ ಬ್ಲ್ಯೂಸ್​ ಓಡಿಹೋಗಬಹುದೇ ಈ ವಿಡಿಯೋ ನೋಡಿದಾಗ?

Viral Video: ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್​ಗಳ ವಿಡಿಯೋ ವೈರಲ್
World Beard and Mustache championships
Updated By: ಶ್ರೀದೇವಿ ಕಳಸದ

Updated on: Jun 19, 2023 | 3:53 PM

Mustache : ಮೀಸೆ ಎಂದಾಕ್ಷಣ ನಮಗೆ ಕಣ್ಮುಂದೆ ಬರುವುದು ನಮ್ಮ ನಮ್ಮ ಊರಿನಮೀಸೆಮಾಮಂದಿರು. ಜೊತೆಗೆ ಗಿರಿಜಾ ಮೀಸೆಯನ್ನು ಹುರಿಗೊಳಿಸಿಕೊಳ್ಳುತ್ತಲೇ ದಿಟ್ಟಿಸಿ ನೋಡುವ ಪೊಲೀಸ್​ ಮಾಮಂದಿರು ಮತ್ತು ಅಪರೂಪಕ್ಕೆ ಮಿಲಿಟರಿಯವರು. ಇನ್ನು ಗಡ್ಡವೆಂದರೆ ಸಾಧುಸಂತರು. ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್​ಗಳು (World Beard and Mustache championships) ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಮೇಲ್ದುಟಿಯ ಮೇಲೆ ವೇಗವಾಗಿ ಬೆಳೆಯುವ ಕೂದಲು ತಲೆಯ ಮೇಲೆ ಏಕೆ ಬೆಳೆಯುವುದಿಲ್ಲವೋ? ಇದು ವಿಶ್ವದ ಮಿಲಿಯಗಟ್ಟಲೆ ಜನರ ಜಾಗತಿಕ ಸಮಸ್ಯೆ ಎಂದಿದ್ದಾರೆ ಒಬ್ಬರು. ಅಬ್ಬಾ ಇವರ ಮೀಸೆಗಳನ್ನು ನೋಡುತ್ತಿದ್ದರೆ ಹುಚ್ಚೇ ಹಿಡಿಯುತ್ತದೆ. ಪ್ರತೀದಿನ ಇವರು ಇವುಗಳನ್ನು ಪೋಷಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ ಎಂದು ಇನ್ನೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಮರಳುಗಾಡಿನಲ್ಲಿ ಕಳೆದು ಹೋದ ನಾಯಿ ಮತ್ತೆ ಮರಳಿದಾಗ

ಈ ಮುದುಕರು ಅತ್ಯಂತ ಸ್ಫೂರ್ತಿದಾಯಕರು. ಈ ವಯಸ್ಸಿನಲ್ಲಿಯೂ ಸ್ಟೈಲಿಗೆ ಎಷ್ಟೊಂದು ಮಹತ್ವ ಕೊಡುತ್ತಿದ್ದಾರೆ, ಯುವಕರಾದ ನಾವು ತಲೆ ತಗ್ಗಿಸಬೇಕು ಎಂದಿದ್ದಾರೆ ಮಗದೊಬ್ಬರು. ತಂತಿಯನ್ನೇ ಮೀಸೆಗಳಿಗೆ ಸಿಕ್ಕಿಸಿಕೊಂಡಿದ್ದಾರೇನೋ ಅನ್ನಿಸುತ್ತದೆ ಒಬ್ಬೊಬ್ಬರನ್ನೂ ನೋಡಿದಾಗ. ಅವು ಹೀಗೆ ಸ್ಟಿಫ್ ಆಗಿ ನಿಂತುಕೊಳ್ಳಬೇಕೆಂದರೆ ಅದಕ್ಕೆ ದಿನವೂ ಅದೆಷ್ಟು ಮೆಹನತ್ ಮಾಡಬೇಕಲ್ಲವೆ ಅವರು? ಎಂದು ಇನ್ನೂ ಒಬ್ಬರು ಕೇಳಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:25 pm, Mon, 19 June 23