French Fries: ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಎಲ್ಲಿ ಸಿಗುತ್ತೆ ಗೊತ್ತಾ? ಬೆಲೆ ಕೇಳಿದ್ರೆ ನಿಜವಾಗಿಯೂ ಶಾಕ್ ಆಗ್ತೀರಾ

Viral News: ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಅನ್ನಿಸಿಕೊಂಡಿರುವ ಈ ಹೊಸ ಬಗೆಯ ತಿಂಡಿಗೆ ಬರೋಬ್ಬರಿ 14, 800 ರೂಪಾಯಿ. ಹಾಗಾದ್ರೆ, ಈ ಹೊಸ ಬಗೆಯ ಫ್ರೆಂಚ್ ಫ್ರೈ ಹೊಸ ಬಗೆಯ ಸಾಮಗ್ರಿ ಬಳಕೆಯಿಂದ ತಯಾರಾಗುತ್ತದೆಯೇ?

French Fries: ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಎಲ್ಲಿ ಸಿಗುತ್ತೆ ಗೊತ್ತಾ? ಬೆಲೆ ಕೇಳಿದ್ರೆ ನಿಜವಾಗಿಯೂ ಶಾಕ್ ಆಗ್ತೀರಾ
Edited By:

Updated on: Jul 28, 2021 | 12:31 PM

ಸಾಮಾನ್ಯವಾಗಿ ಫ್ರೆಂಚ್ ಫ್ರೈಗಳನ್ನು ಟೇಸ್ಟ್ ಮಾಡಿಯೇ ಇರ್ತೀರಿ.. ಆದ್ರೆ ಹಣ ಎಷ್ಟು ಕೊಟ್ಟಿರಬಹುದು? 100 ರಿಂದ 200 ರೂಪಾಯಿ. ಹೆಚ್ಚೂ ಅಂದ್ರೂ 250-300 ರೂಪಾಯಿ. ಆದರೆ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ(Worlds most expensive French fries) ಟೇಸ್ಟ್​ ಮಾಡಿದ್ದೀರಾ? ನೋಡಲು ಅತ್ಯಾಕರ್ಷಕವಾಗಿ ಕಾಣುತ್ತಿರುವ ಫ್ರೆಂಚ್ ಫ್ರೈ ನೋಡಿದ್ರೆ ಒಂದು ಬಾರಿಯಾದ್ರೂ ಟೇಸ್ಟ್ ಸವಿಯಲೇ ಬೇಕು ಅನಿಸ್ತಿದೆ ಅಲ್ವೇ? ಮೊದಲು ಬೆಲೆ ಎಷ್ಟು ತಿಳಿಯಿರಿ ಬಳಿಕ ಇಷ್ಟವಾದ್ರೆ ಫ್ರೆಂಚ್ ಫ್ರೈ(French Fries) ಖರೀದಿಸಬಹುದು.

ವಿಶ್ವದಲ್ಲೇ ಅತ್ಯಂತ ದುಬಾರಿ ಫ್ರೆಂಚ್ ಫ್ರೈ ಅನ್ನಿಸಿಕೊಂಡಿರುವ ಈ ಹೊಸ ಬಗೆಯ ತಿಂಡಿಗೆ ಬರೋಬ್ಬರಿ 14, 800 ರೂಪಾಯಿ. ಹಾಗಾದ್ರೆ ಈ ಹೊಸ ಬಗೆಯ ಫ್ರೆಂಚ್ ಫ್ರೈ ಹೊಸ ಬಗೆಯ ಸಾಮಗ್ರಿ ಬಳಕೆಯಿಂದ ತಯಾರಾಗುತ್ತದೆಯೇ?

ನ್ಯೂಯಾರ್ಕ್​ನಲ್ಲಿರುವ serendipity 3 ಎಂಬ ಹೆಸರಿನ ರೆಸ್ಟೋರೆಂಟ್ ವಿಶ್ವದಲ್ಲೇ ಅತ್ಯಂತ ದುಬಾರಿ ತಿಂಡಿಗಳು ಸಿಗುವ ಹೆಸರಿಗೆ ಪಾತ್ರವಾಗಿದೆ. ಜತೆಗೆ ಗಿನ್ನಿಸ್ ವರ್ಡ್ ರೆಕಾರ್ಡ್​ನಲ್ಲಿ ಹೆಸರು ಗಳಿಸಿಕೊಂಡಿದೆ. ಈ ಹಿಂದೆ ವಿಶ್ವದ ದುಬಾರಿ ಐಸ್​ಕ್ರೀಂ ಹೆಸರು ಬಡೆದುಕೊಂಡಿತ್ತು. ಇದೀಗ ಅತ್ಯಂತ ದುಬಾರಿಯ ಫ್ರೆಂಚ್ ಫ್ರೈ ತಯಾರಿಸಿದೆ.

ಫ್ರೆಂಚ್ ಫ್ರೈಅನ್ನು ಕ್ರೀಮ್ ಡೆ ಲಾ, ಕ್ರೀಮ್ ಪೊಮ್ಮೆ ಫ್ರೈಸ್ ಎಂದು ಕರೆಯಲಾಗುತ್ತದೆ. ಆದರೆ ಇವರು ಶುದ್ಧ ಎಣ್ಣೆಯಲ್ಲಿ ಆಲೂಗಡ್ಡೆಯನ್ನು ಫ್ರೈ ಮಾಡುವುದಿಲ್ಲ. ಇದನ್ನು ತಯಾರಿಸುವ ಬಗೆ ಬೆರೇಯೇ ಇದೆ. ವಿಡಿಯೋ ನೋಡಿ …

ಫ್ರೆಂಚ್ ಫ್ರೈ ಮೇಲೆ ಚಿನ್ನದ ಹುಡಿಗಳನ್ನು(ಚಿನ್ನದ ಧೂಳು) ಉದುರಿಸಲಾಗಿದೆ. ಇದನ್ನು ಚಿನ್ನದ ಫೆಂಚ್ ಫ್ರೈ ಎಂದೂ ಕೆಲವು ಕರೆಯುತ್ತಿದ್ದಾರೆ. ನೋಡಲು ಸುಂದರವಾಗಿ ಜತೆಗೆ ಅಲಂಕಾರಗೊಂಡ ಫ್ರೆಂಚ್ ಫ್ರೈ ಅನ್ನು ಸವಿದೇ ಬಿಡೋಣ ಅನ್ನಿಸುತ್ತೆ. ಆದ್ರೆ ಬೆಲೆ ಕೇಳಿದಾಕ್ಷಣ ಒಮ್ಮೆ ಆಶ್ಚರ್ಯವಾಗುವುದಂತೂ ನಿಜ. ಈ ದುಬಾರಿ ಫ್ರೆಂಚ್ ಫ್ರೈ ನ್ಯೂಯಾರ್ಕ್​ನಲ್ಲಿ ಫೇಮಸ್ ಆಗಿದೆ.

ಇದನ್ನೂ ಓದಿ:

Ice Cream: ಜಗತ್ತಿನ ಅತಿ ದುಬಾರಿ ಐಸ್​ ಕ್ರೀಂ ಟೇಸ್ಟ್​ ಮಾಡಬೇಕಾ?; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

Viral Photo: ಸೀರೆಯ ಮೇಲೆ ಮಗಳು ಖರೀದಿಸಿದ ಅತ್ಯಂತ ದುಬಾರಿ​ ಬೆಲ್ಟ್​ ಧರಿಸಿ ನಿಂತ ತಾಯಿ; ಹೊಸ ಸ್ಟೈಲ್​ ಹೊಸ ಲುಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ!

Published On - 12:31 pm, Wed, 28 July 21