ಅಯ್ಯಯ್ಯೋ… ನಾಯಿ ಮೊಲೆ ಚೀಪಿ ಹಾಲು ಕುಡಿದ ಯುವತಿ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2024 | 5:04 PM

ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗ್ಬೇಕು, ಲೈಕ್ಸ್‌-ವೀವ್ಸ್‌ ಗಿಟ್ಟಿಸಿಕೊಳ್ಳಬೇಕೆಂದು ತರಹೇವಾರಿ ಮಂಗನಾಟ ಆಡುವವರನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್‌ ಫೇಮಸ್‌ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಚೀಪಿ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿದ್ದು, ರೀಲ್ಸ್‌ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಅಯ್ಯಯ್ಯೋ… ನಾಯಿ ಮೊಲೆ ಚೀಪಿ ಹಾಲು ಕುಡಿದ ಯುವತಿ; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us on

ಈಗಂತೂ ಪುಟ್‌ ಪುಟಾಣಿ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೆ ರೀಲ್ಸ್‌ ಮಾಡೋದು ಒಂದು ಫ್ಯಾಶನ್‌ ಆಗಿ ಬಿಟ್ಟಿದೆ. ಅದರಲ್ಲೂ ಕೆಲವರಂತೂ ಕಡಿಮೆ ಸಮಯದಲ್ಲಿಯೇ ಸಖತ್‌ ಫೇಮಸ್‌ ಆಗ್ಬೇಕು ಅಂತ ಬಟ್ಟೆ ಬಿಚ್ಚಿ ಕುಣಿಯುವಂತಹದ್ದು, ಜೀವಕ್ಕೆ ಆಪತ್ತು ತಂದು ರೀಲ್ಸ್‌ ಮಾಡುವಂತಹದ್ದು, ಅಸಹ್ಯಕರ ವಿಡಿಯೋ ಮಾಡುವಂತಹದ್ದು ಇತ್ಯಾದಿ ಮಂಗನಾಟಗಳನ್ನು ಆಡ್ತಾರೆ. ಹೀಗೆ ಚಿತ್ರ ವಿಚಿತ್ರ ರೀಲ್ಸ್‌ಗಳಿಂದಲೇ ಫೇಮಸ್‌ ಆದವರು ಹಲವರಿದ್ದಾರೆ. ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್‌ ಫೇಮಸ್‌ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿದ್ದು, ರೀಲ್ಸ್‌ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಇಲ್ಲಿಯವರಿಗೆ ನಾಯಿ ಹಾಲನ್ನು ಕುಡಿಯುವಂತಹ ಸಾಹಸಕ್ಕೆ ಯಾರು ಕೂಡಾ ಕೈ ಹಾಕಿರಲಿಕ್ಕಿಲ್ಲ. ಆದ್ರೆ ಇಲ್ಲೊಬ್ಳು ಯುವತಿ ನಾನು ಹೇಗಾದ್ರೂ ಫೇಮಸ್‌ ಆಗ್ಬೇಕು ಎನ್ನುತ್ತಾ ರೀಲ್ಸ್‌ ಮಾಡುವ ಸಲುವಾಗಿ ನಾಯಿ ಮೊಲೆ ಚೀಪಿ ಹಾಲು ಕುಡಿಯುವ ಸಾಹಸಕ್ಕೆ ಕೈ ಹಾಕಿದ್ದಾಳೆ.

ಮಮತಾ ರಾಜ್‌ಗರ್‌ (Rajgarh_mamta1) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ನಾಯಿ ಮೊಲೆ ಚೀಪಿ ಹಾಲು ಕುಡಿಯುವ ದೃಶ್ಯವನ್ನು ಕಾಣಬಹುದು. ಹೌದು ಆಕೆ ರೀಲ್ಸ್‌ ಮಾಡುವ ಸಲುವಾಗಿ ಮಲಗಿದ್ದ ನಾಯಿಯ ಬಳಿ ಹೋಗಿ ಅದರ ಮೊಲೆ ಹಾಲನ್ನು ಕುಡಿದಿದ್ದಾಳೆ.

ಇದನ್ನೂ ಓದಿ: ದೈತ್ಯ ಹೆಬ್ಬಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದ ಯುವಕ; ವಿಡಿಯೋ ವೈರಲ್‌

ಡಿಸೆಂಬರ್‌ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 36 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಫೇಮಸ್‌ ಆಗೋಕೆ ಈ ರೀತಿ ಚೀಪ್‌ ಟ್ರಿಕ್ಸ್‌ ಯೂಸ್‌ ಮಾಡ್ತಾರಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎತ್ತ ಸಾಗುತ್ತಿದೆ ಸಮಾಜʼ ಎಂದು ಪ್ರಶ್ನೆ ಹೇಳಿದ್ದಾರೆ. ಇನ್ನೂ ಅನೇಕರು ಈಕೆಯ ಹುಚ್ಚಾಟವನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ