Viral: ಸಾರ್ವಜನಿಕವಾಗಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ, ರೂಲ್ಸ್​​ ಬ್ರೇಕ್​ ಮಾಡಿದ್ರೆ ಶಿಕ್ಷೆ ಗ್ಯಾರಂಟಿ

ಇನ್ಮುಂದೆ ಸಾರ್ವಜನಿಕವಾಗಿ ಯಾರು ಕೂಡ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ ಎಂದು ಕಿಮ್ ಜಾಂಗ್ ಉನ್ ಆದೇಶ ನೀಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೀನ್ಸ್ ಪ್ಯಾಂಟ್ ನಮ್ಮ ದೇಶದ ಆಚರಣೆ ಅಲ್ಲ, ನೀಲಿ ಬಣ್ಣದ ಜೀನ್ಸ್​​​ನ್ನು ಯಾರು ಧರಿಸಬಾರದು. ಇದು ಅಮೆರಿಕನ್ ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

Viral: ಸಾರ್ವಜನಿಕವಾಗಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ, ರೂಲ್ಸ್​​ ಬ್ರೇಕ್​ ಮಾಡಿದ್ರೆ ಶಿಕ್ಷೆ ಗ್ಯಾರಂಟಿ
ಸಾಂದರ್ಭಿಕ ಚಿತ್ರ
Edited By:

Updated on: Jul 14, 2025 | 3:49 PM

ಜೀನ್ಸ್ ಪ್ಯಾಂಟ್ (blue jeans) ಈಗಿನ ಕಾಲದಲ್ಲಿ ಫ್ಯಾಷನ್​​​ ಅಂತಾನೇ ಹೇಳಬಹುದು.  ಇದು ಸ್ಟೈಲಿಶ್​​​ ಆಗಿ ಕಾಣಲು ಕೂಡ ಸಹಾಯ ಮಾಡುತ್ತದೆ, ಹಾಗಾಗಿ ಯುವಕ -ಯುವತಿಯರಿಗೆ‌ ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ದೇಶದಲ್ಲಿ ಜೀನ್ಸ್ ಪ್ಯಾಂಟ್ ಹಾಕಿಕೊಂಡರೆ ಜೈಲಿಗೆ ಹಾಕುವುದು ಗ್ಯಾರಂಟಿ. ಇಲ್ಲಿ ಜೀನ್ಸ್ ಪ್ಯಾಂಟ್ ನಿಷೇಧ ಮಾಡಲಾಗಿದೆ. ವಿಶ್ವದಲ್ಲಿ ಬೇರೆ ಬೇರೆ ವಿಚಾರಕ್ಕೆ ಯುದ್ಧ ನಡೆಯುತ್ತಿದ್ದರೆ, ಉತ್ತರ ಕೊರಿಯಾ (north korea) ಜೀನ್ಸ್ ಪ್ಯಾಂಟ್ ವಿರುದ್ಧ ಯುದ್ಧ ಮಾಡುತ್ತಿದೆ. ಉತ್ತರ ಕೊರಿಯಾದಲ್ಲಿ  ಹೇಳಿ-ಕೇಳಿ ಕಿಮ್ ಜಾಂಗ್ ಉನ್ ಸರ್ವಾಧಿಕಾರಿ ಆಳ್ವಿಕೆ, ಅವರು ಹೇಳಿದಂತೆ ಕೇಳುವುದು ಹಾಗೂ ಅವರು ಹೇಳಿದ ರೂಲ್ಸ್ ಕಡ್ಡಾಯವಾಗಿ ಜಾರಿಗೆ ಬಂದೆ ಬರುತ್ತದೆ. ಅದೇ ರೀತಿ  ಇದೀಗ ಕಿಮ್ ಜಾಂಗ್ ಉನ್ ಜೀನ್ಸ್ ಪ್ಯಾಂಟ್ ಬ್ಯಾನ್​​ ಮಾಡಿದ್ದಾರೆ. ನೀಲಿ ಜೀನ್ಸ್ ಧರಿಸಿ ರಸ್ತೆಯಲ್ಲಿ ಹೋದ್ರೆ ಪೊಲೀಸರು ಹಿಡಿದು ಜೈಲಿಗೆ ಹಾಕುತ್ತಾರೆ. ಅಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಧರಿಸುವುದೇ ದೊಡ್ಡ ಅಪರಾಧವಾಗಿದೆ.

ಉತ್ತರ ಕೊರಿಯಾ ಕಠಿಣ ನಿಯಮಗಳು ಮತ್ತು ಸರ್ವಾಧಿಕಾರಕ್ಕೆ ಹೆಸರುವಾಸಿಯಾದ ದೇಶ, ಅಲ್ಲಿನ ನಾಯಕ ಕಿಮ್ ಜಾಂಗ್ ಉನ್ ಅಮೆರಿಕದ ವಿರೋಧಿ. ಹಾಗಾಗಿ ‘ನೀಲಿ ಜೀನ್ಸ್’ ಅಮೆರಿಕನ್ ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿಯ ಸಂಕೇತ ಎನ್ನುವ ಕಾರಣಕ್ಕೆ ದೇಶದಲ್ಲಿ ನೀಲಿ ಜೀನ್ಸ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಡ್ರೆಸ್ ಕೋಡ್   ಕೇವಲ ಕಾನೂನು ಅಲ್ಲ, ಇದು ಒಂದು ಸಿದ್ಧಾಂತದ ಭಾಗವಾಗಿದೆ. ಯಾರಾದರೂ ತಪ್ಪಾಗಿ ನೀಲಿ ಜೀನ್ಸ್ ಧರಿಸಿದರೆ, ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಇಲ್ಲಿನ ಸರ್ಕಾರವು ಬಟ್ಟೆಗಳನ್ನು ಮಾತ್ರವಲ್ಲದೆ ಜನರ ಆಲೋಚನೆಯನ್ನೂ ನಿಯಂತ್ರಿಸುತ್ತದೆ. ಯಾವ ಬಟ್ಟೆಗಳನ್ನು ಧರಿಸಬೇಕು, ಕೂದಲಿನ ಸ್ಟೈಲ್​​ ಹೇಗಿರಬೇಕು. ಯಾವ ಬಣ್ಣ ಸೂಕ್ತ, ಇದೆಲ್ಲವನ್ನೂ ಸರ್ಕಾರ ನಿರ್ಧರಿಸುತ್ತದೆ. ಯಾರೂ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ. ಇಲ್ಲಿನ ಜನರ ಫ್ಯಾಷನ್​​ ಬಗ್ಗೆ ಪೊಲೀಸರು ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಾರೆ.

ಇದನ್ನೂ ಓದಿ: ನೆರೆಹೊರೆಯವರಿಂದ ಜೀವ ಬೆದರಿಕೆ; ರಕ್ಷಣೆಗಾಗಿ ಹೆಲ್ಮೆಟ್‌ಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ವ್ಯಕ್ತಿ

ಇದನ್ನೂ ಓದಿ
ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ ಪತಿ
ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರಂತೆ ಬಾಸ್
ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹಂಚಿಕೊಂಡ ಯುವತಿ
ಉದ್ಯಾನವನಕ್ಕೆ ಭೇಟಿ ನೀಡಿದ ಮಹಿಳೆಯ ಕೆನ್ನೆಗೆ ಚುಂಬಿಸಿದ ಮರಿಯಾನೆ

ಇನ್ನು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಅಂಗಡಿಗಳಲ್ಲಿ ಮಾರಾಟ ಮಾಡಿದ್ರು ಕೂಡ ಅಂಗಡಿ ಮಾಲೀಕನಿಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಮೆರಿಕಕ್ಕೆ ಸಂಬಂಧಿಸಿದ ಯಾವುದೇ ವಸ್ತು ಅಥವಾ ಆಚರಣೆಗಳು ಇಲ್ಲಿ ಇರಬಾದರು, ಒಂದು ವೇಳೆ ಇದ್ದರೆ ಅದನ್ನು ಈ ತಕ್ಷಣವೇ ನಿಲ್ಲಿಸಿ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಅಮೇರಿಕನ್ ಬ್ರಾಂಡ್ ಶರ್ಟ್‌ಗಳು, ಕೂದಲಿನ ಬಣ್ಣಗಳು ಮತ್ತು ಚರ್ಮದ ಜಾಕೆಟ್‌ಗಳನ್ನು ಸಹ ನಿಷೇಧಿಸಲಾಗಿದೆ. ಇಡೀ ಜಗತ್ತು ಫ್ಯಾಷನ್​​ನಲ್ಲಿ ಸ್ವಾತಂತ್ರ್ಯವಾಗಿದ್ದರೆ, ಉತ್ತರ ಕೋರಿಯಾದಲ್ಲಿ ಮಾತ್ರ ಸಮಾಜವನ್ನು ನಿಯಂತ್ರಿಸುವ ಒಂದು ಮಾರ್ಗವೆಂದು ಹೇಳಿದೆ.  ಅಲ್ಲಿನ ಯುವಕರಿಗೆ ಬಟ್ಟೆಗಳು ಕೇವಲ ಉಡುಗೆಯಲ್ಲ, ಬದಲಾಗಿ ಸರ್ಕಾರಿ ಆದೇಶಗಳಾಗಿವೆ ಎಂದು ಹೇಳಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ