Video: ಅಯ್ಯೋ ದೇವ್ರೇ…. 69 ವರ್ಷದ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು

ವಧು ವರರ ನಡುವೆ 10-12 ವರ್ಷಗಳ ಅಂತರವಿರುವುದು ಸಾಮಾನ್ಯ. ಆದ್ರೆ ವರ ಅಜ್ಜನಾಗಿ ವಧು ಹುಡುಗಿಯಾಗಿದ್ದರೆ ಹೇಗಾಗಬೇಡ ಹೇಳಿ. ಖಂಡಿತವಾಗಿಯೂ ಆ ಹುಡುಗಿಗೆ ನಿಂತ ನೆಲ ಕುಸಿದಂಗೆ ಆಗುತ್ತೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, 69 ರ ಹಣ್ಣು ಮುದುಕನೊಂದಿಗೆ 20 ರ ಯುವತಿಯ ಮದುವೆ ನೆರವೇರಿದ್ದು, ವರನ ಮುಖ ನೋಡ್ತಿದ್ದಂಗೆ ವಧು ಮೂರ್ಛೆ ಹೋಗಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಅಯ್ಯೋ ದೇವ್ರೇ ಇದೇನಿದು ಎಂದು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Video: ಅಯ್ಯೋ ದೇವ್ರೇ.... 69 ವರ್ಷದ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು
ವೈರಲ್​ ವಿಡಿಯೋ
Edited By:

Updated on: Aug 08, 2024 | 11:30 AM

ಮದುವೆಯಾಗುವ ಹುಡುಗ ಹುಡುಗಿಯ ನಡುವೆ 10-12 ವರ್ಷದ ಅಂತರವಿರುವುದು ಸಾಮಾನ್ಯ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಹುಡುಗಿಯರು ಆ ಮದುವೆಗೆ ಒಲ್ಲೇ ಎನ್ನುತ್ತಾರೆ. ಆದ್ರೆ ಕೆಲವು ಹುಡುಗಿಯರು ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಮನಸ್ಸಿಲ್ಲದಿದ್ದರೂ ತನಗಿಂತ 30-40 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗುವುದುಂಟು. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆ ಕೂಡಾ ನಡೆದಿದೆ. ಜೊತೆಗೆ ಮೊದಲ ಬಾರಿಗೆ ಮದುವೆ ಮಂಟಪದಲ್ಲಿ ಹಣ್ಣು ಮುದುಕನಾಗಿರುವ ವರನನ್ನು ಕಂಡು ವಧು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಸುದ್ದಿಗಳು ಕೂಡಾ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆಯವರೆಲ್ಲರೂ ಸೇರಿ 20 ರ ತರುಣಿಗೆ 69 ವರ್ಷದ ಮುದುಕನೊಂದಿಗೆ ವಿವಾಹ ಮಾಡಿದ್ದು, ಮೊದಲ ಬಾರಿಗೆ ವರನ ಮುಖವನ್ನು ನೋಡಿ ವಧು ಮೂರ್ಛೆ ಹೋಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ಪೋಸ್ಟ್‌ ಒಂದನ್‌ನು Incognito_qfs ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “20 ವರ್ಷದ ಮುಸ್ಲಿಂ ವಧು 69 ವರ್ಷದ ವರನ ಮುಖವನ್ನು ನೋಡಿ ಮೂರ್ಛೆ ಹೋದಳು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಮನೆಯವರೆಲ್ಲರೂ ಯುವತಿಗೆ ವರನ ಮುಖವನ್ನು ತೋರಿಸದೆ ಸಿಂಪಲ್‌ ಆಗಿ ಮದುವೆ ನೆರವೇರಿಸಿದ ದೃಶ್ಯವನ್ನು ಕಾಣಬಹುದು. ಹೀಗೆ ಮದುವೆಯಾದ ನಂತರ ವರನ ಮುಖ ತೋರಿಸುತ್ತಿದ್ದಂತೆ, ವಧು ಮೊದಲ ಬಾರಿಗೆ ತನ್ನ ಪತಿರಾಯನ ಮುಖ ನೋಡಿ ಮೂರ್ಛೆ ಹೋಗಿದ್ದಾಳೆ.

ಇದನ್ನೂ ಓದಿ:  ಈ ದೇಶದಲ್ಲಿ ಜಿರಳೆಗಳ ಬೆಲೆಯಲ್ಲಿ ಭಾರೀ ಏರಿಕೆ; 1 ಕೆಜಿ ಬೆಲೆ ಕೇಳಿದ್ರೆ ಶಾಕ್​​ ಆಗೋದು ಖಂಡಿತಾ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಆಗಸ್ಟ್‌ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲೇ ಹುಡುಗನ ಮುಖವನ್ನು ನೋಡದೆ ಅವಳೇಕೆ ಮದುವೆಗೆ ಒಪ್ಪಿದಳುʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಿಂಗೂ ಉಂಟಾʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ