Video: ಹಾವಿನ ಜತೆಗೆ ಯುವತಿಯ ಚೆಲ್ಲಾಟ, ಮುಂದೇನಾಯ್ತು ನೋಡಿ
ಹಾವುಗಳೆಂದರೆ ಎಲ್ಲರಿಗೂ ಭಯನೇ. ವಿಷಕಾರಿ ಸರ್ಪದ ಹೆಸರು ಕೇಳಿದ ಕೂಡಲೇ ಎಲ್ಲರೂ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಹೀಗಾಗಿರುವ ಯುವತಿಯೊಬ್ಬಳು ಯಾವುದೇ ಭಯವಿಲ್ಲದೇ ಹಾವಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾಳೆ. ಈ ಮೈ ಜುಮ್ ಎನಿಸುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹಾವು (Snakes) ಕಂಡ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಇನ್ನು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟರೆ ಸಾಕು, ಅಲ್ಲಿ ನಿಲ್ಲುವ ಧೈರ್ಯವಂತೂ ಮಾಡಲ್ಲ. ಆದರೆ ಇನ್ನು ಕೆಲವರು ಭಂಡ ಧೈರ್ಯದಲ್ಲಿ ಯಾವುದೇ ಸಾಧನಗಳಿಲ್ಲದೇ ಬರಿಗೈಯಲ್ಲಿ ಹಾವನ್ನು ಹಿಡಿಯುವ ಪ್ರಯತ್ನ ಮಾಡ್ತಾರೆ. ಇದೀಗ ಯುವತಿಯೊಬ್ಬಳು (young woman) ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ. ಕೋಪಗೊಂಡ ಹಾವು ಈ ಯುವತಿಯ ಮೇಲೆ ಪ್ರತಿ ದಾಳಿ ನಡೆಸಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಯುವತಿಯ ವಿರುದ್ಧ ಗರಂ ಆಗಿದ್ದಾರೆ.
ಶ್ವೇತಾ ಸುತರ್ (shweta_wildliferescuer) ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿಯು ಹಾವಿನೊಂದಿಗೆ ಚೆಲ್ಲಾಟ ಆಡುತ್ತಿರುವುದನ್ನು ಕಾಣಬಹುದು. ಯುವತಿಯು ಹಾವಿನ ಬಾಲವನ್ನು ಹಿಡಿಯಲು ಪ್ರಯತ್ನಿಸಿದ್ದು, ಅದು ಆಕೆಯ ಮೇಲೆ ಪ್ರತಿದಾಳಿ ನಡೆಸುತ್ತಿರುವುದನ್ನು ನೋಡಬಹುದು. ಈ ಹಾವನ್ನು ಹಿಡಿಯಲು ಪ್ರಯತ್ನಿಸುವ ಯುವತಿಯ ಕೈಯಲ್ಲಿ ಯಾವುದೇ ಸಾಧನಗಳಿಲ್ಲದಿರುವುದನ್ನು ಗಮನಿಸಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಯಮನನ್ನೇ ಕೈಯಲ್ಲಿ ಹಿಡಿದುಕೊಂಡ ವ್ಯಕ್ತಿ, ನೀವು ತುಂಬಾ ಲಕ್ಕಿ ಎಂದ ನೆಟ್ಟಿಗರು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು, ಇದನ್ನೇ ಸಾವಿನೊಂದಿಗೆ ಆಟವಾಡುವುದು ಎನ್ನುವುದು ಎಂದಿದ್ದಾರೆ. ಮತ್ತೊಬ್ಬರು, ತುಂಬಾ ಅಪಾಯಕಾರಿ ದೃಶ್ಯ ಎಂದು ಹೇಳಿದರೆ, ಇನ್ನೊಬ್ಬರು ದಯವಿಟ್ಟು ಈ ರೀತಿ ಪ್ರಾಣದ ಜತೆಗೆ ಚೆಲ್ಲಾಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
