ಮಧ್ಯಪ್ರದೇಶ: ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೇ, ಆ ಹುಡುಗಿಯನ್ನು ಮೆಚ್ಚಿಸಲು ಏನು ಮಾಡಬೇಕು, ಯಾವ ರೀತಿ ಆಕೆಗೆ ಸಂದೇಶಗಳನ್ನು ಕಳುಹಿಸಬೇಕು ಎಂದು ಬರೆದ ಪೋಸ್ಟರ್ ಹಿಡಿದು ಯುವಕನೊಬ್ಬ ನಡುರಸ್ತೆಯಲ್ಲೇ ನಿಂತಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಾಹಿತಿಯ ಪ್ರಕಾರ, ಈ ವಿಡಿಯೋ ಭೋಪಾಲ್ ನ ಎಂಪಿ ನಗರ ಪ್ರದೇಶಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಒಡೆದ ಸಿಮೆಂಟ್ ಪೈಪಿನ ಮೇಲೆ ಬೋರ್ಡ್ ಹಿಡಿದು ಮುಖ ಮುಚ್ಚಿಕೊಂಡು ಯುವಕ ಹೇಗೆ ನಿಂತಿದ್ದಾನೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.
#WATCH | Bhopal Youth Holds Placard In Public Asking Women For Suggestions On How To Impress A Girl He Likes; Video Goes Viral#BhopalNews #ViralVideo #MadhyaPradesh pic.twitter.com/6ssfO8X1u7
— Free Press Madhya Pradesh (@FreePressMP) September 29, 2024
ಇದನ್ನೂ ಓದಿ: ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ ಆ್ಯಂಕರ್; ಕಾರಣ ಏನು ಗೊತ್ತಾ?
ಈ ಕುರಿತು ಸೆ.29ರಂದು @FreePressMP ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಯುವಕನ ಅವತಾರ ಕಂಡು ದಾರಿಯಲ್ಲಿ ಹೋಗುತ್ತಿದ್ದ ಯುವತಿಯರು ಆಶ್ಚರ್ಯಚಕಿತರಾಗಿ ನೋಡುವುದು ಮತ್ತು ನಗಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ