ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್ನಲ್ಲಿ ಯಾತ್ರೆ ಹೋಗುತ್ತಿದ್ದ ಯುವಕರಿಂದ ಈ ಬಾರಿ ಪುನೀತ್ ಸಮಾಧಿಗೆ ಯಾತ್ರೆ
Hospet: ನಟ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ದೇಶದ ವಿವಿದೆಡೆಯಿಂದ ಅಭಿಮಾನಿಗಳು ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದಾರೆ. ಇದೀಗ ಹೊಸಪೇಟೆಯ 13 ಯುವಕರು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್ ಮೂಲಕ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಹೌದು. ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹೊಸಪೇಟೆಯ (Hospet) ಅಭಿಮಾನಿಗಳು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಯಾತ್ರೆ ಕೈಗೊಂಡಿದ್ದಾರೆ. ಹೊಸಪೇಟೆಯ 13 ಯುವಕರು ‘ಪುನೀತ್ ರಾಜ್ಕುಮಾರ್ ಸರ್ಕಲ್’ನಿಂದ ಪ್ರಯಾಣ ಆರಂಭಿಸಿದ್ದಾರೆ. ಪುನೀತ್ ಮೇಲಿನ ಅಭಿಮಾನ ಹಾಗೂ ಪ್ರೇಮಕ್ಕೆ ಅವರು ಯಾತ್ರೆ ಕೈಗೊಂಡಿದ್ದಾರೆ. ಸ್ಥಳೀಯರು ಯುವಕರ ಪ್ರಯಾಣಕ್ಕೆ ಆಗಮಿಸಿ ಶುಭಕೋರಿದ್ದಾರೆ.
ಇದನ್ನೂ ಓದಿ:
ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ
Loading...
Unable to load recommendations.
Follow Us
