ಚಿಕ್ಕಮಗಳೂರು:15 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ; ಇಲ್ಲಿದೆ ವಿಡಿಯೋ

ಚಿಕ್ಕಮಗಳೂರು:15 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ; ಇಲ್ಲಿದೆ ವಿಡಿಯೋ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 22, 2023 | 8:52 AM

ಬರೊಬ್ಬರಿ 15 ಅಡಿ ಉದ್ದದ 32 ಕೆಜಿ ತೂಕದ ಬೃಹತ್ ಹೆಬ್ಬಾವು(Python) ಇದಾಗಿದ್ದು, ಗ್ರಾಮದ ಗೋಪಾಲ್ ಎಂಬುವರ ಕಾಫಿತೋಟದಲ್ಲಿ ಮಲಗಿದೆ. ಈ ಬೃಹತ್ ಗಾತ್ರದ ಹೆಬ್ಬಾವು ಕಂಡು ಗ್ರಾಮಸ್ಥರು ಭಯಬೀತರಾಗಿದ್ದು, ಕೂಡಲೇ ಉರಗ ಪ್ರೇಮಿ ರಿಜ್ವಾನ್ ಕಳಸ ಅವರು ಬಂದು ಸೆರೆ ಹಿಡಿದಿದ್ದಾರೆ.

ಚಿಕ್ಕಮಗಳೂರು, ಅ.22: ಮನೆಯ ಪಕ್ಕದ ಕಾಫಿತೋಟದಲ್ಲಿ ಮಲಗಿದ್ದ ಹೆಬ್ಬಾವನ್ನು ಸೆರೆ ಹಿಡಿದ ಘಟನೆ ಚಿಕ್ಕಮಗಳೂರು(Chikkamagalur) ಜಿಲ್ಲೆಯ ಕಳಸ ತಾಲೂಕಿನ ಗೋಡ್ಲಮನೆ ಗ್ರಾಮದಲ್ಲಿ ನಡೆದಿದೆ. ಹೌದು, ಬರೊಬ್ಬರಿ 15 ಅಡಿ ಉದ್ದದ 32 ಕೆಜಿ ತೂಕದ ಬೃಹತ್ ಹೆಬ್ಬಾವು(Python) ಇದಾಗಿದ್ದು, ಗ್ರಾಮದ ಗೋಪಾಲ್ ಎಂಬುವರ ಕಾಫಿತೋಟದಲ್ಲಿ ಮಲಗಿದೆ. ಈ ಬೃಹತ್ ಗಾತ್ರದ ಹೆಬ್ಬಾವು ಕಂಡು ಗ್ರಾಮಸ್ಥರು ಭಯಬೀತರಾಗಿದ್ದು, ಕೂಡಲೇ ಉರುಗ ಪ್ರೇಮಿ ರಿಜ್ವಾನ್ ಕಳಸ ಅವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅವರು ಹರಸಾಹಸ ಪಟ್ಟು ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ