AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು

ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು

ಸುಷ್ಮಾ ಚಕ್ರೆ
|

Updated on: Nov 20, 2024 | 9:45 PM

ಹೊರಗೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಅಮಾಯಕ ಬಾಲಕಿ ಗೋಡೆಗೆ ವಾಲಿಸಿಟ್ಟಿದ್ದ ಕಬ್ಬಿಣದ ಗೇಟ್ ಹಿಡಿದು ಮೇಲೆ ಹತ್ತಲು ಪ್ರಯತ್ನಿಸಿದ್ದಾಳೆ. ಆಗ ಆ ಗೇಟ್ ಆಕೆಯ ಮೇಲೆ ಬಿದ್ದು ಆ ಮಗು ಸಾವನ್ನಪ್ಪಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಲೂಧಿಯಾನದ ಮಚಿವಾರ ಸಮೀಪದ ಹಿಯಾತ್‌ಪುರ ಗ್ರಾಮದ ಮನೆಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗು ಹೊರಗೆ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಗೇಟ್‌ನ ಕೆಳಗೆ ಸಿಲುಕಿ ಮೃತಪಟ್ಟಿದ್ದಾಳೆ. ಮೃತ ಬಾನಿ ಕೌರ್ ತಂದೆ ದರ್ಶನ್ ಸಿಂಗ್ ವಿಚ್ಛೇದನ ಪಡೆದಿದ್ದರು. ಬಳಿಕ ದರ್ಶನ್ ಸಿಂಗ್ ಜೀವನೋಪಾಯಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಬಾನಿಯನ್ನು ಆಕೆಯ ಅಜ್ಜಿ ನೋಡಿಕೊಳ್ಳುತ್ತಿದ್ದರು.

ಒಂದೂವರೆ ವರ್ಷದ ಬಾನಿ ಅಂಗಳದಲ್ಲಿ ಆಡುತ್ತಿದ್ದಳು. ಆಗ ಆಟವಾಡುತ್ತಾ ಗೇಟ್ ಹತ್ತಲು ಪ್ರಾರಂಭಿಸಿದಳು. ಈ ಸಮಯದಲ್ಲಿ ಗೇಟ್ ಅವಳ ಮೇಲೆ ಬಿದ್ದು ಅದರ ಅಡಿಯಲ್ಲಿ ಆಕೆ ಸಿಲುಕಿದ ಕಾರಣ ಅವಳು ಸಾವನ್ನಪ್ಪಿದಳು. ಈ ಶಾಕಿಂಗ್ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮನೆಗೆ ಟೈಲ್ಸ್ ಹಾಕುತ್ತಿದ್ದ ಕಾರಣದಿಂದ ಗೇಟ್ ಅನ್ನು ಬಿಚ್ಚಿ ಗೋಡೆಗೆ ವಾಲಿಸಿ ಇಡಲಾಗಿತ್ತು. ಬಾನಿ ಕೂಗಿಕೊಂಡು ಧ್ವನಿಯನ್ನು ಕೇಳಿದ ಮೇಸ್ತ್ರಿಗಳು ಬಾನಿಯನ್ನು ಕಬ್ಬಿಣದ ಗೇಟ್‌ನ ಕೆಳಗಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಿ ಆ ಮಗು ಮೃತಪಟ್ಟಿತ್ತು.

ಈ ವಿಡಿಯೋ ನೋಡಿದ ಜನರು ತುಂಬಾ ಭಯಗೊಂಡಿದ್ದಾರೆ. ಬಾಲಕಿಯ ಕುಟುಂಬಸ್ಥರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಎಂದಿಗೂ ಒಂಟಿಯಾಗಿರಲು ಬಿಡಬೇಡಿ. ನೀವು ಸುರಕ್ಷಿತವೆಂದುಕೊಂಡ ಸ್ಥಳವೇ ಕೆಲವೊಮ್ಮೆ ನಿಮ್ಮ ಮಕ್ಕಳ ಜೀವಕ್ಕೆ ಆಪತ್ತು ಉಂಟುಮಾಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ