ಬೆಂಗಳೂರು ಗ್ರಾಮಾಂತರ: ಅಯ್ಯೋ! ಬರೋಬ್ಬರಿ 33 ಲಕ್ಷ ಮೌಲ್ಯದ ಎಣ್ಣೆ ಚರಂಡಿ ಪಾಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2023 | 6:18 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಅಧಿಕಾರಿಗಳು 1272 ಬಾಕ್ಸ್​ಗಳಲ್ಲಿದ್ದ ಬಿಯರ್ ಬಾಟೆಲ್​ಗಳನ್ನು ಕೆಎಸ್​ಬಿಸಿಎಲ್ ಮದ್ಯ ಮಳಿಗೆಯಲ್ಲಿ ಸಂಪೂರ್ಣ ನಾಶ ಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ಸೆ.03: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಬಾಶೆಟ್ಟಿಹಳ್ಳಿ ಬಳಿ ಅಕ್ರಮವಾಗಿ ಮದ್ಯ (Alcohol)ಮಾರಾಟ ಮಾಡುವ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ 33 ಲಕ್ಷ ರೂ. ಮೌಲ್ಯದ ಬಿಯರ್ ವಶ ಪಡೆಸಿಕೊಂಡಿದ್ದು,​ 1272 ಬಾಕ್ಸ್​ಗಳಲ್ಲಿದ್ದ ಬಿಯರ್ ಬಾಟೆಲ್​ಗಳನ್ನು ಕೆಎಸ್​ಬಿಸಿಎಲ್ ಮದ್ಯ ಮಳಿಗೆಯಲ್ಲಿ ಸಂಪೂರ್ಣ ನಾಶ ಪಡಿಸಿದ್ದಾರೆ. ಹೌದು, ಬಾಟಲ್​ಗಳನ್ನು ಓಪನ್ ಮಾಡಿ ಅಧಿಕಾರಿಗಳು ಚರಂಡಿಗೆ ಬಿಟ್ಟಿದ್ದಾರೆ. ಬಿಯರ್ ಬಾಟಲ್​ಗಳ ನಿಗದಿತ ಅವಧಿ ಮುಗಿದ‌‌ ಕಾರಣ ನಾಶ ಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ